ಕಾವೇರಿ ನದಿ ಸ್ನಾನ ಸೇಫಲ್ಲ- ಅಧ್ಯಯನದಲ್ಲಿ ಹೊರಬಂತು ಆಘಾತಕಾರಿ ಅಂಶ

ನದಿಗಳಲ್ಲಿ ಪುಣ್ಯ ಸ್ನಾನ ಮಾಡಿ ದೇವರ ದರ್ಶನ ಮಾಡಿದರೇ ಪುಣ್ಯ ಪ್ರಾಪ್ತಿಯಾಗುತ್ತೆ ಅನ್ನೋ ನಂಬಿಕೆ ಇದೆ. ಆದರೇ ಇನ್ನು ಮುಂದೇ ಹೀಗೆಂದುಕೊಂಡು ನದಿಗಿಳಿಯೋ ಮುನ್ನ ನೀವು ಎಚ್ಚರ ವಹಿಸಲೇ ಬೇಕು. ಹೌದು ದಕ್ಷಿದ ಪಾವನ ಗಂಗೆ ಎನ್ನಿಸಿಕೊಂಡಿರುವ ಕಾವೇರಿ ನದಿಯಲ್ಲಿ ಸ್ನಾನ ಮಾಡಿದ್ರೆ ರೋಗ ಬರುತ್ತೆ ಅನ್ನೋ ಆತಂಕಕಾರಿ ವಿಚಾರವೊಂದು ಕೇಂದ್ರ ಸರ್ಕಾರದ ವಿಭಾಗವೊಂದು ನಡೆಸಿದ ಅಧ್ಯಯನದ ವೇಳೆ ಬೆಳಕಿಗೆ ಬಂದಿದೆ.

adಕಾವೇರಿಯಿಂದ ಆರಂಭಿಸಿ ದಕ್ಷಿಣ ಭಾರತ ಹಾಗೂ ಉತ್ತರ ಭಾರತದ ಬಹುತೇಕ ನದಿಗಳು ಮನುಷ್ಯನ ದೇಹದಲ್ಲಿನ ರೋಗನಿರೋಧಕ ಶಕ್ತಿ ಕುಗ್ಗಿಸುವ ಪ್ರತಿರೋಧಕ ಶಕ್ತಿ ಹೊಂದಿರುವ ಬ್ಯಾಕ್ಟಿರಿಯಾಗಳ ತಾಣವಾಗಿ ಬದಲಾಗಿದ್ದು, ಇದರಲ್ಲಿ ಪುಣ್ಯ ಸ್ನಾನ ಮಾಡೋದರಿಂದ ಜನರು ಸುಲಭವಾಗಿ ರೋಗಗಳಿಗೆ ತುತ್ತಾಗುತ್ತಾರೆ ಎಂದು ಅಧ್ಯಯನ ವರದಿ ಹೇಳಿದೆ.
೨೦೧೫ ರಲ್ಲಿಯೇ ಕಾವೇರಿ ನದಿ ನೀರನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಈ ಕೋಲಿ ಎಂಬ ಬ್ಯಾಕ್ಟಿರಿಯಾ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂದಿದ್ದು, ಇದು ಶ್ವಾಸಕೋಶ,ಹೃದಯ ಹಾಗೂ ಮೂತ್ರಕೋಶ ಸೇರಿದಂತೆ ದೇಹದ ಅ ಸೂಕ್ಷ್ಮ ವ್ಯವಸ್ಥೆಗಳನ್ನು ಹಾಳು ಮಾಡಿ ಚಿಕಿತ್ಸೆಗೂ ಸ್ಪಂದಿಸದಂತೆ ಮಾಡುವ ಶಕ್ತಿ ಹೊಂದಿದೆ.


ಕಳಪೆ‌ ಸೋಂಕು ನಿಯಂತ್ರಣಗಳ ಬಳಕೆ, ನದಿ ಪಾತ್ರದ ಪ್ರದೇಶದಲ್ಲಿ ಅವೈಜ್ಞಾನಿಕವಾಗಿ ಜಾನುವಾರಗಳ ಸಾಕಾಣಿಕೆ ಹಾಗೂ ಅತಿಯಾದ ಔಷಧಗಳ ಬಳಕೆಯೂ ಕಾವೇರಿ ಪಾವಿತ್ರ್ಯತೆ ಹಾಳುಗೆಡವಲು ಕಾರಣವಾಗಿದೆ. ಇದಲ್ಲದೇ ಸಹಜವಾಗಿ ಜನರು ಹೆಚ್ಚಾಗಿ ನದಿಸ್ನಾನ ಮಾಡುವ ಹಬ್ಬದ ಋತುವಿನಲ್ಲಿ ಹೀಗೆ ಔಷಧಗಳ ಪ್ರಭಾವಕ್ಕೆ ತಡೆಒಡ್ಡುವ ಬ್ಯಾಕ್ಟಿರಿಯಾಗಳ ಪ್ರಮಾಣ ಶೇಕಡಾ ೨೦ ರಷ್ಟು ಹೆಚ್ಚಾಗಿರುತ್ತದೆ. ಇದನ್ನು ಕೇಂದ್ರ ಸರ್ಕಾರದ ಇಲಾಕಾ ಮಾರ್ಗದರ್ಶನಲ್ಲಿ ನಮ್ಮ ಭಾರತೀಯ ವಿಜ್ಞಾನ ಸಂಸ್ಥೆ ಹಾಗೂ ದಯಾನಂದ ಸಾಗರ ಕಾಲೇಜು ವಿದ್ಯಾರ್ಥಿಗಳು ಅಧ್ಯಯನ ನಡೆಸಿದ್ದಾರೆ. ಇದಕ್ಕಾಗಿ ಕಾವೇರಿ ಮಾದರಿಯನ್ನು ತಲಕಾವೇರಿ,ನಾಪೋಕ್ಲು‌,ನಂಜನಗೂಡು ಸೇರಿ ಹಲವೆಡೆ ಮಾದರಿ ಸಂಗ್ರಹಿಸಲಾಗಿದೆ.