ನಗರದ ಪ್ರತಿಷ್ಠಿತ ಹೊಟೇಲ್​ನಲ್ಲಿ ಮಹಿಳೆ ಮೇಲೆ ಅತ್ಯಾಚಾರ- ಅಶೋಕನಗರ ಪೊಲೀಸರಿಗೆ ದೂರು!

 

ad

ಸಾಕಷ್ಟು ಭದ್ರತಾ ಕ್ರಮಗಳ ಬಳಿಕವೂ  ಮಹಿಳೆಯರಿಗೆ ಸುರಕ್ಷಿತವಲ್ಲ ಎಂಬ ಮಾತು ಮತ್ತೊಮ್ಮೆ ಸಾಬೀತಾಗಿದೆ. ಹೌದು ಬೆಂಗಳೂರಿನ ಪ್ರತಿಷ್ಠಿತ ಫೈವ್​ ಸ್ಟಾರ್ ಹೊಟೇಲ್​ವೊಂದರಲ್ಲಿ ಉಳಿದುಕೊಂಡಿದ್ದ ಗ್ರಾಹಕಿಯೊಬ್ಬರ ಮೇಲೆ ಹೊಟೇಲ್​ನ ಮ್ಯಾನೇಜರ್​​ ಅತ್ಯಾಚಾರ ಎಸಗಿದ್ದು, ಬೆಚ್ಚಿಬೀಳುವಂತೆ ಮಾಡಿದೆ.

 

 

ನಗರದ ಪ್ರೈಡ್​ ಹೊಟೇಲ್​​ನಲ್ಲಿ ಇಂತಹದೊಂದು ಹೀನ ಕೃತ್ಯ ನಡೆದಿದೆ. ಬಿಹಾರ ಮೂಲದ ಮಹಿಳೆಯೊಬ್ಬರು ಕೆಲಸದ ನಿಮಿತ್ತ ಬೆಂಗಳೂರಿಗೆ ಆಗಮಿಸಿದ್ದು, ನಗರದ ಪ್ರೈಡ್​ ಹೋಟೆಲ್​ನಲ್ಲಿ ಎರಡು ದಿನಗಳಿಗಾಗಿ ರೂಂ ಬುಕ್ ಮಾಡಿದ್ದರು ಎನ್ನಲಾಗಿದೆ.
ಈ ವೇಳೆ ಮಹಿಳೆಯೊಬ್ಬರೇ ರೂಂ ಮಾಡಿರೋದನ್ನು ಕಂಡ ಕೀಚಕ ಮ್ಯಾನೇಜರ್, ಮನೀಶಕುಮಾರ್ ಸಿಂಗ್ ರೂಂ ಗೆ ನುಗ್ಗಿ ಅತ್ಯಾಚಾರ ಎಸಗಿದ್ದಾನೆ. ಈ ವೇಳೆ ಮಹಿಳೆ ಕಿರುಚಿಕೊಂಡಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ. ಇದೀಗ ನೊಂದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.