ನಗರದಲ್ಲಿ ಬೃಹತ್ ಐಟಿ ರೇಡ್- ಇನ್ನೋವೇಟಿವ್ ಫಿಲ್ಮ್ ಸಿಟಿ, ಡಿಎನ್ಎ ನೆಟ್ ವರ್ಕ್ ಮೇಲೆ ದಾಳಿ!!

ನಗರದಲ್ಲಿ ಬೆಳ್ಳಂಬೆಳಗ್ಗೆ ಎರಡು ಬೃಹತ್ ಐಟಿ ದಾಳಿ ನಡೆದಿದ್ದು, ರಾಜ್ಯ ಹಾಗೂ ರಾಷ್ಟ್ರವನ್ನೇ ಬೆಚ್ಚಿಬೀಳುವಂತೆ ಮಾಡಿದೆ. ಬೆಂಗಳೂರು ಹಾಗೂ ದೇಶಾದ್ಯಂತ ವ್ಯೆವಹಾರ ಹೊಂದಿರುವ ಡಿಎನ್​ಎ ಎಂಟ್ರಟೇನ್​ಮೆಂಟ್​​ ನೆಟ್ವರ್ಕ್​ ಪ್ರೈವೇಟ್​ ಲಿಮಿಟೆಡ್​ ಹಾಗೂ ಇನ್ನೋವೇಟಿವ್​ ಮಲ್ಟಿಪ್ಲೆಕ್ಸ್​​ ಹಾಗೂ ಇನ್ನೋವೇಟಿವ್​ ಫಿಲ್ಮ್​ ಸಿಟಿ ಮೇಲೆ ದಾಳಿ ನಡೆದಿದೆ.


ದಾಳಿ ನಡೆದಿರುವ ಡಿಎನ್​​ಎ ನೆಟ್​ವರ್ಕ್​ ಸಂಸ್ಥೆ ಮಾಜಿಮುಖ್ಯಮಂತ್ರಿ ಕೆಂಗಲ್ ಹನುಮಂತರಾಯ್​ ಮೊಮ್ಮಗ ವೆಂಕಟವರ್ಧನಗೆ ಸೇರಿದ್ದು, ದೇಶದ ಪ್ರತಿಷ್ಠಿತ ಈವೆಂಟ್​ ಮ್ಯಾನೇಜಮೆಂಟ್​ ಸಂಸ್ಥೆಗಳಲ್ಲಿ ಒಂದಾಗಿರುವ ಈ ಸಂಸ್ಥೆ ಆರ್​​.ಸಿ.ಬಿ ತಂಡ ಇವೆಂಟ್​ ಮತ್ತು ಫೆಸಿಲಿಟಿ ವಿಭಾಗ ನೋಡಿಕೊಳ್ಳುತ್ತಿತ್ತು. ಇತ್ತೀಚೆಗೆ ನಡೆದ ವಿಧಾನಸೌಧ ವಜ್ರ ಮಹೋತ್ಸವ ಕಾರ್ಯಕ್ರಮದ ಇವೆಂಟ್​ ಮ್ಯಾನೇಜ್​ಮೆಂಟ್​ನ್ನೂ ಡಿಎನ್​ಎ ಸಂಸ್ಥೆ ವಹಿಸಿಕೊಂಡಿತ್ತು.
ಡಿಎನ್​ಎ ನೆಟ್​ವರ್ಕ್​ ಸಂಸ್ಥೆಯ ಮಾಲೀಕ ವೆಂಕಟವರ್ಧನ್​ ವಿರಾಟ್ ಕೊಹ್ಲಿ ಸೇರಿದಂತೆ ಹಲವರು ಗಣ್ಯರಿಗೆ ಆಪ್ತರಾಗಿದ್ದು, ಈ ಭಾರಿ ಖುದ್ದಾಗಿ ವಿರಾಟ್ ಕೊಹ್ಲಿ ಖುದ್ದಾಗಿ ಐಟಿಸಿ ಗಾರ್ಡೇನಿಯಾ ಬಿಟ್ಟಿ ರಿಟ್ಜ್​​ ಕಾರ್ಲಟನ್​​ ಹೊಟೇಲ್​​ನಲ್ಲಿ ತಂಗಿದ್ದರು. ಇನ್ನು ಸಚಿವ ಪ್ರಿಯಾಂಕ ಖರ್ಗೆಗೂ ಆಪ್ತರಾಗಿರುವ ವೆಂಕಟವರ್ಧನ್​ ಗೆ ಸಾಕಷ್ಟು ಸರ್ಕಾರಿ ಜಾಹೀರಾತು ನೀಡಲಾಗಿತ್ತು. ಐಪಿಎಲ್​ ವೇಳೆ ಡಿಎನ್​ಎ ಅಪಾರ ಪ್ರಮಾಣದಲ್ಲಿ ತೆರಿಗೆ ವಂಚನೆ ಮಾಡಿರುವ ಹಿನ್ನೆಲೆಯಲ್ಲಿ ಡಿಎನ್​ಎ ಸೊಲ್ಯೂಶನ್​ಗೆ ಸೇರಿದ ಬೆಂಗಳೂರಿನ 6 ಕಡೆ ಮುಂಬೈ, ಡೆಲ್ಲಿ ಯಲ್ಲಿ ದಾಳಿ ನಡೆದಿದೆ.


ಇನ್ನೋವೆಟಿವ್​ ಫಿಲ್ಮ್​ ಸಿಟಿ, ಇನ್ನೋವೆಟಿವ್​​ ಮಲ್ಟಿಪ್ಲೆಕ್ಸ್​ನಲ್ಲೂ ಅಪಾರ ಪ್ರಮಾಣದ ತೆರಿಗೆ ವಂಚನೆಯಾದ ಮಾಹಿತಿ ಇತ್ತು. ಈ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲೆಯ ಬಿಡದಿಯಲ್ಲಿರುವ ಇನ್ನೋವೇಟಿವ್​ ಫಿಲ್ಮ್​ ಸಿಟಿ ಹಾಗೂ ಮಾರತಹಳ್ಳಿಯ ಇನ್ನೊವೇಟಿವ್​ ಮಲ್ಟಿಪ್ಲೆಕ್ಸ್​​ ಮೇಲೂ ರೇಡ್ ಮಾಡಲಾಗಿದೆ. ಬಿಡದಿಯ ಇನ್ನೋವೇಟಿವ್ ಫಿಲ್ಮ್​ ಸಿಟಿಗೆ ನಾಲ್ಕು ಗಾಡಿಗಳಲ್ಲಿ ಐಟಿ ಅಧಿಕಾರಿಗಳು ಬಂದಿದ್ದು, ದಾಳಿ ಮುಂದುವರೆದಿದೆ. ಇನ್ನು ಮಾರತಹಳ್ಳಿಯ ಇನ್ನೋವೆಟಿವ್ ಮಲ್ಟಿಪ್ಲೆಕ್ಸ್​ ಮೇಲೂ ರೇಡ್ ಆಗಿದ್ದು, ಮಹತ್ವದ ಹಲವು ಫೈಲ್​ ವಶಪಡಿಸಿಕೊಳ್ಳಲಾಗಿದ್ದು, ದಾಳಿ ಹಾಗೂ ಪರಿಶೀಲನೆ ಮುಂದುವರೆದಿದೆ.