2 ಕೋಟಿ ಲೂಟಿ ಮಾಡಿ ಪರಾರಿಯಾದ್ರು ಸಿಸಿಬಿ ಪೊಲೀಸರು- ಕಂಗಾಲಾದ ಮಹಿಳೆ ಮಾಡಿದ್ದೇನು?

Police Officers Looted 2 Crores in name of Investigation.

ಇದು ಬೇಲಿಯೇ ಎದ್ದು ಹೊಲ ಮೇಯ್ದ್​ ಕತೆ. ಹೌದು ಅಕ್ರಮಗಳನ್ನು ಎಸಗುವವ ಬೆನ್ನಟ್ಟಿ ಬೇಟೆಯಾಡಿ ಹೆಡೆಮುರಿ ಕಟ್ಟಬೇಕಾದ ಪೊಲೀಸರೇ ಇಲ್ಲಿ ಲೂಟಿಗೆ ನಿಂತಿದ್ದಾರೆ. ಹೌದು ಸಿಸಿಬಿ ಪೊಲೀಸರು ಇತ್ತೀಚೆಗೆ ಕಪ್ಪು ಹಣ ಹೊಂದಿದ್ದ ಮಹಿಳೆಯೊರ್ವಳ ಮೇಲೆ ದಾಳಿ ನಡೆಸಿದ್ದರು. ಈ ವೇಳೆ 3 ಕೋಟಿ ರೂಪಾಯಿ ಪತ್ತೆಯಾಗಿತ್ತು. ಆದರೇ 2 ಕೋಟಿ ರೂಪಾಯಿ ಗುಳುಂ ಮಾಡಿದ ಸಿಸಿಬಿ ಪೊಲೀಸರು   ಕೇವಲ 1 ಕೋಟಿ ರೂಪಾಯಿ ಲೆಕ್ಕ ಕೊಟ್ಟರು ಇಲಾಖೆಗೆ ವಂಚಿಸಿದ್ದಾರೆ. ಈ ಪ್ರಕರಣ ಈಗ ಬೆಳಕಿಗೆ ಬಂದಿದ್ದು, ಇಬ್ಬರು ಸಿಸಿಬಿ ಪೇದೆಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ad 

ಆದರೇ ಪೊಲೀಸರ ಈ ದೌರ್ಜನ್ಯದಿಂದ ಕಂಗಾಲಾದ ಸಂತ್ರಸ್ತ ಮಹಿಳೆ ಸೆಂಟ್ರಲ್​ ಡಿಸಿಪಿ ಚಂದ್ರಗುಪ್ತ ಮೊರೆ ಹೋಗಿದ್ದು, ಪ್ರಕರಣದ ತನಿಖೆ ನಡೆಸಿದ ಡಿಸಿಪಿ ಚಂದ್ರಗುಪ್ತಅವರಿಗೆ ಮೇಲ್ನೋಟಕ್ಕೆ ಸಿಸಿಬಿಯ ಇಬ್ಬರು ಪೇದೆಗಳಾದ ಹೊಂಬಾಳೆಗೌಡ್​ ಮತ್ತು ಗಂಗಾಧರ ಹಾಗೂ ಎಸಿಪಿ ಅಕ್ರಮ ಎಸಗಿರೋದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಡಿಸಿಪಿ ಚಂದ್ರಗುಪ್ತ ಅವರು ನಗರ ಪೊಲೀಸ್ ಆಯುಕ್ತ ಸುನೀನ್ ಕುಮಾರ್ ಅವರಿಗೆ ಮಾಹಿತ ನೀಡಿದ್ದಾರೆ. ಇದರಿಂದ ಕೆಂಡಾಮಂಡಲರಾದ ಕಮೀಷನರ್ ಡಿಸಿಪಿ ಚಂದ್ರಗುಪ್ತ ಅವರಿಗೆ ತನಿಖೆಗೆ ಆದೇಶಿಸಿದ್ದಾರೆ.

 


ಇದೀಗ ಹೈಗ್ರೌಂಡ್ಸ್​ ಪೊಲೀಸ್ ಠಾಣೆಯಲ್ಲಿ ಹೊಂಬಾಳೆಗೌಡ್, ಗಂಗಾಧರ ವಿರುದ್ಧ ಪ್ರಕರಣ ದಾಖಲಾಗಿದೆ. ಆದರೇ ಎಸಿಪಿಯನ್ನು ತನಿಖೆಯಿಂದ ಹೊರಗಿಡಲಾಗಿರೋದು ಹಲವು ಅನುಮಾನಕ್ಕೆ ಕಾರಣವಾಗಿದೆ. ಇನ್ನು ಆರೋಪಿ ಸ್ಥಾನದಲ್ಲಿರುವ ಪೇದೆಗಳಾದ ಹೊಂಬಾಳೆಗೌಡ್ ಹಾಗೂ ಗಂಗಾಧರ ಕಳೆದ ಹತ್ತಾರು ವರ್ಷದಿಂದ ಸಿಸಿಬಿಯಲ್ಲೇ ಇದ್ದು, ಅಪಾರ ಪ್ರಮಾಣ ಅಕ್ರಮ ಆಸ್ತಿ ಸಂಗ್ರಹಿಸಿದ್ದಾರೆ ಎನ್ನಲಾಗಿದೆ. ಆದರೂ ಇಲಾಖೆ ಅವರನ್ನು ವರ್ಗಾಯಿಸದೇ ಸಿಸಿಬಿಯಲ್ಲೇ ಉಳಿಸಿಕೊಂಡಿದೆ. ಇದೀಗ ಹೈಗ್ರೌಂಡ್ಸ್​ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಇಬ್ಬರು ಪೇದೆಗಳು ನಾಪತ್ತೆಯಾಗಿದ್ದಾರೆ.

ಇನ್ನು ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಪ್ರತಿಕ್ರಿಯಿಸಿದ್ದು, ಮಹಿಳೆಯೊಬ್ಬರು ಒಂದು ಕೋಟಿ ಹಣವನ್ನು ಕನ್ವರ್ಟ್ ಮಾಡಲು ಪ್ರಯತ್ನ ಮಾಡ್ತಿದ್ರು. ಈ ಸಂದರ್ಭದಲ್ಲಿ ಪೊಲೀಸ್ರು ಭಾಗಿಯಾಗಿದ್ದಾರೆ ಅಂತ ಅವರು ಆರೋಪ ಮಾಡಿದ್ದಾರೆ. ಆ ವಿಚಾರವಾಗಿ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾತಿ ವಿಚಾರಣೆಯಲ್ಲಿದೆ. ಪೊಲೀಸ್ರು ದಂಧೆಯಲ್ಲಿ ಭಾಗಿಯಾಗಿರೋದು ಗೊತ್ತಾಗಿದೆ. ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದರು. ಇನ್ನು ಈ ಬಗ್ಗೆ ಹೋಂ ಮಿನಿಸ್ಟರ್​ ರಾಮಲಿಂಗಾ ರೆಡ್ಡಿ ಕೂಡಾ ಪ್ರತಿಕ್ರಿಯಿಸಿದ್ದು, ಸಿಸಿಬಿ ಪೊಲೀಸರು ಅಕ್ರಮದಲ್ಲಿ ಭಾಗಿಯಾಗಿರುವ ಆರೋಪ ಕೇಳಿಬಂದಿದೆ. ತನಿಖೆ ನಡೆದಿದೆ. ವರದಿ ಬಂದ ಬಳಿಕ ಕ್ರಮಕೈಗೊಳ್ಳಳಾಗುವುದು ಎಂದರು.