ಲೋಕ ಚುನಾವಣೆ ಹೊತ್ತಿನಲ್ಲೇ ಬೆಂಗಳೂರು, ಹಾವೇರಿಯಲ್ಲಿ ಏಕಕಾಲಕ್ಕೆ ಬೃಹತ್​​​​​ ಐಟಿ ದಾಳಿ

ಲೋಕ ಚುನಾವಣೆ ಹೊತ್ತಿನಲ್ಲೇ ಬೃಹತ್​​​​​ ಐಟಿ ದಾಳಿ ನಡೆದಿದ್ದು. ಬೆಂಗಳೂರು, ಹಾವೇರಿಯಲ್ಲಿ ಏಕಕಾಲಕ್ಕೆ ದಾಳಿ ಮಾಡಿ ಕೋಟಿ ಕೋಟಿ ರೂಪಾಯಿ ಹಣ ವಶಪಡಿಸಿಕೊಳಲಾಗಿದೆ. ಗ್ರಾಮೀಣಾಭಿವೃದ್ಧಿ ಇಲಾಖೆ ಎಕ್ಸ್​ಕ್ಯೂಟಿವ್​ ಎಂಜಿನಿಯರ್​​ ನಾರಾಯಣಗೌಡ ಪಾಟೀಲ್ ಈಗ ಐಟಿ ಹಗರಣದಲ್ಲಿ ಸಿಲುಕಿದ್ದಾರೆ.

ಗುತ್ತಿಗೆದಾರರಿಂದ ಕೋಟಿ ಕೋಟಿ ಹಣ ಪಡೆಯುತ್ತಿದ್ದ ನಾರಾಯಣಗೌಡ ಪಾಟೀಲ್ ಬೆಂಗಳೂರಿನ ಆನಂದ್ ರಾವ್ ಸರ್ಕಲ್ ನಲ್ಲಿರುವ ಖಾಸಗಿ ಹೋಟೆಲ್ ನ 2 ಕೋಣೆಗಳಲ್ಲಿ ಸಂಗ್ರಹಿಸಿಟ್ಟಿದ್ದರು.

ಅಲ್ಲದೇ ಈ ಕಲೆಕ್ಷನ್ ರಾಜಕಾರಣಿಗಳಿಗೆ ಚುನಾವಣೆ ಖರ್ಚಿಗೆಂದೇ ಮಾಡಲಾಗುತ್ತಿತ್ತು ಎಂಬ ಮಾಹಿತಿಯೂ ಲಭ್ಯವಾಗಿದೆ. ಆದರೆ ಈ ಗ್ರಾಮೀಣಾಭಿವೃದ್ಧಿ ಅಧಿಕಾರಿಯ ಮೇಲೆ ಕಣ್ಣಿಟ್ಟಿದ್ದ ಐಟಿ ಅಧಿಕಾರಿಗಳು ಬೆಂಗಳೂರು ಮತ್ತು ಹಾವೇರಿಯಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದರು.

ದಾಳಿ ನಡೆಸಿದ ಅಧಿಕಾರಿಗಳಿಗೆ ಬೆಂಗಳೂರಿನ ಹೋಟೆಲ್ ರೂಮಿನಲ್ಲಿ 2 ಕೋಟಿ ರೂಪಾಯಿಗೂ ಹೆಚ್ಚು ಹಣ ಸಿಕ್ಕಿದ್ದರೆ, ಹಾವೇರಿಯ ಮನೆಯಲ್ಲಿ 25 ಲಕ್ಷ ರೂಪಾಯಿಗೂ ಹೆಚ್ಚು ನಗದು ಲಭಿಸಿದೆ. ಇನ್ನು ಐಟಿ ದಾಳಿಯ ಸುಳಿವು ಸಿಗುತ್ತಿದ್ದಂತೆ ಹೊಟೇಲ್ ನಲ್ಲಿದ್ದ ನಾರಾಯಣಗೌಡ ಪರಾರಿಯಾಗಿದ್ದು  ಅವರ ಕಾರ್ ಡ್ರೈವರ್ ನನ್ನು ಬಂಧಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಆರ್​ಡಿಪಿಆರ್​ ಇಲಾಖೆಯ 6 ವಿಭಾಗಗಳಿಂದ 100 ಕೋಟಿ ಸಂಗ್ರಹಕ್ಕೆ ಪ್ಲಾನ್ ಮಾಡಲಾಗಿದ್ದು.​​ನೀರು ಸರಬರಾಜು, ಗ್ರಾಮೀಣ ಎಂಜಿನಿಯರ್​, ಕೆಐಆರ್​ಡಿಎಲ್​​ ಸೇರಿ 6 ಇಲಾಖೆಗಳಿಂದ ಹಣ ಸಂಗ್ರಹ ಮಾಡಲಾಗಿದೆ.ಮಾಹಿತಿ ಕಲೆ ಹಾಕ್ತಿದ್ದಂತೆ ಹೋಟೆಲ್​​ ಮೇಲೆ ದಾಳಿ ಮಾಡಿದ ಐಟಿ ಅಧಿಕಾರಿಗಳು ಇನ್ನು ಹಲವು ಅಧಿಕಾರಿಗಳ ಮನೆ ಮೇಲೆ ದಾಳಿ ಮಾಡೋ ಸಾಧ್ಯತೆ .

ಡೀಲ್ ಹಣದಲ್ಲೇ ಐಷಾರಾಮಿ ಜೀವನ  ಎನ್​​ಬಿ ಪಾಟೀಲ್​  ನಡೆಸುತ್ತಿದ್ದು.ಈತ ಜಸ್ಟ್​ ಅಕೌಂಟೆಂಟ್​​.ಈತನ ಮನೆ ನೋಡೆದ್ರೆ ಕುಬೇರನೂ ಶಾಕ್ ಆಗ್ತಾನೆ..! ಧಾರವಾಡದಲ್ಲಿದೆ ನಾರಾಯಣಗೌಡ ಪಾಟೀಲ್​​ನ ಐಷಾರಾಮಿ ಮನೆಕೊಪ್ಪದ ಕೆರೆಯಲ್ಲಿದೆ ಐಷಾರಾಮಿ ಬೃಹತ್ ಬಂಗಲೆ ಹರಿಪ್ರಿಯಾ ಹೆಸರಿನ ದುಬಾರಿ ಬಂಗಲೆ ಕಟ್ಟಿರುವ ಪಾಟೀಲ್ ಹಾವೇರಿಯಲ್ಲಿ ಐಷಾರಾಮಿ ಮನೆ ಬಾಡಿಗೆ ಪಡೆದಿರುವ ಪಾಟೀಲ್ ಹಾವೇರಿಯ ನಂದಿ ಬಡಾವಣೆಯಲ್ಲಿರುವ ನಾರಾಯಣಗೌಡ ಪಾಟೀಲ್​ ವಾಸವಾಗಿದ್ದನೆ.