ಭರಚುಕ್ಕಿ ಜಲಪಾತಕ್ಕೆ ಬಿದ್ದು ಬದುಕಿದ ಪ್ರವಾಸಿಗ!!!

Man miraculously escaped from Gaganachukki falls at Mandya.

ಆಯುಷ್ಯ ಗಟ್ಟಿ ಇದ್ದರೇ ಬಂಡೆ ಮೇಲೆ ಬಿದ್ದರೂ ಬದುಕುತ್ತಾನೆ ಅಂತಾರೆ. ಆ ಮಾತಿಗೆ ಈತನೇ ಜೀವಂತ ಸಾಕ್ಷಿ. ಹೌದು ಬೆಂಗಳೂರಿನ ಬನಶಂಕರಿ ಮೂಲದ ಖಾದರ್ ಪಾಷ ಸ್ನೇಹಿತರ ಜೊತೆ ಮಂಡ್ಯದ ಭರಚುಕ್ಕಿ ಜಲಪಾತಕ್ಕೆ ಪ್ರವಾಸಕ್ಕೆ ತೆರಳಿದ್ದ. ಭರಚುಕ್ಕಿ ಜಲಪಾತದ ಬಳಿ ಇರುವ ದರ್ಗಾದಲ್ಲಿ ಪೂಜೆ ಸಲ್ಲಿಸಿದ ಆತ ನೀರಿನಲ್ಲಿ ಆಟವಾಡುವ ವೇಳೆ ಕಾಲು ಜಾರಿ ಭರಚುಕ್ಕಿ ಜಲಪಾತಕ್ಕೆ ಬಿದ್ದಿದ್ದ. ಕೊನೆಗೂ ಸ್ಥಳೀಯರ ಪ್ರಯತ್ನದಿಂದ ಆತನನ್ನು ರಕ್ಷಿಸಲಾಗಿದೆ.

Man miraculously escaped from Gaganachukki falls at Mandya.
Man miraculously escaped from Gaganachukki falls at Mandya.
adಭರಚುಕ್ಕಿ ಜಲಪಾತ ಬಳಿ ಇರೋ ದರ್ಗಾದಲ್ಲಿ ಖಾದರ್ ಪಾಷಾ ಪ್ರಾರ್ಥನೆ ಸಲ್ಲಿಸಿದ ಬಳಿಕ ನೀರಿನಲ್ಲಿ ಆಟವಾಡಲು ಹೋಗಿದ್ದಾನೆ. ಈ ವೇಳೆ ಖಾದರ್ ಪಾಷ ಆಯತಪ್ಫಿ ಜಲಪಾತದೊಳಗೆ ಬಿದ್ದಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದವರು ಕೂಗಿಕೊಂಡು, ರಕ್ಷಣೆಗೆ ಅಂಗಲಾಚಿದ್ದಾರೆ. ಭಾನುವಾರ ಸಂಜೆ ಸಮಯವಾಗಿದ್ದರಿಂದ ಕಾರ್ಯಾಚರಣೆಗೆ ಕತ್ತಲು ಅಡ್ಡಿಯಾಗಿದೆ.

Man miraculously escaped from Gaganachukki falls at Mandya.
Man miraculously escaped from Gaganachukki falls at Mandya.

ಬಳಿಕ ಸೋಮವಾರ ಗಗನಚುಕ್ಕಿ ಜಲಪಾತದ ಬಳಿ ಇದ್ದ ಸ್ಥಳೀಯ ವ್ಯಾಪಾರಿಗಳು ಹಾಗೂ ಬೆಳಕವಾಡಿ ಪೊಲೀಸರು ಕಾರ್ಯಾಚರಣೆ ನಡೆಸಿ, ಜಲಪಾತದೊಳಗೆ ಸಿಲುಕಿದ್ದ ಖಾದರ್ ಪಾಷ ನನ್ನು ರಕ್ಷಣೆ ಮಾಡಿದ್ದಾರೆ. ಮೇಲಿಂದ ಬಿದ್ದ ಪರಿಣಾಮ ಖಾದರ್ ಕಾಲು ಮೂಳೆಗೆ ಪೆಟ್ಟಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ತಕ್ಷಣ ಆತನಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬೆಂಗಳೂರಿಗೆ ಕಳುಹಿಸಲಾಗಿದೆ. ಒಟ್ಟಿನಲ್ಲಿ ಆಯುಷ್ಯ ಗಟ್ಟಿ ಇದ್ದಿದ್ದರಿಂದ ಆತ ಅಷ್ಟು ಎತ್ತರದಿಂದ ಜಲಪಾತಕ್ಕೆ ಬಿದ್ದರೂ ಬದುಕುಳಿದಿದ್ದಾನೆ.

Watch Here: https://youtu.be/dT6uzzcpwbU