ಪತ್ನಿಯ ಪೇಸ್ ಬುಕ್ ಬಾಯ್ ಪ್ರೆಂಡ್ ನನ್ನು ಕೊಂದ ಪತಿ- ಅನೈತಿಕ ಸಂಬಂಧಕ್ಕೆ ಬಲಿಯಾದ ಜೀವ! //Husband kills wife’s Facebook boyfriend-Due to extramarital affair one looses their life

 

ad


ಫೇಸ್​ಬುಕ್​ನಲ್ಲಾದ​ ಪರಿಚಯ ಕೊಲೆಯಲ್ಲಿ ಅಂತ್ಯವಾಗಿರೋ ಘಟನೆ ಶಿವಮೊಗ್ಗದ ಶಿಕಾರಿಪುರದಲ್ಲಿ ನಡೆದಿದೆ. ಹೆಂಡ್ತಿಯೊಂದಿಗೆ ಫೇಸ್​ಬುಕ್​ನಲ್ಲಿ ಫ್ರೆಂಡ್​ ಆಗಿ ಪತ್ನಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಹಿನ್ನೆಲೆಯಲ್ಲಿ ಪತಿಯೇ ಪತ್ನಿಯ ಪೇಸ್​ಬುಕ್​ ಪ್ರೆಂಡ್​​ನನ್ನು ಹತ್ಯೆಗೈಯ್ದಿದ್ದಾನೆ. ‘
28 ವರ್ಷದ ಸಂಜಯ್​ಕುಮಾರ್ ಕೊಲೆಯಾದ ಯುವಕ. ಹರೀಶ್ ಬಾಬು ಎಂಬಾತನೆ ಕೊಲೆ ಮಾಡಿದ ಆರೋಪಿ. ಹರೀಶ್ ಬಾಬು ಪತ್ನಿಯೊಂದಿಗೆ ಪೇಸ್​ಬುಕ್​ನಲ್ಲಿ ಸ್ನೇಹ ಹೊಂದಿದ್ದ ಸಂಜಯಕುಮಾರ್, ಆಕೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು ಆವಿಡಿಯೋವನ್ನು ಸಾಮಾಜಿಕ ಜಾಲತಾಣಗಳಿಗೆ ಅಪಲೋಡ್ ಮಾಡಿದ್ದ.

 

 

 

 

 

ಈ ಹಿಂದೆಯೂ ಇವರಿಬ್ಬರ ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಗೆ ಪತಿ ದೂರು ನೀಡಿದ್ದ. ಈ ವೇಳೆ ಪೊಲೀಸರು ಕರೆಯಿಸಿ ಮೂರು ನಾಲ್ಕು ಬಾರಿ ಸಂಧಾನ ಮಾಡಿದ್ದರು. ಆದರೇ ಆರೋಪಿ ಸಂಜಯ್ ಕುಮಾರ್ ಹಾಗೂ ಪತ್ನಿ ಅನೈತಿಕ ಸಂಬಂಧ ಮುಂದುವರಿದಿತ್ತು. ಇದಕ್ಕೆ ಬೇಸತ್ತ ಹರೀಶ್ ಕೆಲ ದಿನಗಳ ಹಿಂದೆ ಸಂಜಯನನ್ನು ಕರೆಸಿ ಸ್ನೇಹಿತರ ಜೊತೆ ಹಲ್ಲೆ ಮಾಡಿ ಕೊಂದು ಹೂತುಹಾಕಿದ್ದ ಎನ್ನಲಾಗಿದೆ. ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.