ಹುಂಜ ನುಂಗಿ ಕಷ್ಟಕ್ಕೆ ಸಿಲುಕಿದ ಹೆಬ್ಬಾವು!!- ಮುಂದೇನಾಯ್ತು?

ಮನೆಗೆ ಬಂದ ಅತಿಥಿಯೊಬ್ಬರು ಭರ್ಜರಿಯಾಗಿಯೇ ಊಟ ಮಾಡಿದ್ದರು. ಆದರೇ ಊಟ ಮಾಡಿದ ಬಳಿಕ ಹೊಟ್ಟೆ ಭಾರವಾಗಿ ಆಹಾರ ಜೀರ್ಣಿಸಿಕೊಳ್ಳಲಾಗದೇ ಒದ್ದಾಡತೊಡಗಿದ್ದರು. ಕೊನೆಗೆ ಮನೆಯವರೆಲ್ಲ ಸೇರಿ ಅತಿಥಿಯ ಹೊಟ್ಟೆಭಾರ ಇಳಿಸಿಕೊಳ್ಳಲು ನೆರವಾದ್ರು. ಇಷ್ಟಕ್ಕೂ ಮನೆಗೆ ಬಂದ ಅತಿಥಿ ಯಾರು ಗೊತ್ತ ಹೆಬ್ಬಾವು.

adಮಂಗಳೂರಿನ ಬಜಾಲ್​ನಲ್ಲಿ ಮನೆಯೊಂದಕ್ಕೆ ಹೆಬ್ಬಾವು ನುಗ್ಗಿದೆ. ಅಷ್ಟೇ ಅಲ್ಲ ಅಲ್ಲೆ ಕೋಳಿಗೂಡಿನಲ್ಲಿದ್ದ ಹುಂಜವನ್ನು ಅದನ್ನು ಕಟ್ಟಲಾಗಿದ್ದ ಹಗ್ಗದ ಸಮೇತ ನುಂಗಿದೆ. ಆದರೇ ಹುಂಜ ನುಂಗಿದ ಮೇಲೆ ಹೆಬ್ಬಾವು ಜೀರ್ಣಿಸಿಕೊಳ್ಳಲಾಗದೇ ಒದ್ದಾಡ ತೊಡಗಿತ್ತು. ಇದನ್ನು ಗಮನಿಸಿದ ಮನೆಯವರು ಉರಗ ತಜ್ಞರಿಗೆ ಕರೆ ಮಾಡಿದ್ದಾರೆ.

ತಕ್ಷಣ ಸ್ಥಳಕ್ಕೆ ಬಂದ ಉರಗ ಪ್ರೇಮಿ ಪಾಪು ಹೆಬ್ಬಾವನ್ನು ಹಿಡಿದು ಅದರ ಹೊಟ್ಟೆಯನ್ನು ಅಮುಕಿ ಹುಂಜವನ್ನು ಹೊರಹಾಕಿ ಹಾವನ್ನು ರಕ್ಷಿಸಿದ್ದಾರೆ. ಹುಂಜವನ್ನು ಹಗ್ಗ ಸಮೇತ ಹಾವಿನ ಹೊಟ್ಟೆಯಿಂದ ಕಕ್ಕಿಸಿದ್ದಾರೆ. ಹೀಗಾಗಿ ಹಾವು ಪ್ರಾಣಾಪಾಯದಿಂದ ಪಾರಾಗಿದೆ. ಒಟ್ಟಿನಲ್ಲಿ ಹೆಬ್ಬಾವಿಗೆ ಅದರ ಬೇಟೆಯೇ ಮೃತ್ಯುವಾಗಿ ಪರಿಣಮಿಸಿದ್ದು ಮಾತ್ರ ವಿಪರ್ಯಾಸವೇ ಸರಿ.