ತಾಕತ್ತಿದ್ದರೆ ಚಿಂಚೋಳಿಯಲ್ಲಿ ಪ್ರಿಯಾಂಕಾ ಗೆದ್ದು ಬರಲಿ : ಜಾದವ್ ಬಹಿರಂಗ ಸವಾಲ್

“ದತ್ತು ಪುತ್ರನಾಗಿ ಬರುವ ಬದಲು ರಾಜನಾಗಿ ಬರಲಿ .ತಾಕತ್ತಿದ್ದರೆ ಮುಂಬರುವ ಚಿಂಚೋಳಿ ಬೈ ಎಲೆಕ್ಷನ್‌ಗೆ ಪ್ರಿಯಾಂಕ್ ನಿಲ್ಲಲಿ. ನಮ್ಮ ಅಭ್ಯರ್ಥಿಯನ್ನು ಸೋಲಿಸಲಿ , ಒಂದು ಕೈ ನೋಡಿಯೇ ಬಿಡೋಣ “ಸಚಿವ ಪ್ರೀಯಾಂಕ್ ಖರ್ಗೆಗೆ ಲೋಕಾಸಭಾ ಬಿಜೆಪಿ ಅಭ್ಯರ್ಥಿ ಡಾ ಉಮೇಶ್ ಜಾಧವ್ ಬಹಿರಂಗ ಸವಾಲೆಸೆದಿದ್ದಾರೆ.


ಪದೇ ಪದೇ ಆಪರೇಷನ್ ಕಮಲ ಕುರಿತು ಪ್ರಿಯಾಂಕ್ ಮಾತನಾಡುವದು ಸರಿಯಲ್ಲ . ನಾನು ಹಣ ಪಡೆದಿದ್ದಿನಿ ಅಂತಾ ಪ್ರೀಯಾಂಕ್ ಅವರ ಮಕ್ಕಳ ಮೇಲೆ ಆಣೆ‌ ಮಾಡಲಿ. ಸಿಬಿಐ ಸೇರಿದಂತೆ ಯಾವುದೇ ಉನ್ನತ ತನಿಖೆಗೂ ನಾನು ಸಿದ್ದ . ಎಂದು ಉಮೇಶ್ ಜಾದವ್ ತಿರುಗೇಟು ನೀಡಿದ್ದಾರೆ
ಕಲಬುರಗಿ ಜಿಲ್ಲೆ ಚಿಂಚೋಳಿಯಲ್ಲಿ ನಡೆದಿದ್ದ ಕೈ ಕಾರ್ಯಕರ್ತರ ಸಮಾವೇಶದಲ್ಲಿ ಸಚಿವ ಪ್ರೀಯಾಂಕ್ ಖರ್ಗೆ ದತ್ತು ಪುತ್ರನಾಗಿ ಚಿಂಚೋಳಿಗೆ ಬರಲು ಸಿದ್ಧ ಎಂದು ಹೇಳಿಕೆ ನೀಡಿದ್ದರು.