ರಸ್ತೆ ಬದಿಗೆ ನಿಂತ ಗೃಹಿಣಿಗೆ ಯಮನಾಗಿದ್ದು, ಕೆಎಸ್​ಆರ್​ಟಿಸಿ ಬಸ್​ – ಸಿಸಿಟಿವಿಯಲ್ಲಿ ದಾಖಲಾಯ್ತು ಭೀಕರ ದೃಶ್ಯ!

Shivamogga: KSRTC bus hits woman-to-be, kills her on the spot
Shivamogga: KSRTC bus hits woman-to-be, kills her on the spot

ಸಾವು ಅನ್ನೋದು ಅದ್ಯಾವ ಸ್ವರೂಪದಲ್ಲಿ ಹೇಗೆ ಬರುತ್ತೋ ಗೊತ್ತಾಗಲ್ಲ. ಇದಕ್ಕೆ ತಾಜಾ ಉದಾಹರಣೆ ಶಿವಮೊಗ್ಗದಲ್ಲಿ ನಡೆದ ಈ ಅಪಘಾತವೇ ಸಾಕ್ಷಿ. ಅದ್ಯಾವುದೋ ಕೆಲಸಕ್ಕೆ ಅಂತ ರಸ್ತೆಗೆ ಬಂದ ಆ ಮಹಿಳೆ ರಸ್ತೆ ಬದಿಯಲ್ಲಿ ನಿಂತಿದ್ದರು. ಹೀಗೆ ರಸ್ತೆ ಬದಿಯಲ್ಲಿ ನಿಂತಾಕೆಯ ಪಾಲಿಗೆ ಕೆಎಸ್​ಆರ್​ಟಿಸಿ ಬಸ್​ ಯಮನಾಗಿ ಪರಿಣಮಿಸಿದ್ದು, ಕ್ಷಣಾರ್ಧದಲ್ಲೇ ಆಕೆಯ ಪ್ರಾಣ ಹಾರಿ ಹೋಗಿದೆ. ಇಷ್ಟೇ ಅಲ್ಲ ಈ ಭೀಕರ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು, ನೋಡುಗರ ಎದೆ ಝಲ್ಲೆನಿಸುತ್ತದೆ.

Shivamogga: KSRTC bus hits woman-to-be, kills her on the spot
Shivamogga: KSRTC bus hits woman-to-be, kills her on the spot
adಶಿವಮೊಗ್ಗದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರಸ್ತೆ ದಾಟಲು ಮಲ್ಲಿಕಾ ಎಂಬ ಮಹಿಳೆ ನಿಂತಿದ್ದರು. ಟ್ಯಾಂಕ್ ಮೊಹಲ್ಲಾ 2 ನೇ ಕ್ರಾಸ್​​ ನಿವಾಸಿಯಾದ ಮಲ್ಲಿಕಾ ರಸ್ತೆ ಬದಿ ನಿಂತಿದ್ದಾಗಲೇ ಹಿಂದಿನಿಂದ ಬಂದ ಬಸ್ ಧೀಡಿರ ಬಂದು ಡಿಕ್ಕಿ ಹೊಡೆದಿದೆ. ಚಾಲಕ ಬಸ್​ನ್ನು ಯೂ ಟರ್ನ್​ ಮಾಡುತ್ತಿದ್ದ ವೇಳೆ ಘಟನೆ ನಡೆದಿದ್ದು, ಮಹಿಳೆ ಬಸ್​ನ ಮುಂದಿನ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ನುಜ್ಜುಗುಜ್ಜಾಗಿ ಹೋಗಿದ್ದಾಳೆ.

Shivamogga: KSRTC bus hits woman-to-be, kills her on the spot
Shivamogga: KSRTC bus hits woman-to-be, kills her on the spot

ಶಿವಮೊಗ್ಗ ಪೂರ್ವ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಈ ಅಪಘಾತದ ದೃಶ್ಯ ಕಂಡು ಶಿವಮೊಗ್ಗ ಜನರು ಬೆಚ್ಚಿ ಬಿದ್ದಿದ್ದು, ಬಸ್​ ಕಂಡರೇ ಹೆದರುವ ಸ್ಥಿತಿ ಎದುರಾಗಿದೆ.