ನೀವೆಷ್ಟು ಅಭಿವೃದ್ಧಿ ಮಾಡಿದ್ದೀರಾ ಅಂದ ಜನಸಾಮಾನ್ಯನಿಗೆ ಬಿಜೆಪಿ ಎಮ್​ಎಲ್​ಎ ಏನಂದ್ರು ಗೊತ್ತಾ?

Raichur: MLA Thipparaja Hawaldar Abuse Against Activist.
Raichur: MLA Thipparaja Hawaldar Abuse Against Activist.

ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಸಹಜವಾಗಿಯೇ ರಾಜಕೀಯ ನಾಯಕರು ಹಳ್ಳಿಗಳತ್ತ, ಮತದಾರರತ್ತ ಮುಖಮಾಡೋದು ಸಾಮಾನ್ಯ ಸಂಗತಿ.

ಆದರೇ ಇಲ್ಲಿ ಜನರ ಭೇಟಿಗೆ ಹೋದ ಎಮ್​ಎಲ್​ಎ ಒಬ್ಬರು ಪ್ರಶ್ನೆ ಮಾಡಿದ ವ್ಯಕ್ತಿಯನ್ನೇ ಥಳಿಸಿದ್ದು, ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಎಮ್​ಎಲ್​ಎ ದರ್ಪದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ರಾಯಚೂರು ಗ್ರಾಮೀಣ ಶಾಸಕ ತಿಪ್ಪರಾಜು ಹೀಗೆ ದರ್ಪ ತೋರಿದ ಎಮ್​ಎಲ್​ಎ. ಬಿಜೆಪಿ ಎಮ್​ಎಲ್​​ಎ ತಿಪ್ಪರಾಜು, ರಾಯಚೂರು ತಾಲೂಕಿನ ಮಂಡ್ಲಗೇರಾ ಗ್ರಾಮಕ್ಕೆ ಭೇಟಿ ನೀಡಿ ಜನಸಾಮಾನ್ಯರ ಜೊತೆ ಸಂಚಾದ ನಡೆಸಿದ್ದರು. ಈ ವೇಳೆ ಉದ್ಯೋಗಕ್ಕಾಗಿ ಯುವಜನರು ಸಂಘಟನೆಯ ಸಂಚಾಲಕ ಲಕ್ಷ್ಮಣ ಎಂಬಾತ ಎಮ್​ಎಲ್​ಎಯವರ ಕಾರ್ಯವೈಖರಿ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಕಳೆದ 5 ವರ್ಷಗಳಲ್ಲಿ ನೀವು ಮಾಡಿದ ಅಭಿವೃದ್ಧಿ ಕಾರ್ಯಗಳೇನು ಎಂದು ಪ್ರಶ್ನಿಸಿದ್ದಾರೆ.

 

 

ಇದರಿಂದ ಕೆರಳಿದ ಶಾಸಕ ತಿಪ್ಪರಾಜು ಲಕ್ಷ್ಮಣನನ್ನು ಹೇ ಹುಚ್ಚಾ ಎಂದು ನಿಂದಿಸಿದ್ದಾರೆ.  ಅಷ್ಟೇ ಅಲ್ಲ, ನಿನಗೆ ಬುದ್ಧಿ ಇಲ್ಲ. ಯಾವತ್ತಾದರೂ ಇಷ್ಟೊತ್ತಲ್ಲಿ ಯಾವುದಾದರು ಎಮ್​ಎಲ್​​ಎ ನಿಮ್ಮ ಊರಿಗೆ ಬಂದಿದ್ದನ್ನು ನೋಡಿದ್ದೀಯಾ? ಎಂದು ಎಮ್​ಎಲ್​ಎ ತಿಪ್ಪರಾಜು ದರ್ಪದಿಂದ ಪ್ರಶ್ನಿಸಿದ್ದಾರೆ. ಇದಲ್ಲದೇ ಶಾಸಕರನ್ನೇ ಪ್ರಶ್ನೆ ಮಾಡಿದ ಲಕ್ಷ್ಮಣ ಮೇಲೆ ಶಾಸಕರ ಬೆಂಬಲಿಗರು ಕೂಡ ಹರಿಹಾಯ್ದಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಬಿಜೆಪಿ ಶಾಸಕನ ದರ್ಪ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಚುನಾವಣೆಗೂ ಮುನ್ನವೇ ಜನರ ಮೇಲೆ ಇಷ್ಟು ದರ್ಪ ತೋರುವ ಎಮ್​ಎಲ್​​ಎ ಎಲೆಕ್ಷನ್​ ಬಳಿಕ ಹೇಗೆ ವರ್ತಿಸಬಹುದು ಎಂಬುದು ಜನಸಾಮಾನ್ಯರ ಸಧ್ಯದ ಆತಂಕವಾಗಿದೆ.

ಪ್ರತ್ಯುತ್ತರ ನೀಡಿ

Please enter your comment!
Please enter your name here