ಕುಮಟಾಕ್ಕೆ ಬಂದು ದುಡ್ಡು ಕಳೆದುಕೊಂಡ ಹಳ್ಳಿ ಹೈದ ಪ್ಯಾಟೆಗೆ ಬಂದ ಭೌತೇಶ್!

Karwar : Reallity Show runner up Bouthesh received fake call and was cheated
Karwar : Reallity Show runner up Bouthesh received fake call and was cheated

ಕುಮಟಾ: ಹಳ್ಳಿ ಹೈದ ಪ್ಯಾಟೆಗೆ ಬಂದ ಎನ್ನುವ ರಿಯಾಲಿಟಿ ಶೋನ ರನ್ನರ್ ಆಪ್ ಪಡೆದ ಭೌತೇಶ್ ತಮ್ಮೆಲ್ಲಾ ವಸ್ತುಗಳನ್ನು ಕಳೆದುಕೊಂಡು ಕುಮಟದಲ್ಲಿ ದಾರಿ ಕಾಣದೆ ತಿರುಗಾಡುತ್ತಿರುವಾಗ ದಾನಿಯೊರ್ವರು ಸಹಾಯಹಸ್ತ ಚಾಚಿದ ಘಟನೆ ನಡೆದಿದೆ.

ರಸ್ತೆಯಲ್ಲಿ ಅಲೆದಾಡುತ್ತಿದ್ದಾಗ ಸ್ಥಳೀಯರು ಇವರನ್ನು ಪತ್ತೆ ಹಚ್ಚಿ ಊಟ ಮಾಡಿಲ್ಲ ಎಂದ ಕಾರಣ ಕುಮಟಾದ ಸ್ಥಳೀಯ ಆಸ್ಪತ್ರೆಯ ಕ್ಯಾಂಟೀನಲ್ಲಿ ಊಟವನ್ನು ಕೊಡಿಸಿದ್ದಾರೆ. ಈ ಬಗ್ಗೆ ಅವರನ್ನು ವಿಚಾರಿಸಿದಾಗ ಸಿನಿಮಾ ರಂಗದ ಕೆಲಸದಲ್ಲಿ ಬ್ಯುಸಿಯಾಗಿದ್ದ ನನ್ನನ್ನು ಯಾರೋ ವಾಲಿಬಾಲ್ ಟೂರ್ನಮೆಂಟ್ ನಲ್ಲಿ ಅತಿಥಿಯಾಗಿ ಬರಬೇಕೆಂದು ಕರೆ ಮಾಡಿದ್ದರು ಆದರೆ ಇಲ್ಲಿಗೆ ಆಗಮಿಸಿ ವಾಪಸ್ ಕರೆ ಮಾಡಿದ್ರೆ ಅವರ ಮೊಬೈಲ್ ಹೆಚ್ಚು ಬರುತ್ತಿದ್ದು.ಇನ್ನು ಬಂದಸಾವಿರ ಇದು ದಾರಿಗೆ ಸುಂಕವಿಲ್ಲವೆಂದು ವಾಪಸ್ ಹೋಗೋಣವೆಂದರೆ ನನ್ನ ಮೊಬೈಲ್, ಬ್ಯಾಗ್, ಲ್ಯಾಪ್ ಟಾಪ್, ಹಾಗೂ ನಗದು ಒಂಬತ್ತು ಸಾವಿರಾರು ಕಳುವಾಗಿದೆ . ನನ್ನ ಕೈಲಿ ಈಗ ಒಂದು ಬಿಡಿಗಾಸು ಕೂಡ ಇಲ್ಲವಾಗಿದ್ದು ಇಲ್ಲೊಬ್ಬ ಮಹನಿಯರು ಪ್ರಯಾಣ ಸಹಾಯ ಮಾಡುತ್ತಾರೆಂದು ತಿಳಿಸಿದ್ದು ನಾನು ಸೇರಬೇಕಾದ ಸ್ಥಳವನ್ನು ಸೇರಲು ಪ್ರಯತ್ನಿಸುತ್ತಿದ್ದೇನೆ ಎಂದರು.

 

 

 

ಇನ್ನು ಸ್ಥಳದಲ್ಲಿ ಹಾಜರಿದ್ದ ಡಾ ಪ್ರಶಾಂತ ಮಣಕಿಕರ ಭೂತೇಶ್ ಪ್ರಯಾಣ ವೆಚ್ಚ ಹಾಗೂ ಮುಂಬಯಿಗೆ ತಲುಪುವ ವ್ಯವಸ್ಥೆ ಮಾಡಿದ್ದಾರೆ. ಒಟ್ಟಿನಲ್ಲಿ ಅತಿಥಿಯಾಗಿ ಬಾ ಎಂದು ಅಮಾಯಕ ಹುಡುಗನನ್ನು ಕರೆದು ಈ ರೀತಿಯಾಗಿ ಅವಮಾನ ಮಾಡುವುದರ ಜೊತೆಗೆ ಕಳೆದಂತೆ ಪ್ರಕರಣವು ನಮ್ಮ ಕುಮಟಾದಲ್ಲಿ ಹೆಚ್ಚಾಗುತ್ತಿರುವುದು ಶೋಚನೀಯ ಸಂಗತಿಯಾಗಿದೆ.