ನೆಲಮಂಗಲದಿಂದ ನಾಪತ್ತೆಯಾದ ಆರೆಕ್ಸ್​ ಮಂಜನ ರುಂಡ ಪತ್ತೆ- ದೇಹಕ್ಕಾಗಿ ಪೊಲೀಸರ ಹುಡುಕಾಟ-ಬಾಡಿಗೆ ಕೇಳಿದ್ದಕ್ಕೆ ತನ್ನದೇ ಜಮೀನಿನಲ್ಲಿ ಹೆಣವಾದ ಮಂಜ!

Jack alias Aresx murder case: Police Arrest two Perpetrators
Jack alias Aresx murder case: Police Arrest two Perpetrators

ಆತ ತನ್ನ ಜಮೀನನ್ನು ಗೋಡೌನ್​ಗಾಗಿ ಬಾಡಿಗೆಗೆ ಕೊಟ್ಟಿದ್ದ. ಆದರೇ ಬಾಡಿಗೆ ಪಡೆದುಕೊಂಡಾತ ಸರಿಯಾಗಿ ಕೊಡದೇ ಸತಾಯಿಸುತ್ತಿದ್ದ. ಇದರಿಂದ ಬೇಸತ್ತವನು ಬಾಡಿಗೆದಾರರನಿಗೆ ಅವಾಜ್ ಹಾಕಿದ್ದಾನೆ.

 

ಇದೇ ಆತನ ಪ್ರಾಣಕ್ಕೆ ಮುಳುವಾಗಿದೆ. ಬಾಡಿಗೆ ಸರಿಯಾಗಿ ಕೊಡಿ ಎಂದಿದ್ದಕ್ಕೇ ಕೊಲೆಯಾಗಿರುವ ಆತನ ತಲೆ ಅವನದೇ ಜಾಗದಲ್ಲಿ ಪತ್ತೆಯಾಗಿದ್ದರೇ ಉಳಿದ ದೇಹಕ್ಕಾಗಿ ಪೊಲೀಸರು ಹುಡಕಾಟ ನಡೆಸಿದ್ದಾರೆ.
ಹೌದು ತನ್ನದೇ ಜಮೀನಿನಲ್ಲಿ ತಾನೇ ರುಂಡ-ಮುಂಡ ಬೇರಾಗುವಂತೆ ಕೊಲೆಯಾದವನು ನೆಲಮಂಗಲ ನಿವಾಸಿ ಆರೆಕ್ಸ್​ ಮಂಜು. ನೆಲಮಂಗಲ ತಾಲೂಕಿನ ಬಾವಿಕೆರೆ ಗ್ರಾಮದ ಆರೆಕ್ಸ್​ ಜನವರಿ 23 ರಂದು ನಾಪತ್ತೆಯಾಗಿದ್ದ. ಎಲ್ಲೆಡೆ ಹುಡುಕಾಟ ನಡೆಸಿದ ಕುಟುಂಬಸ್ಥರು 24 ರಂದು ನೆಲಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ಬೆನ್ನುಹತ್ತಿದ ಪೊಲೀಸರು ಅನುಮಾನದ ಮೇರೆಗೆ ಗೋಡಾನ ಮಾಲೀಕರಾದ ಸೈಯದ್ ಸಿದ್ದಿಕ್ ಹಾಗೂ ಶಂಶುದ್ದೀನ್ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

 

 

ಈ ವೇಳೆ ಆರೋಪಿಗಳು ನೀಡಿದ ಮಾಹಿತಿ ಆಧರಿಸಿ ಅದೇ ಗ್ರಾಮದ ಎಂ.ಡಿ.ಅಲಿ ವುಡ್​ ಪ್ಯಾಕರ್ಸ್​​​ ಗೋಡಾನ್​​ ನಲ್ಲಿ ಹುಡುಕಾಟ ನಡೆಸಿದ ವೇಳೆ ಆರೆಕ್ಸ್​ ಮಂಜು ತಲೆ ಮಾತ್ರ ಪತ್ತೆಯಾಗಿದೆ. ತಲೆಯನ್ನು ಗೋಡಾನ್​ನಲ್ಲಿ 5 ಅಡಿ ಹೊಂಡ ತೆಗೆದು ತಲೆಯನ್ನು ಹೂಳಲಾಗಿತ್ತು.
ಈ ಗೋಡಾನ್​ನಲ್ಲಿ ಕೇವಲ ತಲೆಬುರುಡೆ ಮಾತ್ರ ಪತ್ತೆಯಾಗಿರೋದರಿಂದ ತಲೆಕೆಡಿಸಿಕೊಂಡಿರುವ ಪೊಲೀಸರು ದೇಹದ ಇನ್ನುಳಿದ ಭಾಗಕ್ಕಾಗಿ ಕೆಂಗೆರಿ ಮೋರಿ ಸೇರಿದಂತೆ ಹಲವೆಡೆ ಹುಡುಕಾಟ ನಡೆಸಿದ್ದಾರೆ. ಮಂಜು ತಲೆ ಪತ್ತೆಯಾದ ಎಂ.ಡಿ.ಅಲಿ ಪ್ಯಾಕರ್ಸ್​​​ ಗೋಡಾನ ಇರುವ ಜಾಗ ಮಂಜುಗೆ ಸೇರಿದ್ದಾಗಿದ್ದು, ಪ್ಯಾಕರ್ಸ್​ ಮಾಲೀಕರಿಗೆ ಮಂಜು ಬಾಡಿಗೆ ಕೊಟ್ಟಿದ್ದ. ಆದರೇ ಅದರ ಮಾಲೀಕರಾದ ಸೈಯದ್ ಸಿದ್ದಿಕ್ ಹಾಗೂ ಶಂಶುದ್ದೀನ್ ಸರಿಯಾಗಿ ಬಾಡಿಗೆ ಕೊಡದೇ ಇದ್ದಿದ್ದರಿಂದ ಆತನಿಗೆ ಮಂಜು ಅವಾಜ್ ಹಾಕಿದ್ದ ಎನ್ನಲಾಗಿದೆ. ಇದಕ್ಕೆ ಬೇಸತ್ತು ಪ್ಯಾಕರ್ಸ್​ ಮಾಲೀಕನೇ ಹತ್ಯೆ ನಡೆಸಿಬಹುದೆಂದು ಶಂಕಿಸಲಾಗಿದೆ. ಇನ್ನು ಪ್ರಕರಣ ನೆಲಮಂಗಲದಲ್ಲಿ ಆತಂಕದ ವಾತಾವರಣ ಸೃಷ್ಟಿಸಿರೋದರಿಂದ ಮುಂಜಾಗ್ರತ ಕ್ರಮವಾಗಿ ಬಿಗಿ ಪೊಲೀಸ್ ಭದ್ರತೆ ನೀಡಲಾಗಿದ್ದು, 2 ಡಿಅರ್ ತುಕಡಿ,1 ಕೆಎಸ್ಆರ್ ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಒಟ್ಟಿನಲ್ಲಿ ತನ್ನದೇ ಜಾಗದ ಬಾಡಿಗೆ ಕೇಳಿದ್ದಕ್ಕೆ ಜಾಗದ ಮಾಲೀಕನೇ ಹತ್ಯೆಯಾಗಿದ್ದು ಮಾತ್ರ ದುರಂತವೇ ಸರಿ.