ಅಪರಿಚಿತ ಶವದ ರಹಸ್ಯ ಬಯಲು ಮಾಡಿದಾಗ ಪತ್ನಿಯೇ ಹಂತಕಿಯಾಗಿದ್ದಳು..

ಪ್ರಿಯಕರನೊಂದಿಗೆ ಸೇರಿಕೊಂಡು ಕೈ ಹಿಡಿದ ಪತಿಯನ್ನೆ ಹತ್ಯೆ ಮಾಡಿರೋ ಆರೋಪಗಳನ್ನು ನವನಗರ ಪೊಲೀಸರು ಬಂಧಿಸಿದ್ದಾರೆ. ಹುಬ್ಬಳ್ಳಿಯ ಬಲ್ಡೋಜರ ನಿವಾಸಿ 40 ವರ್ಷದ ಮಹ್ಮದರಫೀಕ್ ಅಯಟ್ಟಿ ಎನ್ನುವಾತನನ್ನು ಪತ್ನಿ‌ ಶಬನಾ ಹಾಗೂ ಪ್ರೀಯಕರ ಭಾಷಾಸಾಬ್ ಧಾರವಾಡ ಸೇರಿ ಹತ್ಯೆ ಮಾಡಿದ್ರು.

ad


ಜುಲೈ ‌11 ರಂದು ಮನೆಯಿಂದ ಬೇರೆವೊಂದು ಕೆಲಸಯಿದೆ ಅಂತಾ ಹೇಳಿ ಬೈಕ್ ಮೇಲೆ ಕರೆದುಕೊಂಡು ಹೋಗಿ ಹುಬ್ಬಳ್ಳಿಯ ಹೊರವಲಯದ ಮಾರಡಗಿ ರಸ್ತೆಯ ಜಮೀನಿನ ಮರದ ಕೇಳಿಗೆ ಕಂಠಪೂರ್ತಿ ಕುಡಿಸಿ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿ ಹಂತಕರು ಅಮಾಯಕರಿಂದ ಓಡಾಡಿಕೊಂಡಿದ್ದರು.

 

ಜಮೀನಿಯ ಮಾಲೀಕ ಸಿದ್ದಪ್ಪ ಸವದತ್ತಿ ಎನ್ನುವಾತ ತನ್ನ ಜಮೀನಿನಲ್ಲಿ ಅಪರಿಚಿತ ಶವ ಬಿದ್ದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದ. ಆಗ ನವನಗರ ಪೊಲೀಸರು ಅಪರಿಚಿತ ಅಪರಿಚಿತ ಶವ ಪತ್ತೆ ಎಂದು ಪ್ರಕರಣ ದಾಖಲಿಸಿಕೊಂಡಿದ್ರು. ಪೊಲೀಸರಿಗೆ ಸಿಕ್ಕ ಸಣ್ಣದೊಂದು ಮಾಹಿತಿ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿದ್ದಾಗ ಅಪರಿಚಿತ ಶವದ ರಹಸ್ಯ ಬಯಲಾಗಿದೆ.

ನವನಗರ ಇನ್ಸ್ಪೆಕ್ಟರ್ ಎಸ್ ಆರ್ ನಾಯ್ಕ ನೇತೃತ್ವದಲ್ಲಿ
ಪೊಲೀಸರು ತನಿಖೆ ನಡೆಸಿದಾಗ, ಅನೈತಿಕ ಸಂಬಂಧಕ್ಕೆ ಪತಿ ವಿರೋಧ ವ್ಯಕ್ಯಪಡೆಸುತ್ತಿದ್ದ. ಹಾಗಾಗಿ ಪ್ಲಾನ್ ಮಾಡಿ ಪತ್ನಿ ಹಾಗೂ ಪ್ರೀಯಕರ ಸೇರಿ ಹತ್ಯೆ ಮಾಡಿರೋದಾಗಿ ಪೊಲೀಸರ ಮುಂದೆ ತಪ್ಪೋಪ್ಪಿಕೊಂಡಿದ್ದಾರಂತೆ. ಸದ್ಯ ಕೊಲೆ ಆರೋಪಿಗಳನ್ನು ಬಂಧಿಸಿ‌ ಜೈಲಿಗೆ ಕಳಿಸಿಕೊಂಡಿದ್ದಾರೆ…