ಆತನ ಉದರದಲ್ಲಿತ್ತು ಕಲ್ಲು,ಮೊಳೆ,ಕಬ್ಬಿಣ,ಗಾಜು!!

Madhya Pradesh: Doctors Remove 263 Coins,Iron and glass Pieces from Man's Stomach

ನಾವು ಊಟ ಮಾಡುವಾಗ, ತಿಂಡಿ ತಿನ್ನುವಾಗ ಒಂದು  ಚಿಕ್ಕ ಕಲ್ಲು ಬಾಯಿಗೆ ಸಿಕ್ಕಿದ್ರೂ ಪರದಾಡುವಂತಾಗುತ್ತದೆ. ಆದರೇ ಹೊಟ್ಟೆಯಲ್ಲಿ ಬರೀ ಕಲ್ಲು,ನಾಣ್ಯ,ಕಬ್ಬಿಣದ ಮೊಳೆಗಳೇ ತುಂಬಿದ್ದರೇ ಹೇಗಿರಬಹುದು? ಹೌದು ಇಲ್ಲೊಬ್ಬ ವ್ಯಕ್ತಿಯ ಹೊಟ್ಟೆಯಲ್ಲಿ ಬರೋಬ್ಬರಿ 263 ನಾಣ್ಯಗಳು ಪತ್ತೆಯಾಗಿದ್ದು, ವೈದ್ಯರೇ ಕಂಗಾಲಾಗಿ ಹೋಗಿದ್ದಾರೆ. ಆಫರೇಶನ್​ ಥಿಯೇಟರ್​ನಲ್ಲಿ ಕತ್ತರಿಸಿದ ಹೊಟ್ಟೆಯಿಂದ ವೈದ್ಯರು ರಾಶಿ-ರಾಶಿ ನಾಣ್ಯ, ಕಬ್ಬಿಣದ ಮೊಳೆ ತೆಗೆಯುತ್ತಿದ್ದರೇ ಎಂಥವರಾದರೂ ಬೆಚ್ಚಿ ಬೀಳಲೇ ಬೇಕು.

Madhya Pradesh: Doctors Remove 263 Coins,Iron and glass Pieces from Man's Stomach
Madhya Pradesh: Doctors Remove 263 Coins,Iron and glass Pieces from Man’s Stomach
ad


ಮಧ್ಯಪ್ರದೇಶದ ರೇವಾದ ನಿವಾಸಿ ಮಕ್ಸದ್ ಖಾನ್ ಎಂಬಾತ  ಸತತ ಕೆಲ ತಿಂಗಳಿನಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದ.  ಕೊನೆಗೆ ಹೊಟ್ಟೆ ನೋವು ತಾಳಲಾರದೇ ಆಸ್ಪತ್ರೆಗೆ ಹೋದ ಆತನಿಗೆ ಅಚ್ಚರಿಯೊಂದು ಕಾದಿತ್ತು. ಸ್ಕ್ಯಾನ್​ ಮಾಡಿಸಿದಾಗ ಆತನ ಹೊಟ್ಟೆಯಲ್ಲಿ ಮಾಂಸಖಂಡಗಳ ಬದಲು ರಾಶಿ-ರಾಶಿ ನಾಣ್ಯ, ಮೊಳೆ, ಕಬ್ಬಿಣದ ತುಂಡುಗಳು ಹಾಗೂ  ಗಾಜಿನ ಪೀಸ್​ಗಳು ಕಂಡುಬಂದಿದೆ.

Madhya Pradesh: Doctors Remove 263 Coins,Iron and glass Pieces from Man's Stomach
Madhya Pradesh: Doctors Remove 263 Coins,Iron and glass Pieces from Man’s Stomach

35 ವರ್ಷದ ಮಕ್ಸದ್ ಖಾನ್ ಗೆ ಕೊನೆಗೆ ಸಂಜಯಗಾಂಧಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. 263 ನಾಣ್ಯ, ನೂರಕ್ಕೂ ಹೆಚ್ಚು ಕಬ್ಬಿಣದ ಮೊಳೆ, ಬ್ಲೇಡ್​ನ ಪೀಸ್​ಗಳು, ಕಬ್ಬಿಣದ ಪೀಸ್​ಗಳು, ಕಲ್ಲುಗಳು, ಆರು ಇಂಚಿನ ಸರಪಳಿ ಮತ್ತು ಗಾಜಿನ ತುಂಡು ಪತ್ತೆಯಾಗಿವೆ. ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರೇ ಕಂಗಾಲಾಗಿ ಹೋಗಿದ್ದಾರೆ. ಇಷ್ಟೆಲ್ಲಾ ಕಲ್ಲು, ಕಬ್ಬಿಣದ ತುಂಡುಗಳು ಹಾಗೂ ಮೊಳೆಗಳು ಹೇಗೆ ಆತನ ಹೊಟ್ಟೆ ಸೇರಿದವು ಎಂಬುದೇ ಕುತೂಹಲವಾಗಿದ್ದು,  ಆತನಿಗೆ ಈ ರೀತಿಯ ವಸ್ತುಗಳನ್ನು ತಿನ್ನುವ ಹವ್ಯಾಸವಿತ್ತಾ ಎನ್ನೋದರ ಬಗ್ಗೆ ಪರಿಶೀಲನೆ ನಡೆದಿದೆ.   ಒಟ್ಟಿನಲ್ಲಿ  ಆಹಾರ ತುಂಬಿರಬೇಕಾದ ಹೊಟ್ಟೆ ಕಲ್ಲು-ನಾಣ್ಯದಿಂದ ತುಂಬಿದ್ದರೂ ಆತ ಬದುಕಿರೋದು ಪ್ರಕೃತಿಯ ವೈಚಿತ್ರ್ಯವೇ ಸರಿ .

Watch Here: https://youtu.be/RRiOtm4-bMI