ಡಾಕ್ಟರ್​​ ಇಂಜಕ್ಷನ್​​ ತಂದ ಸಾವು!!

ಬಾಳಿ ಬದುಕಬೇಕಿದ್ದ ಪ್ರತಿಭಾನ್ವಿತ ಬಿಎಸ್ಸಿ ಪದವೀಧರೆ ಯುವತಿಯೊಬ್ಬಳು ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾದ ಘಟನೆ ಮೈಸೂರಿನಲ್ಲಿ ನಡೆದಿದೆ. ಜಿಲ್ಲೆಯ ಎಚ್​.ಡಿ.ಕೋಟೆಯ ಹಂಪಾಪುರ ಕಾಳಿಹುಂಡಿಯ ಅಂಕುಶ ಮೃತ ದುರ್ದೈವಿ.

adಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಮೈಸೂರಿನ ಎಚ್.ಡಿ.ಕೋಟೆಯ ಅಂಕುಶ್ ಹಂಪಾಪುರದ ಕ್ಲಿನಿಕ್​ವೊಂದಕ್ಕೆ ಚಿಕಿತ್ಸೆಗೆ ತೆರಳಿದ್ದರು. ಈ ವೇಳೆ ಕ್ಲಿನಿಕ್​​ ವೈದ್ಯ ಡಾ.ರಾಜು ಯುವತಿಯನ್ನು ಪರಿಶೀಲಿಸಿ ಚುಚ್ಚುಮದ್ದು ನೀಡಿದ್ದರು. ಆದರೆ ಇಂಜಕ್ಷನ್​ ನೀಡಿದ ಜಾಗದಲ್ಲಿ ಸೋಂಕು ಉಂಟಾಗಿದ್ದರಿಂದ ಅಂಕುಶ್​​ಳನ್ನು ಹೆಚ್ಚಿನ ಚಿಕಿತ್ಸೆಗಾಗಿ ನಿನ್ನೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೇ ಅಂಕುಶ್​​ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾರೆ.

ಈ ವಿಚಾರ ತಿಳಿಯುತ್ತಿದ್ದಂತೆ ಹಂಪಾಪುರದ ಕ್ಲಿನಿಕ್ ವೈದ್ಯ ಡಾ.ರಾಜು ಕ್ಲಿನಿಕ್ ಮುಚ್ಚಿ ಪರಾರಿಯಾಗಿದ್ದಾನೆ. ಪೋಷಕರ ದೂರಿನ ಮೇರೆಗೆ ಹಂಪಾಪುರ ಪೊಲೀಸರು ವೈದ್ಯರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಒಂದೆಡೆ ವೈದ್ಯರ ಮುಷ್ಕರದಿಂದ ರೋಗಿಗಳು ಸಮಸ್ಯೆಗಿಡಾಗುತ್ತಿದ್ದರೆ ಇಲ್ಲಿ ವೈದ್ಯ ನೀಡಿದ ಚಿಕಿತ್ಸೆಯಿಂದಲೆ ಯುವತಿ ಸಾವನ್ನಪ್ಪಿರೋದು ನಿಜಕ್ಕೂ ದುರಂತವೇ ಸರಿ.

 

Watch Here: