ಎಸ್.ಎಂ ಕೃಷ್ಣ ಮನೆಗೆ ಭೇಟಿ ನೀಡಿದ ಸುಮಲತಾ..!

ಮಂಡ್ಯ ಲೋಕಸಭಾ ಚುನಾವಣಾ ಕಣ ದಿನೇ ದಿನೇ ಕಾವೇರತೊಡಗಿದೆ. ಅಖಾಡಕ್ಕಿಳಿದಿರುವ ಸುಮಲತಾ ಅಂಬರೀಷ್ ತಮ್ಮ ಬೆಂಬಲಕ್ಕಾಗಿ ಹಿರಿಯ ನಾಯಕರ ಮನೆಗಳಿಗೆ ಭೇಟಿ ನೀಡ್ತಿದ್ದಾರೆ. ಇಂದು ಬಿಜೆಪಿ ನಾಯಕ ಎಸ್.ಎಂ ಕೃಷ್ಣ ಮನೆಗೆ ಭೇಟಿ ನೀಡಿದ ಸುಮಲತಾ, ಕೆಲಕಾಲ ಮಾತುಕತೆ ನಡೆಸಿದ್ರು.

ಈ ವೇಳೆ ತಾವು ಸ್ಪರ್ಧಿಸುತ್ತಿದ್ದ ಕ್ಷೇತ್ರದಿಂದ ತಾನು ಸ್ಪರ್ಧಿಸುತ್ತಿದ್ದು, ತಮ್ಮನ್ನ ಬೆಂಬಲಿಸುವಂತೆ ಮನವಿ ಮಾಡಿದ್ರು. ಭೇಟಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುಮಲತಾ, ಗೆಲ್ಲೋದು, ಸೋಲೋದು ನಂತರದ ಮಾತು. ಮೊದಲು ಕ್ಲೀನ್ ಎಲೆಕ್ಷನ್ ಕ್ಯಾಂಪೇನ್ ಮಾಡ್ಬೇಕು, ಮಾಡ್ತಿದ್ದೇನೆ ಎಂದ್ರು. ಇನ್ನು, ಅಂಬರೀಶ್ ಅವರ ಹೆಸರನ್ನು ಎಲ್ಲರೂ ಬಳಕೆ ಮಾಡಿಕೊಳ್ಳಬೇಕಾದ ಅನಿವಾರ್ಯ ಸೃಷ್ಟಿ ಆಗಿದೆ. ಪದೇ ಪದೇ ಅಂಬರೀಶ್ ಮತ್ತು ನನ್ನ ಹೆಸರು ಬಳಕೆ ಮಾಡದೇ ಇರೋದು ಒಳ್ಳೆಯದು ಎಂದರು.