ನಂದಿತಪ್ಪಲಲ್ಲಿ ಖುಲ್ಲಂಖುಲ್ಲ ಹುಕ್ಕಾದಂಧೆ!!

ಬೆಂಗಳೂರಿನ ಹೊರವಲಯದ ನಂದಿಬೆಟ್ಟ ಯುವಜನತೆಯ ಫೆವರಿಟ್​​​ ಪ್ಲೇಸ್. ವಿಕೇಂಡ್​ ಬಂತು ಅಂದ್ರೆ ಯುವಜೋಡಿಗಳು ನಂದಿಬೆಟ್ಟದತ್ತ ಮುಖ ಮಾಡುತ್ತವೆ. ಹೀಗೆ ಬರುವ ಯುವಜೋಡಿಗಳಿಗೆ ಇಲ್ಲೊಂದು ಅನೈತಿಕ ಲೋಕವೇ ಕಾದಿರುತ್ತೇ ಅಂದ್ರೆ ತಪ್ಪಾಗಲಿಕ್ಕಿಲ್ಲ. ಹೀಗೆ ನಂದಿ ತಪ್ಪಲಿನಲ್ಲಿ ಅಕ್ರಮ ಹುಕ್ಕಾ ಬಾರ್​ಗಳ ಎಗ್ಗಿಲ್ಲದೇ ಕಾರ್ಯನಿರ್ವಹಿಸುತ್ತಿರೋ ದೃಶ್ಯಗಳು ಬಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

adನೂರಾರು ಹುಕ್ಕಾ ಬಾರ್​ಗಳು ನಿಯಮಗಳನ್ನು ಗಾಳಿಗೆ ತೂರಿ ಖುಲ್ಲಂ ಖುಲ್ಲ ಯುವಜನತೆಗೆ ಮಾದಕದ್ರವ್ಯಗಳ ಚಟ ಹತ್ತಿಸುವಲ್ಲಿ ನಿರತವಾಗಿದೆ. ನಂದಿ ಬೆಟ್ಟದ ತಪ್ಪಲಿನಲ್ಲಿರುವ ಹಿಲ್ಸ್ ಡ್ರೈವ್ ಸೇರಿದಂತೆ ಹಲವೆಡೆ ಕಳೆದ ಹಲವು ತಿಂಗಳುಗಳಿಂದ ದಂಧೆ ನಡೆಯುತ್ತಿದ್ದು, ನಂದಿಗೆ ಬರುವ ಯುವಕ ಯುವತಿಯರು ಹುಕ್ಕಾಗೆ ದಾಸರಾಗುತ್ತಿದ್ದಾರೆ.
ಚಿಕ್ಕ ಡಾಬಾದಂತಹ ಪ್ರದೇಶದಲ್ಲಿ ಹುಕ್ಕಾ ದಂಧೆ ನಿರಾಯಾಸವಾಗಿ ನಡೆದಿದ್ದು, ಇಲ್ಲಿಗೆ ಬರುವ ಯುವಜನತೆ ಹಗಲು-ರಾತ್ರಿಯೆನ್ನದೇ ನಶೆಯಲ್ಲಿ ತೇಲಾಡುತ್ತಿದ್ದಾರೆ.

ಈ ಹುಕ್ಕಾ ದಂಧೆಯ ಎಕ್ಸಕ್ಲೂಸಿವ್ ವಿಡಿಯೋಗಳು ಬಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆದರೇ ಈ ಬಗ್ಗೆ ಕ್ರಮಕೈಗೊಳ್ಳಬೇಕಾದ ಪೊಲೀಸರು ಮಾತ್ರ ಕಣ್ಮುಚ್ಚಿ ಕೂತಿದ್ದಾರೆ. ಇನ್ನು ಈ ಹುಕ್ಕಾ ಎಫೆಕ್ಟ್​ನಿಂದಲೇ ನಂದಿ ಹಿಲ್ಸ್​ ಹಾಗೂ ಚಿಕ್ಕಬಳ್ಳಾಪುರ- ದೊಡ್ಡಬಳ್ಳಾಪುರ ರಸ್ತೆಯಲ್ಲಿ ಅಪಘಾತಗಳ ಸಂಖ್ಯೆ ಕೂಡಾ ಹೆಚ್ಚುತ್ತಿದ್ದರೂ ಇಲಾಖೆ ತಲೆಕೆಡಿಸಿಕೊಂಡಿಲ್ಲ. ಹೀಗಾಗಿ ಈ ಅಕ್ರಮ ಹುಕ್ಕಾ ದಂಧೆಗೆ ಪೊಲೀಸರ ಕುಮ್ಮಕ್ಕು ಇದೆ ಎಂಬ ಅನುಮಾನವೂ ಸಾರ್ವಜನಿಕ ವಲಯದಿಂದ ವ್ಯಕ್ತವಾಗುತ್ತಿದೆ.