ರಸ್ತೆಗಾಗಿ ಅಧಿಕಾರಿಗಳನ್ನು ಬೀದಿಗಿಳಿಸಿದ ಹಾಸನದ ವನಿತೆಯರು!!

ಆ ಗ್ರಾಮದ ರಸ್ತೆ ಹದಗೆಟ್ಟು ಹೋಗಿತ್ತು. ಆದರೇ ಅಲ್ಲಿನ ಜನಪ್ರತಿನಿಧಿ ಮಾತ್ರ ಸ್ಪಂದಿಸುವ ಮನಸ್ಸು ಮಾಡಿರಲಿಲ್ಲ. ನಡೆದುಕೊಂಡು ಹೋಗೋದಿಕ್ಕು ಸಾಧ್ಯವಾಗದ ರಸ್ತೆಯಲ್ಲಿ ಓಡಾಡಿ ಜನರು ಬೇಸತ್ತು ಹೋಗಿದ್ದರು. ಇದಲ್ಲದೇ ಬಿಡದೆ ನಡೆಯುತ್ತಿದ್ದ ಆನೆ ದಾಳಿ ರೈತರನ್ನು ಕಂಗೆಡಿಸಿತ್ತು. ಎಂ.ಎಲ್​.ಎ ಮುಂದೇ ತಮ್ಮ ಅಹವಾಲು ತೋಡಿಕೊಂಡು ಬೇಸತ್ತ ಮಹಿಳೆಯರು ಕೊನೆಗೆ ನೇರವಾಗಿ ಪ್ರತಿಭಟನೆಗೆ ಮುಂಧಾಗಿದ್ರು. ಬೀದಿಗೆ ಬಂದ ಮಹಿಳೆಯರ ರೌದ್ರಾವತಾರ ಕಂಡು ಅಧಿಕಾರಿಗಳು ಕಂಗಾಲಾದ್ರು.


ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹೆತ್ತೂರು, ಯಸಲೂರು, ಐಗೂರು ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಮಾರು 32ಕ್ಕೂ ರಸ್ತೆಗಳು ಸಂಪೂರ್ಣವಾಗಿ ಹದೆಗೆಟ್ಟಿದ್ದು, ವಾಹನಗಳಲ್ಲಿ ಓಡಾಡೋದು ಇರಲಿ, ನಡೆದುಕೊಂಡು ಹೋಗುವುದಕ್ಕೂ ಸಾಧ್ಯವಾಗದ ಪರಿಸ್ಥಿತಿಯಲ್ಲಿ ಇವೆ. ಹಲವಾರು ವರ್ಷಗಳಿಂದ ಈ ಭಾಗದ ರಸ್ತೆಗಳು ಹದೆಗೆಟ್ಟಿದ್ರೂ ಕೂಡ ಈ ಭಾಗದ ಶಾಸಕರಾಗಿರೋ ಹೆಚ್​.ಕೆ ಕುಮಾರಸ್ವಾಮಿಯವರ ದಿವ್ಯ ನಿರ್ಲಕ್ಷ್ಯ ಜನಸಾಮಾನ್ಯರ ಕೆಂಗಣ್ಣಿಗೆ ಗುರಿಯಾಗಿದೆ.


ಪ್ರತಿದಿನ ಈ ಭಾಗದ ಜನರು ಸಮಸ್ಯೆ ಅನುಭವಿಸ್ತಾ ಇದ್ರೂ ಕೂಡ ಸ್ಥಳೀಯ ಶಾಸಕರಾದ ಹೆಚ್.ಕೆ ಕುಮಾರಸ್ವಾಮಿಯವರ ವಿರುದ್ಧ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು. ಅಷ್ಟೇ ಅಲ್ಲ ಶಿಥಿಲಗೊಂಡಿರುವ ಸೇತುವೆ ಮೇಲೆ ನಿಂತು ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಷ್ಟೇ ಅಲ್ಲ ಹಾಳಾದ ರಸ್ತೆ ನೋಡಲು ಬನ್ನಿ ಎಂದು ಅಧಿಕಾರಿಗಳನ್ನು ಕರೆದ್ರೆ ಬರಲು ನಿರಾಕರಿಸಿದ್ದಾರೆ. ಇದರಿಂದ ಕೆರಳಿದ ಮಹಿಳೆಯರು ಪ್ರತಿಭಟನೆ ನಡೆಸಿ ಒತ್ತಾಯವಾಗಿ ಅಧಿಕಾರಿಗಳನ್ನು ತಮ್ಮ ರಸ್ತೆಯಲ್ಲಿ ನಡೆದು ಪರಿಶೀಲಿಸುವಂತೆ ಒತ್ತಾಯಿಸಿ ರಸ್ತೆಯಲ್ಲಿ ನಡೆಸಿ ಸ್ಥಿತಿ-ಗತಿಯನ್ನು ಮನವರಿಕೆ ಮಾಡಿಕೊಟ್ಟರು.

Watch Here:  https://youtu.be/pwnWieCCZcs