ಮದ್ಯದ ಅಮಲಿನಲ್ಲಿ ಯೋಧ ಮಾಡಿದ್ದೇನು ?

ಚಲನಚಿತ್ರ ನೋಡಲು ಹೋದ ಯೋಧನೊಬ್ಬ ಮದ್ಯದ ಮತ್ತಿನಲ್ಲಿ ಯುವತಿಗೆ ಕಿರುಕುಳ ನೀಡಿ ಸಾರ್ವಜನಿಕರಿಂದ ಗೂಸಾ ತಿಂದ ಪ್ರಕರಣ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗದ ಮಲ್ಲಿಕಾರ್ಜುನ ಚಿತ್ರಮಂದಿರದಲ್ಲಿ ಭರ್ಜರಿ ಚಿತ್ರ ಪ್ರದರ್ಶನವಾಗುತ್ತಿತ್ತು. ಯುವತಿಯೊಬ್ಬಳು ಕುಟುಂಬಸ್ಥರ ಜೊತೆ ಚಿತ್ರ ವೀಕ್ಷಿಸುತ್ತಿದ್ದಳು.

ಯುವತಿ ಕುಳಿತಿದ್ದ ಸಾಲಿನ ಹಿಂದಿನ ಸೀಟ್​ನಲ್ಲಿ ಕೂತಿದ್ದ ಪೇದೆ ರವಿಕುಮಾರ್, ಯುವತಿಯ ಸೀಟಿನ ಭಾಗಕ್ಕೆ ಕಾಲಿನ ಒದೆಯುವುದು, ಕೈತಗುಲಿಸುವುದು ಸೇರಿದಂತೆ ಅಸಭ್ಯವಾಗಿ ವರ್ತಿಸಿದ್ದಾನೆ. ಒಂದೆರಡು ಯುವತಿ ಯೋಧನಿಗೆ ವಾರ್ನ್ ಮಾಡಿದ್ದಾಳೆ. ಆದರೇ ಇದಕ್ಕೆ ಸರಿಹೋಗದ ರವಿಕುಮಾರ್ ಮತ್ತೆ ಕಿರುಕುಳ ಮುಂದುವರಿಸಿದ್ದಾನೆ. ಇದರಿಂದ ಕೆರಳಿದ ಯುವತಿ ಕುಟುಂಬಸ್ಥರು ಹಾಗೂ ಸಾರ್ವಜನಿಕರು ಯೋಧ ರವಿಕುಮಾರ್​ಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ವೇಳೆ ಯೋಧ ರವಿಕುಮಾರ್, ದೆಹಲಿಯ ಸಿಆರ್​ಪಿಎಫ್​ ಸೇವೆ ಸಲ್ಲಿಸುತ್ತಿರೋದಯ ಬೆಳಕಿಗೆ ಬಂದಿದೆ. ಪೊಲೀಸರ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿರುವ ಯೋಧ ರವಿಕುಮಾರ್, ಮದ್ಯದ ಅಮಲಿನಲ್ಲಿ ಕೃತ್ಯ ಎಸಗಿರೋದನ್ನು ಒಪ್ಪಿಕೊಂಡಿದ್ದಾನೆ. ಒಟ್ಟಿನಲ್ಲಿ ದೇಶ ಕಾಯುವ ಯೋಧನೊಬ್ಬ ಮದ್ಯದ ಅಮಲಿನಲ್ಲಿ ಕೃತ್ಯವೆಸಗಿ ಸಾರ್ವಜನಿಕರಿಂದ ಥಳಿತಕ್ಕೊಳಗಾಗಿದ್ದು ಮಾತ್ರ ವಿಷಾದನೀಯ.