ಹಾಲಲ್ಲ ಹಾಲಾಹಲ.. ಕುಡಿಯುವ ಮೊದಲು ಎಚ್ಚರ!!!

Man Poisoning drugs provided to livestock for more milk in Belgaum.
Man Poisoning drugs provided to livestock for more milk in Belgaum.

ಹಾಲಲ್ಲ ಹಾಲಾಹಲ

ad


ಹಲವರಿಗೆ ಬೆಳಿಗ್ಗೆ ಎದ್ದಾಕ್ಷಣ ಬಿಸಿ ಬಿಸಿ ಕಾಫಿ ಬೇಕೇಬೇಕು. ಮಕ್ಕಳ ಬೆಳವಣಿಗೆಗೂ ಹಾಲು ಅತ್ಯಾವಶ್ಯಕ. ಆದರೆ ಇನ್ನು ಇದು ಮಾರಕವಾಗುವ ಎಲ್ಲಾ ಲಕ್ಷಣಗಳೂ ಕಾಣಿಸ್ತಿವೆ. ಬೆಳಗ್ಗೆ ಎದ್ದು ಗಡಿಬಿಡಿಯಲ್ಲಾದ್ರೂ ಕಾಫಿ-ಟೀ, ಹಾಲು ಕುಡಿಯುತ್ತಿದ್ದವ್ರು ಇದೀಗ ಬೆಚ್ಚಿ ಬೀಳುವಂತಾಗಿದೆ. ಹೌದು, ನಿತ್ಯ ಬೆಳಗ್ಗೆ ಎದ್ದು ಅಮೃತ ಸಮಾನ ಅಂತ ಖರೀದಿಸಿ ತರ್ತಿದ್ದ ಹಾಲು ಇದೀಗ ವಿಷ ಅಗಿದೆ. ಹಣದ ದುರಾಸೆಯಿಂದ ಹೆಚ್ಚು ಹಾಲು ಕೊಡುವಂತೆ ಮಾಡಲು ಜಾನುವಾರುಗಳಿಗೆ ವಿಷ ಔಷಧಿ ನೀಡಲಾಗ್ತಿದೆ. ಎಮ್ಮೆ, ಹಸುಗಳಿಗೆ ಆಕ್ಸಿಟೋಕ್ಸಿನ್​​ ಎಂಬ ಇಂಜೆಕ್ಷನ್​​​ ಇಂಜೆಕ್ಟ್​​​ ಮಾಡಲಾಗ್ತಿದೆ. ಈ ಆಕ್ಸಿಟೋಕ್ಸಿನ್ ಮಿಶ್ರಿತ ಹಾಲು ಸೇವಿಸಿದ್ರೆ ಮಕ್ಕಳಿಗೆ ಕ್ಯಾನ್ಸರ್ ಬರುತ್ತೆ. ಅಷ್ಟೇ ಅಲ್ಲ ಕಾಮಾಲೆ ಜೊತೆಗೆ ಮೆದುಳಿಗೆ ರಕ್ತ ಪೂರೈಕೆಯೂ ಕಡಿಮೆ ಆಗುತ್ತದೆ. ಹಾಲಿನಿಂದ ಹೆಣ್ಣು ಮಕ್ಕಳು ಅವಧಿಪೂರ್ಣ ಋತುಮತಿ ಆಗುವ ಅಪಾಯವೂ ಇದೆ ಎನ್ನಲಾಗಿದೆ.

ಆಕ್ಸಿಟೋಕ್ಸಿನ್​​​ ಇಂಜಕ್ಷನ್‌ನ್ನು ಮಹಿಳೆಯರ ಸಲಲಿತ ಹೆರಿಗೆಗಾಗಿ ಬಳಸಲಾಗುತ್ತದೆ. ಜಾನುವಾರುಗಳಿಗೂ ಈ ಇಂಜಕ್ಷನ್ ಬಳಸುತ್ತಿರುವ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಇನ್ಸ್‌ಪೆಕ್ಟರ್ ಗಡ್ಡೇಕರ ಮತ್ತು ಡ್ರಗ್ಸ್ ಕಂಟ್ರೋಲ್ ಅಧಿಕಾರಿ ದೀಪಕ್ ನೇತೃತ್ವದಲ್ಲಿ ಬೆಳಗಾವಿ ಕೋನವಾಲ್ ಗಲ್ಲಿಯಲ್ಲಿ ದಾಳಿ ಮಾಡಲಾಯಿತು.

 

ದಾಳಿ ವೇಳೆ ಆಕ್ಸಿಟೋಕ್ಸಿನ್​​​ ಮಾರಾಟ ಮಾಡುತ್ತಿದ್ದ ಗಂಗಾಧರ ಸಿದ್ದಪ್ಪ ಗವಳಿ ಎಂಬಾತನನ್ನ ಬಂಧಿಸಲಾಗಿದೆ. ಬಂಧಿತ ಗಂಗಾಧರ ಲೇಬಲ್ ಇಲ್ಲದ ಆಕ್ಸಿಟೋಕ್ಸಿನ್​​​ ಇಂಜಕ್ಷನ್‌ನ್ನು ಮಹಾರಾಷ್ಟ್ರದಿಂದ ತರುತ್ತಿದ್ದ ಎನ್ನಲಾಗಿದೆ. ಆತನಿಂದ 73 ಸಾವಿರ ರೂಪಾಯಿ ಮೌಲ್ಯದ ಆಕ್ಸಿಟೋಕ್ಸಿನ್ ಇಂಜಕ್ಷನ್ ಜಪ್ತಿ ಮಾಡಿಕೊಳ್ಳಲಾಗಿದೆ.

ಒಟ್ಟಿನಲ್ಲಿ ಹಣ ಮಾಡಲು ಜನ ಯಾವ ಕಾರ್ಯಕ್ಕೂ ಹೇಸುವುದಿಲ್ಲ ಎನ್ನುವುದಕ್ಕೆ ಇದೊಂದು ನಿದರ್ಶನ.