ತಮಿಳುನಾಡು ರಾಜಕಾರಣದ ಮೇಲೆ ಐಟಿ ದಾಳಿ ; ಇದು ಯುಪಿಎ ಮೇಲೆ ಮೋದಿ ಸರ್ಜಿಕಲ್ ಸ್ಟ್ರೈಕ್ ?

ತಮಿಳುನಾಡು ಎಐಎಡಿಎಂಕೆ ನಾಯಕರ ಆಸ್ತಿ ಪಾಸ್ತಿಗಳ ಮೇಲೆ ಇಂದು ಬೆಳ್ಳಂಬೆಳಗ್ಗೆ ಐಟಿ ದಾಳಿಯಾಗಿದೆ. ಈ ದಾಳಿಯನ್ನು ಯುಪಿಎ ಮೇಲಿನ ಸರ್ಜಿಕಲ್ ಸ್ಟ್ರೈಕ್ ಎನ್ನಬಹುದು. ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಜೊತೆ ಆಪ್ತವಾಗಿರುವ ಎಐಎಡಿಎಂಕೆ ಮೇಲಿನ ಐಟಿ ದಾಳಿಯ ಹಿಂದೆ ಮೋದಿಯ ಚಾಣಾಕ್ಷ ನಡೆಯಿದೆ.

adಎಐಎಡಿಎಂಕೆಯ ಹಲವು ನಾಯಕರ ಮನೆ ಕಚೇರಿ ಮೇಲೆ ಐಟಿ ದಾಳಿಯಾಗಿದೆ. ತಮಿಳುನಾಡು, ಆಂದ್ರ,ಕರ್ನಾಟಕದಲ್ಲಿ ಒಟ್ಟು ನೂರಕ್ಕೂ ಅಧಿಕ ಕಡೆಗಳಲ್ಲಿ ದಾಳಿಯಾಗಿದೆ ಎನ್ನಲಾಗ್ತಿದೆ. ಎಐಎಡಿಎಂಕೆಯ ಟಿಟಿವಿ ಧಿನಕರನ್, ಶಶಿಕಲಾ, ಇಳವರಸಿ, ಪುಗುಳೆಂದಿಯ ಮನೆ, ಸಂಸ್ಥೆಗಳನ್ನು ಗುರಿಯಾಗಿರಿಸಿ ದಾಳಿ ಮಾಡಲಾಗಿದೆ.

ಇತ್ತಿಚೆಗಷ್ಟೇ ಕಾಂಗ್ರೆಸ್ ನೇತೃತ್ವದ ಯುಪಿಎಯ ಭಾಗವಾಗಿರುವ ಡಿಎಂಕೆ ವರಿಷ್ಠ ಕರುಣಾನಿಧಿಯನ್ನು ಪ್ರಧಾನಿ ನರೇಂದ್ರ ಮೋದಿ ಬೇಟಿಯಾಗಿದ್ದರು. ಭೇಟಿ ಬೆನ್ನಲ್ಲೇ ಡಿಎಂಕೆಯ ಪ್ರಧಾನ ಎದುರಾಳಿಯಾಗಿರೋ ಬಿಜೆಪಿ ಜೊತೆ ಆಪ್ತವಾಗಿರೋ ಎಐಎಡಿಎಂಕೆ ಮೇಲೆ ಐಟಿ ದಾಳಿಯಾಗಿದೆ.

ಜಯಲಲಿತಾ ಮುಖ್ಯಮಂತ್ರಿಯಾಗಿದ್ದ ಸಂಧರ್ಭಕ್ಕೂ ಈಗಿನ ತಮಿಳುನಾಡು ರಾಜಕಾರಣಕ್ಕೂ ಭಾರೀ ಬದಲಾವಣೆಗಳಾಗಿವೆ. ಎಐಎಡಿಎಂಕೆ ಹಲವು ಹೋಳಾಗಿರೋದ್ರಿಂದ ಮತ್ತು ಭಿನ್ನಮತಗಳ ಹಿನ್ನಲೆಯಲ್ಲಿ 2019 ರ ಲೋಕಸಭಾ ಚುನಾವಣೆಯಲ್ಲಿ ಅನುಕಂಪದ ಮತಗಳ ಪ್ರಭಾವ ಕಡಿಮೆಯಾಗಲಿದೆ. 2019 ರ ಚುನಾವಣೆಯಲ್ಲಿ ಡಿಎಂಕೆ ಹೆಚ್ಚಿನ ಸ್ಥಾನಗಳನ್ನು ಗಳಿಸಿದ್ದೇ ಆದಲ್ಲಿ ಅದು ಯುಪಿಎಗೆ ಲಾಭವಾಗಲಿದೆ. ಆದ್ದರಿಂದ ಡಿಎಂಕೆ ಎದುರಾಳಿ ಎಐಎಡಿಎಂಕೆಯ ಮೇಲೆ ಐಟಿ ದಾಳಿ ಮಾಡಿ ಡಿಎಂಕೆಯನ್ನು ಒಲಿಸಿಕೊಳ್ಳುವ ಯತ್ನಗಳನ್ನು ಕೇಂದ್ರದ ಎನ್ ಡಿ ಎ ಮಾಡುತ್ತಿದೆ.

ಡಿಎಂಕೆ ಯು 1984 ರಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿತ್ತು. 2006 ರಿಂದ 2013 ರ ಮದ್ಯೆ ಡಿಎಂಕೆಯು ಯುಪಿಎಯ ಭಾಗವಾಗಿತ್ತು. 1999 ರಿಂದ 2004 ರ ಮದ್ಯೆಯ ರಾಷ್ಟ್ರ ರಾಜಕಾರಣದಲ್ಲಿ ಡಿಎಂಕೆ ಬಿಜೆಪಿ ನೇತೃತ್ವದ ಎನ್ ಡಿಎ ಭಾಗವಾಗಿತ್ತು. ಆ ದಿನಗಳು ಮರುಕಳಿಸಿದರೂ ಅಚ್ಚರಿಯಿಲ್ಲ !

ಮುನ್ನಾರ್ ಗುಡಿ, ಊಟಿ, ಎಚ್ ಎ ಎಲ್ ನಲ್ಲಿರುವ ಎಐಎಡಿಎಂಕೆ ನಾಯಕರ ಆಸ್ತಿಪಾಸ್ತಿ ಮೇಲೆ ದಾಳಿ ನಡೆದಿದೆ. ಜಯ ಟಿವಿ ಮೇಲೂ ಭಾರೀ ಸಂಖ್ಯೆಯ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು ಆಸ್ತಿ ದಾಖಲೆಗಳನ್ನು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.