ಯೋಗ್ಯತೆ ಇಲ್ಲದ ಸಚಿವ ಪ್ರಿಯಾಂಕ್ ಖರ್ಗೆ : ಕಾಂಗ್ರೆಸ್ ಹಿರಿಯ ಶಾಸಕನಿಂದಲೇ ವಾಗ್ದಾಳಿ !!

ad


ಸಜ್ಜನ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ ದುರಾಹಂಕಾರದಿಂದ ವಿವಾದಕ್ಕೀಡಾಗಿದ್ದಾರೆ. ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಶಾಸಕರೂ ಆಗಿರುವ ಪ್ರವಾಸೋಧ್ಯಮ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ದ ಕಾಂಗ್ರೆಸ್ ಶಾಸಕ ಮಾಲೀಕಯ್ಯ ಗುತ್ತೇದಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತಿಚೆಗೆ ಮಾಲೀಕಯ್ಯ ಗುತ್ತೇದಾರ್ ಪ್ರತಿನಿಧಿಸುವ ಅಫ್ಜಲ್ ಪುರ ವಿಧಾನಸಭಾ ಕ್ಷೇತ್ರಕ್ಕೆ ಬಂದಿದ್ದ ಪ್ರಿಯಾಂಕ್ ಖರ್ಗೆ, ಮುಂದಿನ ಚುನಾವಣೆಯಲ್ಲಿ ಅಫ್ಜಲ್ ಪುರದಿಂದ ಒಳ್ಳೆಯವರನ್ನು ಗೆಲ್ಲಿಸುವಂತೆ ಕರೆ ನೀಡಿದ್ದರು. ಪ್ರಿಯಾಂಕ್ ಖರ್ಗೆ ಮಾತಿಗೆ ಖಾರವಾಗಿ ಪ್ರತಿಕ್ರಿಯೆ ನೀಡಿರುವ ಮಾಲೀಕಯ್ಯ ಗುತ್ತೆದಾರ್, ಪ್ರಿಯಾಂಕ್ ಖರ್ಗೆ ಸಚಿವನಾಗಲು ಅಯೋಗ್ಯ. ಸಚಿವ ಅನ್ನೊ ಬದಲು ಆತ ಎಂದು ಏಕವಚನ ಪ್ರಯೋಗ ಮಾಡಬೇಕಾಗುತ್ತದೆ. ಅಫ್ಜಲ್ ಪುರದಲ್ಲಿ ಒಳ್ಳೆಯವರನ್ನು ಗೆಲ್ಲಿಸಿ ಅಂದ್ರೆ ನಾನೇನು ಕೆಟ್ಟವನಾ ? ಪ್ರಿಯಾಂಕ ಖರ್ಗೆಗೆ ಸೂಕ್ತ ಸಮಯದಲ್ಲಿ ಉತ್ತರ ನೀಡುತ್ತೇನೆ ಎಂದಿದ್ದಾರೆ.

ಸಂಪುಟ ಪುನರಚನೆಯ ವೇಳೆಯಲ್ಲಿ ಹಿರಿಯ ಶಾಸಕರಾದ ಮಾಲಿಕಯ್ಯ ಗುತ್ತೇದಾರ್, ಎ ಬಿ ಮಾಲಕರೆಡ್ಡಿಯವರನ್ನು ಸಚಿವರನ್ನಾಗಿಸಬೇಕು ಎಂದು ಒತ್ತಡಗಳು ಕೇಳಿ ಬಂದಿದ್ದವು. ಆದರೆ ಮಲ್ಲಿಕಾರ್ಜುನ ಖರ್ಗೆ ಪ್ರಭಾವದಿಂದ ಮೊದಲ ಬಾರಿ ಶಾಸಕನಾಗಿದ್ದ ಪ್ರಿಯಾಂಕ್ ಖರ್ಗೆಗೆ ಐಟಿ ಬಿಟಿ ಪ್ರವಾಸೋಧ್ಯಮ ಸಚಿವರನ್ನಾಗಿ ಮಾಡಲಾಗಿತ್ತು. ಸಚಿವರಾದ ಬಳಿಕ ಚಿತ್ತಾಪುರ ವಿಧಾನಸಭಾ ಕ್ಷೇತ್ರದಲ್ಲೂ ಮತದಾರರ ಜೊತೆ ದುರಹಂಕಾರ ಪ್ರದರ್ಶಿಸಿರೋ ದೂರುಗಳು ಇವೆ. ಪ್ರವಾಸೋದ್ಯಮ ಸಚಿವರಾಗಿ ಇಲಾಖೆಯ ಭ್ರಷ್ಟಾಚಾರದ ಬಗ್ಗೆ ಮೌನ ವಹಿಸಿರೋ ಪ್ರಿಯಾಂಕ್ ಖರ್ಗೆಯ ಒಳ್ಳೆಯತನಕ್ಕಿರುವ ಮಾನದಂಡಗಳು ಏನು ಎಂಬ ಪ್ರಶ್ನೆಗಳು ಕಾಂಗ್ರೆಸ್ ಶಾಸಕರಿಂದಲೇ ವ್ಯಕ್ತವಾಗಿದೆ.