ಶಾಲೆಯಲ್ಲಿ ಪಾಲಕರು ಚಪ್ಪಲ್ಲಿ ಹಿಡಿದು ಹೊಡೆದಾಡಿದ್ಯಾಕೆ ಗೊತ್ತಾ? ಈ ವಿಡಿಯೋ ವೈರಲ್…

Karwar: Parents Fighting for silly Reason In School.
Karwar: Parents Fighting for silly Reason In School.

ಶಾಲೆಯಲ್ಲಿ ಚಿಕ್ಕಮಕ್ಕಳು ಕ್ಷುಲಕ ಕಾರಣಕ್ಕೆ ಹೊಡೆದಾಡೋದನ್ನು ನೋಡ್ತೀರಾ.

 

ಆದರೇ ಮಕ್ಕಳ ವಿಚಾರಕ್ಕೆ ಪೋಷಕರು ಜುಟ್ಟು ಹಿಡಿದುಕೊಂಡ ಹೊಡೆದಾಡಿದ್ದು ನೋಡಿದ್ದೀರಾ? ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಇಂತಹದೊಂದು ಘಟನೆ ನಡೆದಿದ್ದು, ಈ ವಿಡಿಯೋ ಸಖತ್ ವೈರಲ್ ಆಗಿದೆ.  ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಾರವಾಡದ ಸರ್ಕಾರಿ ಶಾಲೆಯಲ್ಲಿ ಇಬ್ಬರು ಮಕ್ಕಳು ಚಿಕ್ಕ ಪುಟ್ಟ ವಿಚಾರಕ್ಕೆ ಜಗಳವಾಡಿಕೊಂಡಿದ್ದರು. ಇದರಲ್ಲಿ ಒಬ್ಬ ವಿದ್ಯಾರ್ಥಿ ಶಾಲೆಯಿಂದ ಮನೆಗೆ ತೆರಳಿ ಪೋಷಕರಿಗೆ ಈ ಬಗ್ಗೆ ದೂರು ನೀಡಿದ್ದ.

 

 

ಇದರಿಂದ ಕೆರಳಿದ ಎರಡು ಮಕ್ಕಳ ಪೋಷಕರು ಇಂದು ಶಾಲೆಗೆ ಬಂದು ಹೊಡೆದಾಡಿಕೊಂಡಿದ್ದಾರೆ. ಒಬ್ಬ ವಿದ್ಯಾರ್ಥಿ ತಾಯಿ ಸುರೇಖಾ ಇನ್ನೋರ್ವ ವಿದ್ಯಾರ್ಥಿಯ ತಾಯಿಗೆ ಚಪ್ಪಲಿ ಏಟು ಹೊಡೆದಿದ್ದಾಳೆ. ಇದ್ರಿಂದ ಪ್ರಕರಣ ದೊಡ್ಡದಾಗಿದ್ದು, ಇಬ್ಬರು ವಿದ್ಯಾರ್ಥಿಗಳ ಪಾಲಕರು ಶಾಲೆಯ ಆವರಣದಲ್ಲಿ ಮಣ್ಣು ತೂರಿ, ಕಲ್ಲು-ಚಪ್ಪಲಿಯಿಂದ ಹೊಡೆದಾಡಿಕೊಂಡಿದ್ದಾರೆ.

ಇನ್ನು ಈ ಇಬ್ಬರು ಪಾಲಕರನ್ನು ಸಮಾಧಾನ ಪಡಿಸಲು ಶಿಕ್ಷಕರು ಹರಸಾಹಸ ಪಟ್ಟಿದ್ದು, ಬಳಿಕ ಪರಿಸ್ಥಿತಿ ನಿಯಂತ್ರಿಸಲಾಗದೇ ಪೊಲೀಸರನ್ನು ಸ್ಥಳಕ್ಕೆ ಕರೆಸಿದ್ದಾರೆ ಎನ್ನಲಾಗಿದೆ. ಇದೀಗ ಈ ವಿಡಿಯೋ ವೈರಲ್​ ಆಗಿದ್ದು, ಪಾಲಕರ ಮಸ್ತ-ಮಸ್ತ ಹೊಡೆದಾಟ ನೋಡಿ ಜನ ಸಖತ್ ಎಂಜಾಯ್ ಮಾಡ್ತಿರೋದಂತು ಸುಳ್ಳಲ್ಲ.