ಸನ್ನಿ ಲಿಯೋನ್ ಎದುರು ಬೆತ್ತಲಾದವರು ಯಾರು ? ರಾಷ್ಟ್ರೀಯ ವಾಹಿನಿಗಳು ಮತ್ತು ಕನ್ನಡ ಸಂಘಟನೆಗಳ ಪ್ರಾಮಾಣಿಕತೆಯ ಚರ್ಚೆ !!

ರಾಷ್ಟ್ರೀಯ ಸುದ್ದಿ ವಾಹಿನಿಯೊಂದು ಕನ್ನಡಪರ ಸಂಘಟನೆಗಳ ಮೇಲೆ ಸನ್ನಿ ಲಿಯೋನ್ ಕಾರ್ಯಕ್ರಮಕ್ಕೆ ಹಣದ ಬೇಡಿಕೆಯಿಟ್ಟ ಆರೋಪ ಹೊರಿಸಿರೋದು ಇದೀಗ ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ad

Sunny Leone demanding money for Kannada programs.

ಆದ್ರೆ ಖಾಸಗಿ ವಾಹಿನಿಯ ಆರೋಪವನ್ನು ಕರವೇಯ ಎರಡೂ ಬಣದ ಅಧ್ಯಕ್ಷರು ನಿರಾಕರಿಸಿದ್ದಾರೆ. ಸಧ್ಯ ಈಗ ರಾಷ್ಟ್ರೀಯ ವಾಹಿನಿಗಳ ಪ್ರಾಮಾಣಿಕತೆ ಮತ್ತು ಕನ್ನಡ ಸಂಘಟನೆಗಳ ಹೋರಾಟ ಚರ್ಚೆಯ ವಿಷಯವಾಗಿದೆ. ಸನ್ನಿಲಿಯೋನ್     ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ನಡೆಸಲು ಕರವೇ ಯುವ ಸೇನೆ ಆಕ್ಷೇಪ ವ್ಯಕ್ತಪಡಿಸಿತ್ತು. ಇದೇ ಸನ್ನಿವೇಶವನ್ನು ಬಳಸಿಕೊಂಡು ರಾಷ್ಟ್ರೀಯ ವಾಹಿನಿಯೊಂದು ಕರವೇ ಯುವ ಸೇನೆಯ ಹರೀಶ್ ರನ್ನು ಹಣ ನೀಡಿ ಖರೀಧಿಸಲು ಸ್ಟಿಂಗ್ ಮಾಡಿಕೊಂಡಿತ್ತು. ಆದರೆ ಹರೀಶ್ ಜಾಗೃತರಾಗಿ ರಾಷ್ಟ್ರೀಯ ವಾಹಿನಿಯ ವಿರುದ್ದವೇ ಸ್ಟಿಂಗ್ ಮಾಡಿದ್ದರು. ರಾಷ್ಟ್ರೀಯ ವಾಹಿನಿಯ ಸಿಬ್ಬಂಧಿಗಳನ್ನು ಪೊಲೀಸರಿಗೆ ಒಪ್ಪಿಸಿದ ಬಳಿಕ ಸ್ಟಿಂಗ್ ಮಾಡಲು ಬಂದವರು ಎಂದು ಹರೀಶ್ ಗೆ ತಿಳಿದಿತ್ತು.ಹರೀಶ್ ಬಳಿಕ ಕರವೇಯ ನಾರಾಯಣ ಗೌಡ ಬಣದ ಉಪಾಧ್ಯಕ್ಷ ಅಂಜಿನಪ್ಪರನ್ನು ಟಾರ್ಗೆಟ್ ಮಾಡಿಕೊಂಡ ರಾಷ್ಟ್ರೀಯ ವಾಹಿನಿ ಅಂಜಿನಪ್ಪರನ್ನು ಖೆಡ್ಡಾಕ್ಕೆ ಹಾಕಿದೆ.

 

ಅಂಜಿನಪ್ಪ 40 ಲಕ್ಷ ರೂಪಾಯಿಗೆ ಸನ್ನಿ ಲಿಯೋನ್ ಕಾರ್ಯಕ್ರಮಕ್ಕೆ ಬೇಡಿಕೆ ಇಟ್ಟಿರೋದು ಕ್ಯಾಮಾರಗಳಲ್ಲಿ ಸೆರೆಯಾಗಿದೆ. ಮತ್ತೊಂದೆಡೆ ಕರವೇ ಪ್ರವೀಣ್ ಶೆಟ್ಟಿ ಬಣದ ಪುನೀತ್ ನನ್ನು ಕೂಡಾ ಸ್ಟಿಂಗ್ ಮಾಡಲಾಗಿದ್ದು, ಅವರೂ ಕೂಡಾ ಹಣಕ್ಕೆ ಬೇಡಿಕೆಯಿಡುವ ಬಗ್ಗೆ ವಿಡಿಯೋ ಲಭ್ಯವಾಗಿದೆ. “ನಮ್ಮ ಕಾರ್ಯಕರ್ತರು ನಾಡು,ನುಡಿ ಸಂರಕ್ಷಣೆಗಾಗಿ ಬದ್ಧರಾಗಿದ್ದಾರೆ. ಬೇರೆ ಸನ್ನಿವೇಶದಲ್ಲಿ ಚಿತ್ರೀಕರಿಸಿದ ವಿಡಿಯೋವನ್ನು ತೋರಿಸಿ ರಾಷ್ಟ್ರೀಯ ವಾಹಿನಿಗಳಿಂದ ಸಂಘಟನೆಗಳನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ ಎಂದು ಟಿ.ಎ. ನಾರಾಯಣ ಗೌಡ, ಪ್ರವೀಣ್ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ. ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕರವೇ ಯುವ ಸೇನೆಯ ಹರೀಶ್ ಡಿ.25ರಂದೇ ರಾಮಮೂರ್ತಿ ನಗರದ ಪೊಲೀಸ್ ಠಾಣೆಯಲ್ಲಿ ರಾಷ್ಟ್ರೀಯ ವಾಹಿನಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಇಲ್ಲಿ ರಾಷ್ಟ್ರೀಯ ವಾಹಿನಿಯ ವಿಶ್ವಾಸಾರ್ಹತೆಯ ಬಗ್ಗೆಯೂ ಸಂಶಯ ಮೂಡಿದೆ. ಕರವೇ ಯುವ ಸೇನೆ ಮಾತ್ರ ಸನ್ನಿ ಲಿಯೋನ್ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಕರವೇ ನಾರಾಯಣ ಗೌಡ ಬಣವಾಗಲೀ, ಕರವೇ ಪ್ರವೀಣ್ ಶೆಟ್ಟಿ ಬಣವಾಗಲೀ ವಿರೋಧಿಸಿರಲಿಲ್ಲ. ಸನ್ನಿ ಲಿಯೋನ್ ಕಾರ್ಯಕ್ರಮ ವಿರೋಧಿಸಿದ್ದ ಕರವೇ ಯುವ ಸೇನೆಯ ಹರೀಶ್, ಸ್ಪಷ್ಟವಾಗಿ ಹಣವನ್ನು ನಿರಾಕರಣೆ ಮಾಡುತ್ತಾರೆ ಮತ್ತು ಅದನ್ನು ಚಿತ್ರೀಕರಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ರಾಷ್ಟ್ರೀಯ ವಾಹಿನಿ ಅದನ್ನು ಹೇಳದೆಯೇ, ಸನ್ನಿ ಲಿಯೋನ್ ಕಾರ್ಯಕ್ರಮ ವಿರೋಧಿಸದ ಕರವೇ ನಾರಾಯಣ ಗೌಡ ಬಣ ಮತ್ತು ಪ್ರವೀಣ್ ಶೆಟ್ಟಿ ಬಣವನ್ನು ಎಳೆದು ತಂದಿದೆ. ಈ ಎರಡೂ ಬಣಗಳು ವಿರೋಧಿಸಿಯೇ ಇಲ್ಲ ಎಂದ ಮೇಲೆ ಕಾರ್ಯಕ್ರಮಕ್ಕೆ ಸಪೋರ್ಟ್ ಮಾಡಲು, ಭದ್ರತೆ ನೀಡಲು ಸಮಸ್ಯೆಯೇ ಇಲ್ಲ ಎಂಬುದನ್ನು ರಾಷ್ಟ್ರೀಯ ವಾಹಿನಿ ಮರೆಮಾಚಿ, ಕರ್ನಾಟಕದ ಪ್ರತಿಷ್ಠೆ ಮಾರಾಟಕ್ಕಿದೆ ಎಂದು ಹೆಡ್ ಲೈನ್ ಹಾಕಿದ್ದವು. ಇದು ಕನ್ನಡದ ಮೇಲಿನ ಹಿಂದಿ ಬಾಷಿಕ ಮಾಧ್ಯಮಗಳ ದುರುದ್ದೇಶಪೂರಿತ ದಾಳಿ ಎನ್ನಲಾಗುತ್ತಿದೆ.