ಮದರ್ ತೆರೇಸಾ ಮತಾಂತರ ಮಾಡುವವರಂತೆ !! ಆರ್ ಎಸ್ ಎಸ್ ಮುಖಂಡನ ವಿವಾದಾತ್ಮಕ ಹೇಳಿಕೆ !!

Mangesh Bhende's Controversial statement in Hubli.
Mangesh Bhende's Controversial statement in Hubli.

ಮದರ್ ತೆರೆಸಾ ಭಾರತದ ಕುಷ್ಠ ರೋಗಿಗಳ ಪಾಲಿನ ಅಮ್ಮ. ಇಡೀ ಕುಟುಂಬದಿಂದ ನಿರ್ಲಕ್ಷಿತರಾದ ಜನಸಮಯದಾಯವನ್ನು ತೆರೆಸಾ ಅಪ್ಪಿಕೊಂಡವರು. ಸಾಯೋ ಸ್ಥಿತಿಯಲ್ಲಿದ್ದವರನ್ನು ಆರೈಕೆ ಮಾಡಿದರು. ಅಂತಹ ಮದರ್ ತೆರೆಸಾ ಭಾರತ ಹೆಮ್ಮೆ ಎಂದು ನಾವು ಓದಿಕೊಂಡಿದ್ವಿ. ಆದರೆ ಮದರ್ ತೆರೆಸಾ ಮತಾಂತರ ಮಾಡುವುದಕ್ಕಾಗಿ ಇದನ್ನೆಲ್ಲಾ ಮಾಡಿದ್ರಂತೆ. ಹಾಗಂತ ಆರ್ ಎಸ್ ಮುಖಂಡರು ತಕಾರಾರು ಎತ್ತಿದ್ದಾರೆ.

 

 

ಆರ್‌ಎಸ್‌ಎಸ್‌ ರಾಷ್ಟ್ರೀಯ ವ್ಯವಸ್ಥಾಪಕ ಪ್ರಮುಖ ಮಂಗೇಶ್ ಬೆಂಡೆ ಈ ರೀತಿಯ ವಿವಾದಾತ್ಮಕ ಹೇಳಿಕೆಯನ್ನು ಹುಬ್ಬಳ್ಳಿಯಲ್ಲಿ ನೀಡಿದ್ದಾರೆ.

ಮದರ್ ತೆರೇಸಾ ಸೇವೆಯ ಹೆಸರಲ್ಲಿ ಹಿಂದೂಗಳ ಮತಾಂತರ ಮಾಡಿದ್ದಾರೆ ಎಂದು ಹೇಳಿದ್ರು. ಮದರ್ ತೆರೇಸಾ ಸೇವೆಯ ಹೆಸರಲ್ಲಿ ದೇಶದ ಮಾನ ಹರಾಜು ಹಾಕಿದ್ರು, 17 ದೇಶಗಳಿಂದ ಹಣತಂದು ದೇಶದಲ್ಲಿ ಸೇವಾಕೇಂದ್ರ ನಡೆಸಿದ್ರು. ಭಾರತದಲ್ಲಿ ಭಿಕಾರಿಗಳಿದ್ದಾರೆ, ಅಶಿಕ್ಷಿತರಿದ್ದಾರೆ ಎಂದು ಜಗತ್ತಿನಾದ್ಯಂತ ಬಿಂಬಿಸಿದ್ರು ಎಂದು ಹೇಳಿದ್ರು.