ಅಕ್ರಮವಾಗಿ ಸಾಗಿಸುತ್ತಿದ್ದ 22 ಲಕ್ಷ ರೂಪಾಯಿ ಜಪ್ತಿ ಮಾಡಿದ ಚುನಾವಣಾ ಅಧಿಕಾರಿಗಳು.. ಹಣ ಹಾಗೂ ಕಾರು ವಶಕ್ಕೆ…!

Police Raid Illegal 22 Lakhs Cash at Car
Police Raid Illegal 22 Lakhs Cash at Car

ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಅಕ್ರಮ ನಡೆಯದಂತೆ ಚುನಾವಣಾ ಆಯೋಗ ಹದ್ದಿನ ಕಣ್ಣಿಟ್ಟಿದೆ.

ad

ಹುಬ್ಬಳ್ಳಿಯಲ್ಲಿ ಅಧಿಕಾರಿಗಳು ವಾಹನವನ್ನು ಪರಿಶೀಲನೆ ನಡೆಸಿದಾಗ ಅಕ್ರಮವಾಗಿ ಸಾಗಿಸುತ್ತಿದ್ದ 22 ಲಕ್ಷ ರೂಪಾಯಿ ಹಣ ಸಿಕ್ಕಿದೆ….ಅಂದ ಹಾಗೇ ಹುಬ್ಬಳ್ಳಿಯ ಹೊರವಲಯದ ಗಬ್ಬೂರ ಕ್ರಾಸ್ ಬಳಿ ಚುನಾವಣಾ ಹಿನ್ನಲೆಯಲ್ಲಿ ಚಕ್ ಪೋಸ್ಟ್ ತೆರೆಯಲಾಗಿದೆ. ಇಲ್ಲಿ ವಾಹನಗಳು ಪರಿಶೀಲನೆ ನಡೆಸುವಾಗ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಿಂದ ಹುಬ್ಬಳ್ಳಿಗೆ ಇಂಡಿಗೋ ಕಾರಿನಲ್ಲಿ 22 ಲಕ್ಷ ರೂಪಾಯಿ ಸೂಕ್ತ ದಾಖಲೆಗಳು ಇಲ್ಲದೆ ಹಣ ಸಾಗಿಸಲಾಗುತ್ತಿತ್ತು. ಚಕ್ ಪೋಸ್ಟ್ ನಲ್ಲಿದ್ದ ಸಿಬ್ಬಂದಿಗಳು ಚುನಾವಣಾ ಅಧಿಕಾರಿಗಳಾದ ಸಹಾಯ ಆಯುಕ್ತ ಮಹ್ಮದ ಜುಬೇರ ತಹಶಿಲ್ದಾರ ಶಶಿಧರ ಮಾಡ್ಯಾಳ ಅವರಿಗೆ ಮಾಹಿತಿ ನೀಡಿದ್ದಾರೆ ಸ್ಥಳಕ್ಕೆ ಬಂದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಆಗ ಅಕ್ರಮ ಹಣದ ರಹಸ್ಯ ಬಯಲಾಗಿದೆ.

ಗದಗ ಜಿಲ್ಲೆ‌ ಲಕ್ಷ್ಮೇಶ್ವರ ಪಟ್ಟಣದ ಕೆನರಾ ಬ್ಯಾಂಕ್ ನಿಂದ ಹುಬ್ಬಳ್ಳಿಯ ಕೆನರಾ ಬ್ಯಾಂಕ್ ಹಣವನ್ನು ಸಾಗಿಸುತ್ತಿತ್ತು. ಆದ್ರೆ ಯಾವದೇ ಸೂಕ್ತ ದಾಖಲೆಗಳು‌ ಲಕ್ಷಾಂತರ ರೂಪಾಯಿ ಹಣವನ್ನು ಸಾಗಿಸಲಾಗುತ್ತಿತ್ತು. ಹಾಗಾಗಿ ಅಧಿಕಾರಿಗಳು ಹಣ ಹಾಗೂ ವಾಹನವನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸಿದ್ದಾರೆ.. ಈ ಹಣ ನಿಜವಾಗಿಯೂ ಬ್ಯಾಂಕ್ ಗೆ ಸೇರಿದ್ದು ಅಥವಾ ಚುನಾವಣಾ ಹಿನ್ನಲೆಯಲ್ಲಿ ಸಾಗಿಸಲಾಗುತ್ತಿತ್ತು ಎನ್ನುವ ಬಗ್ಗೆ ಅಧಿಕಾರಿಗಳು ತನಿಖೆ ನಡೆಸಿದ ಬಳಿಕ‌ ಹಣದ ರಹಸ್ಯ ಬಯಲಾಗಬೇಕಾಗಿದೆ..

 

ಹುಬ್ಬಳ್ಳಿ- ಮಂಜು ಪತ್ತಾರ…!