ಬಾರ್​ನಲ್ಲೇ ಹೊಡೆದಾಡಿದ ಪೇದೆ- ಕುಡಿದ ಮತ್ತಿನಲ್ಲಿ ಆರಕ್ಷಕನ ಅವಾಂತರ!!

ಎಲ್ಲಾದರೂ ಗಲಾಟೆಯಾದ್ರೆ ಪೊಲೀಸರು ಬಂದು ಸಂತ್ರಸ್ತರನ್ನು ರಕ್ಷಿಸುತ್ತಾರೆ. ಆದರೇ ಇಲ್ಲಿ ಪೊಲೀಸಪ್ಪನೇ ಪಕ್ಕಾ ಲೋಕಲ್​​ ರೌಡಿಯಂತೆ ಅವಾಂತರ ಸೃಷ್ಟಿಸಿದ್ದ. ಬಾರ್​ನಲ್ಲಿ ಕುಡಿಯಲು ಬಂದಿದ್ದಲ್ಲದೇ ಪಕ್ಕದ ಟೇಬಲ್​ನಲ್ಲಿ ಕೂತ ವ್ಯಕ್ತಿ ಜೊತೆ ಜಗಳ ತೆಗೆದು ಕೈ-ಕೈ ಮಿಲಾಯಿಸಿ ಹೀನಾಯವಾಗಿ ವರ್ತಿಸಿ ಅಶಿಸ್ತು ಮೆರೆದಿದ್ದಾನೆ.

ಹೌದು ಬಾಗಲಕೋಟೆಯಲ್ಲಿ ಇಂತಹದೊಂದು ಅವಾಂತರ ನಡೆದಿದ್ದು, ಬಾರ್​ನಲ್ಲಿ ಕುಡಿಯಲು ಪೊಲೀಸ್​​ ಪೇದೆ ಪಕ್ಕದ ಟೇಬಲ್​ನಲ್ಲಿದ್ದ ವ್ಯಕ್ತಿಯ ಜೊತೆ ಕ್ಷುಲಕ್ ಕಾರಣಕ್ಕೆ ಜಗಳ ತೆಗೆದಿದ್ದಾನೆ. ಅಕ್ಕ-ಪಕ್ಕದವರು ಜಗಳ ಬಿಡಿಸಲು ಯತ್ನಿಸಿದರೂ ತಲೆಕೆಡಿಸಿಕೊಂಡಿಲ್ಲ. ಡ್ಯೂಟಿಯಲ್ಲೇ ಇದ್ದ ಪೇದೆಯನ್ನು ಹಿಡಿಯಲು ಇತರರು ಪ್ರಯತ್ನಿಸಿದರೂ ಸಫಲವಾಗಿಲ್ಲ. ಹೀಗಾಗಿ ಪೊಲೀಸ್​​ ಪೇದೆ ವ್ಯಕ್ತಿಯ ಜೊತೆ ರಕ್ತ ಬರುವಂತೆ ಹೊಡೆದಾಡಿಕೊಂಡಿದ್ದಾನೆ.

 

 

ಹೀಗೆ ಬಾರ್​ನಲ್ಲಿ ಹೊಡೆದಾಡಿ ಅವಾಂತರ ಸೃಷ್ಟಿಸಿದ ಪೇದೆಯನ್ನು ಮುತ್ತಪ್ಪ ಎಂದು ಗುರುತಿಸಲಾಗಿದೆ. ಇನ್ನು ಈ ಪೇದೆ ವ್ಯಕ್ತಿಯೊಂದಿಗೆ ಹೊಡೆದಾಡಿಕೊಂಡಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಜನರನ್ನು ರಕ್ಷಿಸಬೇಕಾದ, ಜಗಳವಾಡಿಕೊಳ್ಳುವ ಜನರನ್ನು ನಿಯಂತ್ರಿಸಬೇಕಾದ ಪೊಲೀಸಪೇದೆಯೇ ಈ ರೀತಿ ವರ್ತಿಸಿರೋದು ಇದೀಗ ಚರ್ಚೆಗೆ ಗ್ರಾಸವಾಗಿದ್ದು, ಈ ಪೇದೆಯ ಹೊಡೆದಾಟದ ದೃಶ್ಯ ಜನರಿಗೆ ಪುಕ್ಕಟ್ಟೆ ಎಂಟರಟೇನ್​ ನೀಡಿದಂತೂ ಸುಳ್ಳಲ್ಲ.