ಮೊಬೈಲ್​​ ಬ್ಲಾಸ್ಟ್​​- ತೊಡೆ ಛಿದ್ರ-ಛಿದ್ರ- ಪ್ಯಾಂಟ್​​ನಲ್ಲಿ ಮೊಬೈಲ್​​ ಇಡುವ ಮುನ್ನ ಎಚ್ಚರ!!

ಮೊಬೈಲ್​​ ಪ್ಯಾಂಟ್​​, ಶರ್ಟ್​ ಜೇಬಿನಲ್ಲಿಟ್ಟುಕೊಂಡು ಓಡಾಡುವ ಮುನ್ನ ಎಚ್ಚರ. ಹೌದು ಪ್ಯಾಂಟ್​​ ಜೇಬಿನಲ್ಲಿಟ್ಟ ಮೊಬೈಲ್​ವೊಂದು ಬ್ಲಾಸ್ಟ್​​ ಆದ ಕಾರಣ ಯುವಕನ ತೊಡೆ ಛಿದ್ರವಾಗಿ, ತೀವ್ರ ಗಾಯಗೊಂಡ ಘಟನೆ ಕೊಪ್ಪಳದಲ್ಲಿ ನಡೆದಿದೆ.

ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಸಿದ್ದಾಪೂರ ಗ್ರಾಮದ ಹನುಮೇಶ್ ಹರಿಜನ ಎಂಬಾತ ಎಂಐ ನೋಟ್ 4 ಮೊಬೈಲ್​​ನ್ನು ಆನಲೈನ್​​​ನಲ್ಲಿ ಖರೀದಿಸಿದ್ದ. ನಿನ್ನೆ ಮೊಬೈಲ್​ನ್ನು ಪ್ಯಾಂಟ್​ ಜೇಬಿನಲ್ಲಿಟ್ಟ ವೇಳೆ ಏಕಾಏಕಿ ಮೊಬೈಲ್​ ಬ್ಲಾಸ್ಟ್​ ಆಗಿದ್ದು, ತೊಡೆ ಹಾಗೂ ಮರ್ಮಾಂಗಕ್ಕೆ ಗಾಯಗಳಾಗಿದೆ. ಅದೃಷ್ಟವಶಾತ ಪ್ರಾಣಾಪಾಯವಾಗಿಲ್ಲ. ಆತನನ್ನು ಗಂಗಾವತಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಇತ್ತೀಚೆಗೆ ಮೊಬೈಲ್​​ ಬ್ಲಾಸ್ಟ್​​ ಪ್ರಕರಣಗಳು ಹೆಚ್ಚುತ್ತಲೇ ಇರೋದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಮಂಡ್ಯ ಜಿಲ್ಲೆಯೊಂದರಲ್ಲೇ ಎರಡು ಪ್ರತ್ಯೇಕ ಪ್ರಕರಣದಲ್ಲಿ ರೆಡ್ ಮೀ ಮೊಬೈಲ್​ ಸ್ಪೋಟಗೊಂಡಿದ್ದು, ತುಮಕೂರಿನಲ್ಲಿ ಮೋಟೋ ಮೊಬೈಲ್​ ಬ್ಲಾಸ್ಟ್​ ಆಗಿ ವ್ಯಕ್ತಿಯೊರ್ವ ಗಾಯಗೊಂಡಿದ್ದರು. ಇದೀಗ ಕೊಪ್ಪಳದಲ್ಲೂ ಮತ್ತೆ ಮೊಬೈಲ್ ಬ್ಲಾಸ್ಟ್​ ಆಗಿದೆ. ಹೀಗಾಗಿ ಮೊಬೈಲ್​ ಬಳಸುವ ಮುನ್ನ ಜನರು ಎಚ್ಚರಿಕೆ ವಹಿಸಬೇಕಿದೆ.