ಟಿಪ್ಪು ಚರ್ಚ್ ಗಳನ್ನು ನಾಶ ಮಾಡಿದ್ದ ಕ್ರೂರಿ : ರಾಜ್ಯ ಸರಕಾರದಿಂದಲೇ ಪುಸ್ತಕ !!

ಟಿಪ್ಪು ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಎಂದು ಹೇಳುತ್ತಲೇ ಟಿಪ್ಪು ಜಯಂತಿ ಮಾಡುವ ಮೂಲಕ ವಿವಾದ ಮೈಮೇಲೆ ಎಳೆದುಕೊಂಡ ರಾಜ್ಯ ಸರಕಾರದ ನಿಜ ಬಣ್ಣ ಬಯಲಾಗಿದೆ.

ad


ಟಿಪ್ಪು ಮತಾಂಧ ಕ್ರೂರಿ ಎನ್ನುವ ಬಿಜೆಪಿ ಕಾಮಾಲೆ ಕಣ್ಣಿನಿಂದ ರಾಜಕಾರಣ ಮಾಡುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಅವಕಾಶ ಸಿಕ್ಕಾಗೆಲ್ಲಾ ಹೇಳುತ್ತಲೇ ಇದ್ದಾರೆ. ಆದರೆ ಇದೀಗ ಸಿದ್ದರಾಮಯ್ಯ ಮತ್ತು ರಾಜ್ಯ ಸರಕಾರ ಮುಜುಗರಕ್ಕೆ ಒಳಗಾಗುವ ಸನ್ನಿವೇಶ ಸೃಷ್ಟಿಯಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರವೇ ಪ್ರಕಟಿಸಿದ ಪುಸ್ತಕವೊಂದು ಇದೀಗ ಮುನ್ನಲೆಗೆ ಬಂದಿದ್ದು, ಅದರಲ್ಲಿ ಟಿಪ್ಪು ಕ್ರೂರಿ ಎಂಬ ಬಗ್ಗೆ ವಿಸ್ತೃತ ಉಲ್ಲೇಖಗಳಿವೆ.

ಹೌದು. ಸರ್ಕಾರಿ ಪುಸ್ತಕದಲ್ಲೇ ಟಿಪ್ಪು ಸುಲ್ತಾನ್ ಕ್ರೌರ್ಯದ ಬಗ್ಗೆ ಉಲ್ಲೇಖವಾಗಿದೆ. ಇದರಿಂದಾಗಿ ಟಿಪ್ಪು ಸ್ವಾತಂತ್ರ್ಯ ಹೋರಾಟದ ಬಗ್ಗೆಯೇ ಅನುಮಾನ ಉಂಟಾಗಿದೆ.

ಮಂಗಳೂರು, ಮೈಸೂರಿನಲ್ಲಿ ಟಿಪ್ಪುವಿನಿಂದ ಚರ್ಚ್​ ನಾಶವಾಗಿತ್ತಂತೆ! ಚರ್ಚ್ ನಾಶ ಮಾಡಿ ಅದರ ಕಲ್ಲಿನಿಂದ ಮಸೀದಿ ನಿರ್ಮಿಸಿದ್ದನಂತೆ ! ಹೀಗಂತ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಪ್ರಕಟಿಸಿರುವ ಪುಸ್ತಕದಲ್ಲೇ ಉಲ್ಲೇಖವಿದೆ.

50 ಲಕ್ಷ ವೆಚ್ಚದಲ್ಲಿ ತಯಾರಾದ ಮಂಗಳೂರು ದರ್ಶನ ಪುಸ್ತಕದ ಸಂಪುಟ-1- ಪೇಜ್ 199, 200, ಹಾಗೂ 201ರಲ್ಲಿ ಈ ಉಲ್ಲೇಖವಿದ್ದು, ಈ ಹಿಂದೆ ನಗರಾಭಿವೃದ್ದಿ ಸಚಿವರಾಗಿದ್ದ ವಿನಯ್​ ಕುಮಾರ್ ಸೊರಕೆ ಅವರೇ ಈ ಪುಸ್ತಕ ಬಿಡುಗಡೆ ಮಾಡಿದ್ದರು.

ಇಲ್ಲಿಯವರೆಗೆ ಕೋಮುವಾದಿ ಭಾವನೆಯಿಂದ ಬಿಜೆಪಿ ಟಿಪ್ಪು ವಿರೋಧಿ ನಿಲುವನ್ನು ತಳೆದಿದೆ ಮತ್ತು ಇತಿಹಾಸವನ್ನು ತಿರುಚಿದೆ ಎಂದು ಕಾಂಗ್ರೆಸ್ ಆರೋಪ ಮಾಡುತ್ತಲೇ ಬಂದಿತ್ತು. ಇದೀಗ ಕಾಂಗ್ರೆಸ್ ಸರಕಾರವೇ ಪ್ರಕಟಿಸಿ, ಸಚಿವರೇ ಬಿಡುಗಡೆಗೊಳಿಸಿದ ಪುಸ್ತಕದಲ್ಲಿ ಟಿಪ್ಪು ಕ್ರೂರಿ ಎಂದು ಬಿಂಬಿತವಾಗಿದ್ದು ಕಾಂಗ್ರೆಸ್ ಗೆ ಮುಜುಗರವಾದರೆ, ಬಿಜೆಪಿಗೆ ಆಹಾರವಾಗಿದೆ.