ಪಿಎಸ್​​ಐ ಪತ್ನಿಯ ವಿಚ್ಛೇದನ ಪ್ರಹಸನ!!

ವಿಚ್ಛೇದನ ಪಡೆದ ಪತ್ನಿ ಮತ್ತೆ ಮೊದಲ ಪತಿಗೆ ಕಿರುಕುಳ ನೀಡಿ ಅವಾಂತರ ಸೃಷ್ಟಿಸಿದ ಘಟನೆ ಹಾವೇರಿಯಲ್ಲಿ ನಡೆದಿದೆ. ಪಿಎಸ್​ಐ ಪತಿಯಿಂದ ವಿಚ್ಛೆದನ ಪಡೆದ ಪತ್ನಿ ಮತ್ತೆ ದುಡ್ಡಿನಾಸೆಗೆ ಮೊದಲ ಪತಿ ಮನೆ ಮುಂದೇ ರಂಪ -ರಾಮಾಯಣ ಮಾಡಿ ಕಿರಿ-ಕಿರಿ ಉಂಟು ಮಾಡಿದ್ದಾಳೆ ಎನ್ನಲಾಗಿದೆ.


ರಾಣೆಬೆನ್ನೂರಿನ ಪಿಎಸ್​ಐ ಮಂಜಪ್ಪನವರಿಗೆ ಸ್ವಪ್ನಾ ಎಂಬಾಕೆಯ ಜೊತೆ ವಿವಾಹವಾಗಿತ್ತು. ಆದರೇ ಹೊಂದಾಣಿಕೆಯಾಗದ ಕಾರಣ ಸ್ವಪ್ನಾ ಹಾಗೂ ಮಂಜಪ್ಪ ನ್ಯಾಯಾಲಯದಲ್ಲಿ ವಿಚ್ಛೆದನ ಪಡೆದುಕೊಂಡಿದ್ದಾರೆ. ಆದರೇ ಇದೀಗ ಮತ್ತೆ ವಿನಾಕಾರಣ ಮಾಜಿ ಪತಿ ವಿರುದ್ಧ ಖ್ಯಾತೆ ತೆಗೆದಿರುವ ಸ್ವಪ್ನಾ ಸಂಬಂಧಿಕರ ಜೊತೆ ಮಾಜಿ ಪತಿ ಮನೆ ಎದುರು ಧರಣಿ ನಡೆಸಿದ್ದಾಳೆ.

 


ಸ್ವಪ್ನಾ ಪತಿಗೆ ಡಿವೋರ್ಸ್​ ನೀಡಿದ್ದರಿಂದ ಆತನ ಎರಡನೇ ಮದುವೆಯಾಗಿದ್ದ ಎನ್ನಲಾಗಿದೆ. ಇದರಿಂದ ಕೋಪಗೊಂಡ ಸ್ವಪ್ನಾ ಬೇರೆ ಹೆಣ್ಣಿನ ಜೊತೆ ಸಂಬಂಧವಿಟ್ಟುಕೊಳ್ಳದಂತೆ ಆಗ್ರಹಿಸಿ ಅವಾಂತರ ಮಾಡಿದ್ದಾಳೆ. ಈಕೆಗೆ ಈಗಾಗಲೇ ವಿಚ್ಛೇದನ ಹಾಗೂ ಪರಿಹಾರದ ಹಣ ನೀಡಲಾಗಿದೆ. ಹೀಗಿದ್ದರೂ ಆಕೆ ಪತಿ ಉದ್ಯೋಗ ನೋಡಿ ಮತ್ತಷ್ಟು ದುಡ್ಡಿನಾಸೆಗೆ ಹೀಗೆ ಮನೆ ಗಲಾಟೆ ಮಾಡುತ್ತಿದ್ದಾಳೆ ಎಂದು ಪಿಎಸ್​ಐ ಮಂಜಪ್ಪ ಆರೋಪಿಸಿದ್ದಾರೆ. ಒಟ್ಟಿನಲ್ಲಿ ಗಂಡ-ಹೆಂಡತಿ ಜಗಳ ಬೀದಿಗೆ ಬಂದಿದ್ದು, ಸ್ವಪ್ನಾ ಸಂಬಂಧಿಕರು ಪಿಎಸ್​ಐ ಹಲ್ಲೆ ನಡೆಸಿ ಕ್ರೌರ್ಯ ಮೆರೆದಿದ್ದಾರೆ.

Watch Here: https://youtu.be/Y0gAWDqTI4M