ರೋಹಿಣಿ ಎತ್ತಂಗಡಿ ಪ್ರಕರಣ- ಸರ್ಕಾರಕ್ಕೆ ಮತ್ತೆ ಮುಖಭಂಗ!

Rohini Sindhuri continues as Hassan DC
Rohini Sindhuri continues as Hassan DC

ಹಾಸನ ಡಿಸಿ ರೋಹಿಣಿ ಸಿಂಧೂರಿ ವರ್ಗಾವಣೆ ಪ್ರಕರಣದಲ್ಲಿ ಸರ್ಕಾರಕ್ಕೆ ತೀವ್ರ ಮುಖ ಭಂಗವಾಗಿದೆ.

ಸಿಎಟಿ ನೀಡಿದ ಹಿಂದಿನ ಅದೇಶವನ್ನು ರದ್ದುಗೊಳಿಸುವ ಮೂಲಕ ಹೈಕೋರ್ಟ್ ಮತ್ತೂಮ್ಮೆ ಸಿಎಟಿಗೆ ವಿಚಾರಣೆ ನಡೆಸಲು ಸೂಚಿಸಿದೆ.
ಆ ಮೂಲಕ ಸರ್ಕಾರ ಹಾಗೂ ಡಿಸಿ ರೋಹಿಣಿ ಸಿಂಧೂರಿ ವರ್ಗಾವಣೆಯ ಹಗ್ಗ ಜಗ್ಗಾಟ ಮತ್ತೊಮ್ಮೆ ಸಿ ಎ ಟಿ ಅಂಗಳಕ್ಕೆ ಹೋಗಿದೆ. ಸಿ ಎ ಟಿ ಅದೇಶವನ್ನು ಪ್ರಶ್ನಿಸಿ ಡಿ ಸಿ ಹೈ ಕೋರ್ಟ್ ಮೆಟ್ಟಿಲೇರಿದ್ದರು. ಇಂದು ವಿಚಾರಣೆ ನಡೆಸಿದ ಹೈ ಕೋರ್ಟ್ ವಿಭಾಗೀಯ ಪೀಠ ಸಿಎಟಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು ಅಲ್ಲದೆ ಮೆರಿಟ್ ಅಧಾರದಲ್ಲಿ ವರ್ಗಾವಣೆ ಮಾಡಿ ಎಂದು ಕಟ್ಟುನಿಟ್ಟಾಗಿ ಸೂಚಿಸಿದೆ.

ಅಲ್ಲದೆ ಇದೇ ವೇಳೆ ವಿಭಾಗೀಯ ಪೀಠ ಏಪ್ರೀಲ್ ೨ ರಂದು ಸಿಎಟಿ ಎದಿರು ವಾದ ಮಂಡಿಸಲು ಡಿಸಿ ರೋಹಿಣಿ ಸಿಂಧೂರಿಗೆ ಸೂಚಿಸಿದೆ. ಆ ಮೂಲಕ ಚುನಾವಣೆ ಎದುರಿನಲ್ಲಿ ಅಕ್ರಮಗಳಿಗೆ ಕಡಿವಾಣ ಹಾಕುತ್ತಿದ್ದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಎತ್ತಂಗಡಿಗೆ ಸರ್ಕಾರ ಹಾಕಿದ್ದ ಸ್ಕೆಚ್​​ ತಪ್ಪಿದಂತಾಗಿದ್ದು, ಸರ್ಕಾರಕ್ಕೆ ತೀವ್ರ ಮುಖಭಂಗವಾಗಿದೆ. ಎ.ಮಂಜು ಜಿಲ್ಲೆಯಲ್ಲಿ ನಡೆಸುತ್ತಿದ್ದ ಅಕ್ರಮಗಳಿಗೆ ರೋಹಿಣಿ ಬ್ರೇಕ್ ಹಾಕಿದ್ದರು. ಹೀಗಾಗಿ ರೋಹಿಣಿ ಎತ್ತಂಗಡಿಗೆ ಎ.ಮಂಜು ಇನ್ನಿಲ್ಲದ ಸರ್ಕಸ್​ ನಡೆಸಿದ್ದರು. ಇದೀಗ ರೋಹಿಣಿ ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದಾರೆ.