ಪೋಷಕರಿಗೆ ತಿಳಿಯದೇ ಕಾಲೇಜಿಗೆ ಚಕ್ಕರ್ ಹಾಕಿದ್ರೆ ಹುಷಾರ್ !! ನಿಮಗೆ ಶಾಕ್ ಕೊಡುತ್ತೆ ಪಿಯು ಬೋರ್ಡ್ ಮಾಸ್ಟರ್ ಪ್ಲಾನ್ !!

PU Board Master Plan: Message to parents about Attendance of student in each month.
PU Board Master Plan: Message to parents about Attendance of student in each month.

ಈ ಹಿಂದೆ ಪಿಯು ವಿದ್ಯಾರ್ಥಿಗಳಉ ಕಾಲೇಜಿಗೆ ಚಕ್ಕರ್ ಹಾಕಿ ಮಾಲ್, ಪಾರ್ಕ್, ಸಿನೇಮಾ ಎಂದು ತಿರುಗುತ್ತಿದ್ದರು. ಆದರೆ ಈಗ ಪಿಯು ಕಾಲೇಜಿನಲ್ಲಿ ಶೇಕಡಾ 90 ರಷ್ಟು ವಿದ್ಯಾರ್ಥಿಗಳ ಹಾಜರಾತಿ ಕಂಡು ಬರುತ್ತಿದೆ.

ದಿಡೀರನೇ ಪಿಯು ವಿದ್ಯಾರ್ಥಿಗಳಿಗೆ ದೇವರು ಈ ಪರಿಯ ಒಳ್ಳೆ ಬುದ್ದಿ ಕೊಟ್ಟಿದ್ದೇಗೆ ಎಂದು ಯೋಚಿಸ್ತಿದ್ದೀರಾ ? ಇದು ದೇವರ ಮಹಿಮೆಯಲ್ಲ. ಬದಲಾಗಿ ಮೊಬೈಲ್ ಮೆಸೇಜ್ ಟೋನ್ ನ ಮಹಿಮೆ !
ಹೌದು. ದ್ವಿತೀಯ ಪಿಯುಸಿಯಲ್ಲಿ ವಿದ್ಯಾರ್ಥಿಗಳು ತರಗತಿಗಳಿಗೆ ಗೈರು ಹಾಜರಾಗುವುದನ್ನು ಗಂಭೀರವಾಗಿ ಪರಿಗಣಿಸಿದ್ದ ಪಿಯು ಬೋರ್ಡ್ ಎಲ್ಲಾ ಪಿಯು ಕಾಲೇಜುಗಳಿಗೆ ಒಂದು ಆದೇಶ ಹೊರಡಿಸಿತ್ತು.

 

 

ವಿದ್ಯಾರ್ಥಿಗಳು ಎಷ್ಟು ದಿನ ಕಾಲೇಜಿಗೆ ಬರುತ್ತಿದ್ದಾರೆ, ಯಾವಾಗ ಗೈರಾಗುತ್ತಿದ್ದಾರೆ ಎಂಬುದನ್ನು ವಿದ್ಯಾರ್ಥಿಗಳ ಪೋಷಕರಿಗೆ ತಿಳಿಸುವಂತೆ ಪಿಯು ಬೋರ್ಡ್ ಕಾಲೇಜುಗಳಿಗೆ ಸೂಚನೆ ನೀಡಿತ್ತು. ಈ ಹಿನ್ನಲೆಯಲ್ಲಿ ಪ್ರತಿ ತಿಂಗಳು ವಿದ್ಯಾರ್ಥಿಗಳ ಹಾಜರಾತಿ ಮತ್ತು ಗೈರು ಹಾಜರಾತಿಯನ್ನು ಪೋಷಕರಿಗೆ ಮೊಬೈಲ್ ಸಂದೇಶದ ಮೂಲಕ ಕಾಲೇಜುಗಳು ಕಳುಹಿಸುತ್ತಿವೆ. ಪ್ರತಿ ತಿಂಗಳು ವಿದ್ಯಾರ್ಥಿಗಳ ಗೈರು ಹಾಜರಾತಿಯ ಕುರಿತು ಪೋಷಕರಿಗೆ ತಿಳಿಸುತ್ತಿರೋದ್ರಿಂದ ಕಾಲೇಜಿಗೆ ಗೈರು ಹಾಜರಾಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ತೀರಾ ಕಡಿಮೆಯಾಗಿದೆ. ಎಲ್ಲಾ ವಿದ್ಯಾರ್ಥಿಗಳು ಇದೀಗ ರೆಗ್ಯುಲರ್ ಆಗಿ ಕಾಲೇಜಿಗೆ ಆಗಮಿಸುತ್ತಿದ್ದಾರೆ ಅಂತಾರೆ ಅಮ್ಮ ಣ್ಣಿ ಕಾಲೇಜಿನ ಪಿಯು ವಿಭಾಗದ ಪ್ರಾಂಶುಪಾಲರು. ವಿದ್ಯಾರ್ಥಿಗಳ ಹಾಜರಾತಿ ಹಾಗೂ ಗೈರು ಹಾಜರಾತಿಯ ಕುರಿತಂತೆ ಪ್ರತಿ ತಿಂಗಳು ಪೋಷಕರಿಗೆ ತಿಳಿಸುತ್ತಿರುವುದರಿಂದ ನಮಗೂ ತುಂಬಾ ಅನುಕೂಲವಾಗಿದೆ ಅಂತಾರೆ ವಿದ್ಯಾರ್ಥಿಗಳು..