ಡಿಸಿ ವರ್ಗಾವಣೆಗೆ ಕಾರಣ ಸಚಿವ ಎ.ಮಂಜು ಪತ್ರ- ಬಹಿರಂಗವಾಯ್ತು ಸರ್ಕಾರದ ಷಡ್ಯಂತ್ರ!!

Minister A. Manju and Team Transfer Hassan IAS Officer Rohini Sinduri.
Minister A. Manju and Team Transfer Hassan IAS Officer Rohini Sinduri.

ಮಹಾಮಸ್ತಕಾಭಿಷೇಕದ ಹೊತ್ತಿನಲ್ಲೇ ಹಾಸನ ಜನತೆಗೆ ಸಿಎಂ ಸಿದ್ದು ನೇತೃತ್ವದ ಸರ್ಕಾರ ಸಖತ್ ಶಾಕ್​ ನೀಡಿದೆ.

 

ಹೌದು ಹಾಸನದ ದಕ್ಷ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರನ್ನು ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಸಚಿವ ಎ.ಮಂಜು ಒತ್ತಡದಿಂದಲೇ ಸರ್ಕಾರ ಈ ಆದೇಶ ನೀಡಿರುವುದು ಸಾಬೀತಾಗಿದ್ದು, ಈ ಬಗ್ಗೆ ಎಕ್ಸಕ್ಲೂಸಿವ್​ ದಾಖಲೆ ಬಿಟಿವಿನ್ಯೂಸ್​​ಗೆ ಲಭ್ಯವಾಗಿದೆ.  ಡಿಸಿ ರೋಹಿಣಿ ಸಿಂಧೂರಿ ವರ್ಗಾವಣೆಗೆ ಜಿಲ್ಲಾ ಉಸ್ತುವಾರಿ ಸಚಿವ ಎ ಮಂಜು ಕಾರಣ ಎಂಬ ಮಾತು ಕೇಳಿಬಂದಿದ್ದು, ಇದಕ್ಕೆ ಪೂರಕವಾಗಿ ಸಚಿವ ಎ ಮಂಜು ಬರೆದಿರುವ ಪತ್ರ ಕೂಡ ಲಭ್ಯವಾಗಿದೆ.ಕಳೆದ ವರ್ಷವೇ ಡಿಸಿ ವರ್ಗಾವಣೆಗೆ ಸ್ಕೆಚ್​ ಹಾಕಿದ್ದ ಎ ಮಂಜು ಆಗಲೇ ಪತ್ರ ಬರೆದಿದ್ದರು.

 

 

ಅಲ್ಲದೇ ಈಗ ಮಹಾಮಹಸ್ತಕಾಭಿಷೇಕಕ್ಕೆ ಬಿಡುಗಡೆಯಾಗಿರುವ 150 ಕೋಟಿ ರೂಪಾಯಿ ಹಣವನ್ನು ವಿವಿಧ ಕಾಮಗಾರಿಗಾಗಿ ಟೆಂಡರ್ ನೀಡದೇ ಬಳಕೆ ಮಾಡಲು ಮಂಜು ಸಿದ್ಧತೆ ನಡೆಸಿದ್ದರು.  ಲೋಕೋಪಯೋಗಿ ಇಲಾಖೆಯಿಂದ ಟೆಂಡರ್​​ ಕರೆಯಲು ಆದೇಶವಿದ್ದರೂಇದನ್ನು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ವತಿಯಿಂದ ಕೈಗೆತ್ತಿಕೊಳ್ಳಲು ಎ.ಮಂಜು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಸರ್ಕಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಪತ್ರ ಬರೆದಿದ್ದಾರೆ.  ಲೋಕೋಪಯೋಗಿ ಇಲಾಖೆ ಅಡಿ ಟೆಂಡರ್​ ಕರೆದರೆ ಅಕ್ರಮ ಎಸಗಲು ಅಸಾಧ್ಯ. ಹೀಗಾಗಿ ಕೆಆರ್​ಡಿಸಿಎಲ್​​ ಮೂಲಕ ಕಾಮಗಾರಿ ನಡೆಸಲು ಟೆಂಡರ್​ಗೆ ಮಂಜು ಪಟ್ಟು ಹಿಡಿದಿದ್ದಾರೆ. ಆದರೇ ಇದಕ್ಕೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ನಿರಾಕರಿಸಿದ್ದರಿಂದ ಅಂದಿನಿಂದಲೇ ಡಿಸಿ ಮೇಲೆ ಮಂಜು ದ್ವೇಷ ಸಾಧಿಸುತ್ತ ಬಂದಿದ್ದು, ಇದೀದ ಸರ್ಕಾರದ ಮೇಲೆ ಒತ್ತಡ ಹೇರಿ ವರ್ಗಾವಣೆ ಮಾಡಿಸುವಲ್ಲಿ ಎ ಮಂಜು ಯಶಸ್ವಿಯಾಗಿದ್ದಾರೆ. ಇನ್ನು ದಕ್ಷ ಡಿಸಿ ವರ್ಗಾವಣೆ ಖಂಡಿಸಿ ಜೆಡಿಎಸ್​ ಹಾಗೂ ವಿವಿಧ ಪಕ್ಷದ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.

1 ಕಾಮೆಂಟ್

  1. ಅದಿಕಾರ ಕೊಟ್ಟಿದ್ದೇವೆ ಅಹಂಕಾರ ಬಂದಿದೆ.ಅವರ ದಬ್ಬಾಳಿಕೆಗೆ ದೆಬ್ಬೆ ಕಟ್ಟೋಣ.

Comments are closed.