ಸ್ನೇಹಿತನನ್ನು ಗೆಲ್ಲಿಸಲು ಕಣಕ್ಕಿಳಿದ ಗಣಿ ಧಣಿ!!ಪ್ರತ್ಯೇಕ ಮನೆ ತೆಗೆದುಕೊಂಡ ಗಾಲಿ ಜನಾರ್ಧನ ರೆಡ್ಡಿ!!ಹೇಗಿದೆ ಗೊತ್ತಾ ಆ ಮನೆ?

ಗಣಿ ಜಿಲ್ಲೆಯಿಂದ ಇದೀಗ ಕೋಟೆನಾಡು ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರಕ್ಕೆ ಸಂಸದ ಶ್ರೀರಾಮುಲು ಬಿಜೆಪಿಯಿಂದ ಸ್ಪರ್ಧೆಗೆಳಿದಿದ್ದು, ಶ್ರೀರಾಮುಲು ಗೆಲುವಿಗಾಗಿ ಗಾಲಿ ಜನರ್ದನಾ ರೆಡ್ಡಿ ಇದೀಗ ಬಳ್ಳಾರಿ ಗಡಿಭಾವವಾದ ಮೊಳಕಾಲ್ಮೂರು ತಾಲ್ಲೂಕಿನ ಹಾನಗಲ್ ಬಳಿಇರುವ ತೋಟದ ಮನೆಯೊಂದರಲ್ಲಿ ಕುಟುಂಬ ಸಮೇತರಾಗಿ ವಾಸ ಮಾಡಲು ಭರ್ಜರಿ ಮನೆಯೊಂದನ್ನು  ನೋಡಿದ್ದಾರೆ.

ಮೊಳಕಾಲ್ಮೂರಿನಿಂದ ಸ್ಪರ್ಧೆಗಿಳಿಯುವ ಮೊದಲೇ ಜನಾರ್ದನಾ ರೆಡ್ಡಿ ಬಳ್ಳಾರಿ ಚಿತ್ರದುರ್ಗ ಕೋಟೆನಾಡಿ ಆಪ್ತರನ್ನು ಚುನಾವಣೆಯಲ್ಲಿ ಗೆಲ್ಲಿಸಲೇ ಬೇಕೆಂಬ ನಿರ್ಧಾರದಿಂದ ತಾಲ್ಲೂಕಿನಲ್ಲಿ ಮನೆ ಮಾಡಿ ಇಲ್ಲಿಂದ ತಮ್ಮ ರಾಜಕೀಯ ಚಟುವಟಿಕೆ ಪ್ರಾರಂಭಿಸಿಲಿದ್ದಾರೆ. ಅನೂಕುಲಕ್ಕೆ ತಕ್ಕನಾಗಿ ಇರುವ ಮನೆಯನ್ನು ನೋಡಿದ್ದು, ಎರಡು ಅಂತಸ್ತಿನ ಮನೆಯಲ್ಲಿ ವಿವಿಐಪಿ ಮನೆಯನ್ನೇ ನೋಡಿದ್ದಾರೆ. ಅಮಾವಾಸ್ಯೆ ಮುಗಿದು ಎರಡ್ಮೂರು ದಿನಗಳಲ್ಲಿ ಬಂದು ವಾಸ ಮಾಡಲಿದ್ದಾರೆ.

 

ಈ ತೋಟದ ಮನೆ ಡಾ ವೆಂಕಟೇಶ ಅವರಾದಾಗಿದ್ದ, ಜನರ್ದನಾ ರೆಡ್ಡಿಯವರ ಆಪ್ತ ಎನ್ನುವ ಮಾಹಿತಿ. 24 ಗಂಟೆ ವಿದ್ಯತ್ ವ್ಯವಸ್ಥೆ ಇದು ಪೈಸ್ಟಾರ್ ಹೋಟೆಲ್ ಗಿಂತ ಕಮ್ಮಿ ಏನಿಲ್ಲ ಎಂಬಂತೆ ಮನೆ ಇದೆ. ಇನ್ನೂ ಮೇ ಚುನಾವಣೆಗೆ ಆಪ್ತ ಶ್ರೀರಾಮುಲು ಸೇರಿ ಏನೆಲ್ಲ ಚುನಾವಣೆ ಗಿಮ್ಮಿಕ್ ಮಾಡುತ್ತಾರೆ ಕಾದು ನೋಡಬೇಕಿದೆ.

ಪ್ರತ್ಯುತ್ತರ ನೀಡಿ

Please enter your comment!
Please enter your name here