ಆಸ್ತಿಗಾಗಿ ನನ್ನ ಕೊಲೆ ಮಾಡ್ತಾರೆ- ಪೊಲೀಸರ ಎದುರು ಉದ್ಯಮಿ ಪತ್ನಿ ಅಳಲು!

Husband try to Murder His Wife for Property matter.
Husband try to Murder His Wife for Property matter.

ಆತ ಹೆಸರಾಂತ ಉದ್ಯಮಿ. ಆದರೇ ಒಂದು ಮದುವೆಯಾಗೋ ಬದಲು ಎರಡೇರಡು ಮದುವೆಯಾಗಿದ್ದ.

ad

ಹೀಗಾಗಿ ಸಹಜವಾಗಿಯೇ ಎರಡು ಹೆಂಡಿರ ನಡುವೆ ಗಲಾಟೆ ಆರಂಭವಾಗಿತ್ತು. ಆದರೇ ಇದೀಗ ಎರಡನೇ ಹೆಂಡತಿ ಮೊದಲ ಹೆಂಡತಿ ಹಾಗೂ ಗಂಡ,ಮಕ್ಕಳ ವಿರುದ್ಧ ತಿರುಗಿ ಬಿದ್ದಿದ್ದಾಳೆ ಅಷ್ಟೇ ಅಲ್ಲ ನನ್ನ ಕೊಲೆಗೆ ಸಂಚು ನಡೆದಿದೆ ಎಂದು ಆರೋಪಿಸಿದ್ದಾಳೆ.  ಹೌದು ತುಲೀಪ್ಸ್​ ರೆಸಾರ್ಟ್​​ ಹಾಗೂ ಆಸ್ಟೀನ್​ ಕಾಲೇಜು ಮಾಲೀಕ ಶ್ರೀಕುಮಾರ್​​ ಎಂಬಾತ ವಿರುದ್ಧ ಎರಡನೇ ಪತ್ನಿ ದೀಪಾ ಕೊಲೆಗೆ ಸುಫಾರಿ ನೀಡಿರುವ ಆರೋಪ ಕೇಳಿಬಂದಿದೆ. ಆಸ್ತಿಗಾಗಿ ತನ್ನ ಪತಿ ಶ್ರೀಕುಮಾರ್ ಆತನ ಮೊದಲ ಪತ್ನಿ, ಪುತ್ರಿ ಹಾಗೂ ಅಳಿಯನಿಂದ ಸಂಚು ನಡೆದಿದೆ ಎಂದು ದೀಪಾ ಆರೋಪಿಸಿದ್ದಾರೆ.

 

 

ಅಲ್ಲದೇ ನನ್ನನ್ನು ಆಸ್ತಿಗಾಗಿ ಕೊಲ್ಲಿಸಲು ಜನವರಿ 21 ರಂದು ಹಲ್ಲೆ ಕೂಡ ನಡೆಸಲಾಗಿದೆ ಎಂದು ದೀಪಾ ಕೋಣನಕುಂಟೆ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕೋಣನಕುಂಟೆ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಇನ್ನೊಂದೆಡೆ ಆಸ್ತಿ ಕಿತ್ತಾಟ ಪೊಲೀಸ್ ಠಾಣೆ ಮೆಟ್ಟಿಲೇರಿರೋದರಿಂದ ಉದ್ಯಮಿ ಹಾಗೂ ಆತನ ಹೆಸರಾಂತ ಉದ್ಯಮಿ ಶ್ರೀಕುಮಾರ್​ ಕುಟುಂಬಸ್ಥರು ನಾಪತ್ತೆಯಾಗಿದ್ದು ಪೊಲೀಸರು ಹುಡುಕಾಟ ನಡೆಸಿದ್ದಾರೆ. ಒಟ್ಟಿನಲ್ಲಿ ಎರಡು ಹೆಂಡಿರ ನಡುವೆ ಗಂಡ ಪರದಾಡುವಂತಾಗಿದ್ದು, ಕುಟುಂಬದ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿದೆ.