ಆಸೀಸ್​ಗೆ ಮತ್ತೊಮ್ಮೆ ಆಘಾತ ನೀಡುವ ತವಕದಲ್ಲಿ ಟೀಂ ಇಂಡಿಯಾ ..

ಆಸೀಸ್​ ಜತೆ ಟಿ20 ಸರಣಿ ಸೋತಿದ್ದ ಟೀಂ ಇಂಡಿಯಾ ಮೊದಲ ಏಕದಿನ ಪಂದ್ಯ ಗೆದ್ದಿತ್ತು.. ಈ ಮೂಲಕ ಕಾಂಗರೂಗಳಿಗೆ ಶಾಕ್ ನೀಡಿದ್ದ ಭಾರತ ಇಂದು 2ನೇ ಏಕದಿನ ಪಂದ್ಯ ಆಡಲಿದ್ದು.. ನಾಗ್ಪುರದ ವಿದರ್ಬಾ ಕ್ರೀಡಾಂಗಣದಲ್ಲಿ ನಡೆಯಲಿರುವ ಇಂದಿನ ಪಂದ್ಯದಲ್ಲಿ ಆಸೀಸ್​ಗೆ ಮತ್ತೊಮ್ಮೆ ಆಘಾತ ನೀಡುವ ತವಕದಲ್ಲಿದೆ..

 
ರೋಹಿತ್ ಶರ್ಮಾಗೆ​​ ನಾಗ್ಪುರ್ ಪಿಚ್​ ಫೇವರೇಟ್ ಆಗಿದ್ದು, ರನ್​​ಗಳ ಹೊಳೆನೇ ಹರಿದು ಬರಲಿದೆ. ಆದ್ರೆ ಫಾರ್ಮ್​​​ನಲ್ಲಿಲ್ಲದ ಶಿಖರ್ ಧವನ್ ಪಾಲಿಗೆ ಈ ಪಂದ್ಯ ಪ್ರಮುಖವಾಗಿದ್ದು, ಈ ಪಂದ್ಯದಲ್ಲಿ ಏನ್​ ಕಮಾಲ್ ಮಾಡ್ತಾರೆ ಅನ್ನೋದು ನೋಡಬೇಕಿದೆ.