ಹುಬ್ಬಳ್ಳಿಯಲ್ಲಿ ಲಿಂಗಾಯತ ಶಕ್ತಿ ಪ್ರದರ್ಶನ ! ಸಿಗುತ್ತಾ ಸಾಂವಿಧಾನಿಕ ಮಾನ್ಯತೆ ?

ಹುಬ್ಬಳ್ಳಿಯಲ್ಲಿ ಲಿಂಗಾಯತ ಧರ್ಮದ ಸಾಂವಿಧಾನಿಕ ಮಾನ್ಯತೆಗಾಗಿ ಬೃಹತ್ ಸಮಾವೇಶ ನಡೆಯುತ್ತಿದೆ. ಕಾಂಗ್ರೆಸ್ ನ ಹಿರಿಯ ಲಿಂಗಾಯತ ಸಚಿವರು, ಲಿಂಗಾಯತ ಮುಖಂಡರು ಸ್ವಾಮಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಲಕ್ಷಾಂತರ ಲಿಂಗಾಯತರು ಭಾಗಿಯಾಗಿದ್ದಾರೆ.

ಸಮಾವೇಶವನ್ನು ಕನ್ನಡ ದ್ವಜಾರೋಹನ ಮಾಡುವ ಮೂಲಕ ಕರವೇ ಮುಖಂಡ ಅಮೃತ ಇಜಾರೆ ಚಾಲನೆ ನೀಡಿದರು.

ಸಂಪುಟದ ಹಿರಿಯ ಸಚಿವರಾದ ಎಂ.ಬಿ.ಪಾಟೀಲ, ಶರಣಪ್ರಕಾಶ ಪಾಟೀಲ, ವಿನಯ ಕುಲಕರ್ಣಿ, ಮಾಜಿ ಸಚಿವರುಗಳಾದ ಬಸವರಾಜ ಹೊರಟ್ಟಿ, ಎಸ್.ಎಸ್.ಪಾಟೀಲ, ಪಿ.ಸಿ.ಸಿದ್ಧನಗೌಡ, ಪ್ರಮುಖರಾದ ವೀರಣ್ಣ ಮತ್ತಿಗಟ್ಟಿ, ನಿವೃತ್ತ ಐಎಸ್ ಎ ಅಧಿಕಾರಿ ಎಸ್.ಎಂ. ಜಾಮದಾರ್, ಅನಿಲಕುಮಾರ ಪಾಟೀಲ, ಪ್ರಕಾಶ್ ಹುಕ್ಕೇರಿ ಉಪಸ್ಥಿತರಿದ್ದರು.

ಬಸವ ಮಂಟಪದ ಮಾತೆ ಮಹಾದೇವಿ, ಗದಗಿನ ತೋಂಟದ ಸಿದ್ಧಲಿಂಗ ಶ್ರೀಗಳು, ಚಿತ್ರದುರ್ಗದ ಶ್ರೀ ಮೃತ್ಯುಂಜಯ ಶ್ರೀಗಳು, ಕೂಡಲಸಂಗಮದ ಜಯ ಮೃತ್ಯುಂಜಯ ಮಹಾಸ್ವಾಮಿಗಳು, ನಿಡಸೋಸಿ ಮಠದ ಶ್ರೀಗಳು, ನಿಜಗುಣಾನಂದ ಶ್ರೀಗಳು ಸೇರಿದಂತೆ ನೂರಾರು ಶ್ರೀಗಳು ಮುಖಂಡರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

 

 

ಮೂರುಸಾವಿರ ಮಠದ ಶ್ರೀ ಜಗದ್ಗುರು ಗಂಗಾಧರ ರಾಜಯೋಗಿಂದ್ರ ಮಹಾಸ್ವಾಮಿಗಳು ಗೈರು ಹಾಜರಾಗಿದ್ದು ವೇದಿಕೆಯಲ್ಲೂ ಅವರ ಹೆಸರಿನ ಆಸನವನ್ನು ಸಂಘಟಕರು ಹಾಕಿಲ್ಲ.

ಬಿಜೆಪಿಯ ಲಿಂಗಾಯತ ಮುಖಂಡರು ಈ ಸಮಾವೇಶದಿಂದ ದೂರ ಉಳಿದಿದ್ದಾರೆ. ಆದರೆ ಭಾರತೀಯ ಜನತಾ ಪಕ್ಷದ ಪಾಲಿಕೆಯ ಮಾಜಿ ಸದಸ್ಯ ಅಜ್ಜಪ್ಪ ಬೆಂಡಿಗೇರಿ ಸಮಾವೇಶದಲ್ಲಿ ಭಾಗಿಯಾಗಿದ್ದಾರೆ.

ಇದು ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ನಡೆಯುವ ಶಕ್ತಿಪ್ರದರ್ಶನವಾಗಿದ್ದು, ರಾಜ್ಯ ಮತ್ತು ಕೇಂದ್ರ ಸರಕಾರ ಯಾವ ಪ್ರತಿಕ್ರಿಯೆ ನೀಡುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.