ಶಿವಮೊಗ್ಗ ಡಿಸಿಸಿಗೆ ಐಟಿ ಶಾಕ್ ! ಭ್ರಷ್ಠ ಮಂಜುನಾಥ ಗೌಡ ತತ್ತರ !!

ಶಿವಮೊಗ್ಗದ ಡಿಸಿಸಿ ಬ್ಯಾಂಕ್​ ಅಧ್ಯಕ್ಷನ ಮನೆ ಮೇಲೆ ಐಟಿ ರೇಡ್ ಆಗಿದೆ. ಶರಾವತಿನಗರದ ಮಂಜುನಾಥಗೌಡ ಮನೆಗೆ ನುಗ್ಗಿದ ಐಟಿ ಅಧಿಕಾರಿಗಳು,

adಡಿಸಿಸಿ ಬ್ಯಾಂಕ್​ನಲ್ಲೂ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಡಿಸಿಸಿ ಬ್ಯಾಂಕ್​ನ ತೀರ್ಥಹಳ್ಳಿ ಶಾಖೆ ಮೇಲೂ ಐಟಿ ಆಫೀಸರ್​ಗಳು ರೇಡ್​ ನಡೆಸಿದ್ದಾರೆ. ಹತ್ತು ಮಂದಿ ಅಧಿಕಾರಿಗಳ ತಂಡದಿಂದ ದಾಳಿಯ ವೇಳೆ ಮಹತ್ವದ ದಾಖಲೆಗಳ ವಶಪಡಿಸಿಕೊಂಡಿದ್ದಾರೆ.

ಬರೋಬ್ಬರಿ 250 ಕೋಟಿ ಅವ್ಯವಹಾರ ನಡೆಸಿದ್ದ ಮಂಜುನಾಥ್​ ಗೌಡ, 10 ಕೋಟಿ ಪಡೆದು ವಂಚಕ ಸುರೇಂದ್ರನಿಗೆ ನೂರಾರು ಕೋಟಿ ಸಾಲ ಕೊಟ್ಟಿದ್ದ.

ಮಂಜುನಾಥಗೌಡನ ಅಕ್ರಮಗಳನ್ನು ಬಹಳ ದಿನಗಳ ಹಿಂದೆಯೇ ಬಿಟಿವಿ ಬಯಲಿಗೆಳೆದಿತ್ತು.

ಮಂಜುನಾಥ್ ಗೌಡನ ಜೊತೆ ಅಕ್ರಮ ಸಂಪಾದನೆ ಮಾಡಿರುವ ಮತ್ತು ಬೇನಾಮಿ ಆಸ್ತಿಗಳ ಕನೆಕ್ಷನ್ ಹೊಂದಿರುವ ಹಲವು ರಾಜಕಾರಣಿಗಳು, ಅಧಿಕಾರಿಗಳಿಗೆ ಈಗ ಐಟಿ ಇಲಾಖೆಯ ಭಯ ಕಾಡತೊಡಗಿದೆ