ಟಾರ್ಗೆಟ್ ಟೀಮ್ ಇಲ್ಯಾಸ್ ಕೊಲೆ ನಡೆದಿದ್ದು ಹೇಗೆ ಗೊತ್ತಾ ? ಮಂಗಳೂರಿನಲ್ಲಿ ಇಂದು ನಡೆದ ಕೊಲೆಯ ಪಿನ್ ಟು ಪಿನ್ ಮಾಹಿತಿ ಇಲ್ಲಿದೆ !!

Target Group's Ilyas assassination in Mangalore.
Target Group's Ilyas assassination in Mangalore.

ದೀಪಕ್ ಕೊಲೆ ಪ್ರಕರಣದಲ್ಲಿ ಭಾರೀ ಸುದ್ದಿಯಲ್ಲಿದ್ದ ಟಾರ್ಗೆಟ್ ಟೀಮ್ ನ ಪ್ರಮುಖ ರೌಡಿ ಇಲ್ಯಾಸ್ ನನ್ನು ಇಂದು ಮತ್ತೊಂದು ರೌಡಿ ತಂಡ ಭೀಕರವಾಗಿ ಕೊಲೆ ನಡೆಸಿದೆ. ಜಪ್ಪಿನಮೊಗರು ಕುಡುಪಾಡಿ ಮಸೀದಿ ಬಳಿ ಇರುವ ಮಿಫ್ತಾ ಗ್ಯಾಲೋರ್ ಅಪಾರ್ಟ್ ಮೆಂಟ್ ನಲ್ಲಿ ಈ ಕೊಲೆ ನಡೆದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಒಟ್ಟು 28 ಪ್ರಕರಣಗಳಲ್ಲಿ ಆರೋಪಿಯಾಗಿರುವ ಇಲ್ಯಾಸ್ ಗೆ ಮಂಗಳೂರಿನ ಕ್ರಿಮಿನಲ್ ಲೋಕದಲ್ಲಿ ಕೆಟ್ಟ ಇತಿಹಾಸವೇ ಇದೆ. ಕೊಲೆ, ಕೊಲೆ ಯತ್ನ, ದರೋಡೆ, ಹನಿಟ್ರ್ಯಾಪ್, ಗಾಂಜಾ ಸಾಗಾಟ, ಅತ್ಯಾಚಾರ,ಸಾಮೂಹಿಕ ಅತ್ಯಾಚಾರ ಕೇಸ್ಗಳು ಈತನ ಮೇಲಿವೆ. ಯುವ ಕಾಂಗ್ರೆಸ್ ಉಪಾಧ್ಯಕ್ಷನಾಗಿದ್ದ ಈತ ಸಚಿವ ಯು.ಟಿ ಖಾದರ್ ಜೊತೆ ಗುರುತಿಸಿಕೊಂಡಿದ್ದ. ನಂತರ ಈತನ ಕ್ರಿಮಿನಲ್ ಚಟುವಟಿಕೆಗಳು ಯು ಟಿ ಖಾದರ್ ಅರಿವಿಗೆ ಬರುತ್ತಿದ್ದಂತೆ ಇಲ್ಯಾಸ್ ನನ್ನು ದೂರ ಮಾಡಿದ್ದಾರೆ. ದೇರಳಕಟ್ಡೆ ವೈದ್ಯಕೀಯ ವಿದ್ಯಾರ್ಥಿಗಳನ್ನು ಅಪಹರಣ ಮಾಡಿದ್ದ ಇಲ್ಯಾಸ್, ಅವರ ಅಶ್ಲೀಲ ವೀಡಿಯೋ ಚಿತ್ರೀಕರಣ ಮಾಡಿ ಬ್ಲಾಕ್ ಮೇಲ್ ನಡೆಸಿದ್ದ ಪ್ರಕರಣದಲ್ಲಿ ಜೈಲು ಸೇರಿದ್ದ.

 

 

ಕಿನ್ನಿಗೊಳಿಯ ಸಫ್ವಾನ್ ಗ್ಯಾಂಗ್ನಿಂದ ಟಾರ್ಗೆಟ್ ಗ್ಯಾಂಗ್ನ ಇಲ್ಯಾಸ್ ಟಾರ್ಗೆಟ್ ಗೆ ಒಳಗಾಗಿದ್ದ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಸಫ್ವಾನ್ ಗ್ಯಾಂಗ್ ಗೆ ಕಿನ್ನಿಗೋಳಿಯ ಸಫ್ವಾನ್ ಮತ್ತು ದಾವೂದು ಎಂಬ ಸ್ಥಳೀಯ ರೌಡಿಗಳೇ ಪ್ರಮುಖರು. ಈ ಹಿಂದೆ ಇಲ್ಯಾಸ್, ಸಫ್ವಾನ್, ದಾವೂದು ಒಟ್ಟಾಗಿದ್ದು ಹಲವು ಸುಫಾರಿ ಹತ್ಯೆಗಳು, ಗಾಂಜಾ ದಂದೆಗಳು, ಕಿಡ್ನಾಪ್, ಅತ್ಯಾಚಾರಗಳನ್ನು ನಡೆಸಿದ್ದರು ಸಫನ್ ಗ್ಯಾಂಗ್-ಟಾರ್ಗೆಟ್ ಗ್ಯಾಂಗ್ ಜಂಟಿಯಾಗಿ ಹಲವು ಕೃತ್ಯಗಳಲ್ಲಿ ಭಾಗಿ ಯಾಗಿತ್ತು. ಇತ್ತಿಚ್ಚಿನ ದಿನಗಳಲ್ಲಿ ಗಾಂಜಾ ದಂಧೆಯಲ್ಲಿ ಬರೋ ಆದಾಯದ ಹಂಚಿಕೆಯಲ್ಲಿ ಗಲಾಟೆಗಳಾಗಿದ್ದವು. ಆ ಕಾರಣಕ್ಕಾಗಿ ಇತ್ತೀಚೆಗೆ ಎರಡೂ ಗ್ಯಾಂಗ್ಗಳು ಪರಸ್ಪರ ಕತ್ತಿ ಮಸೆಯುತ್ತಿದ್ದವು 3 ದಿನಗಳ ಹಿಂದೆ ಜಾಮೀನಿನ ಮೇಲೆ ಜೈಲಿನಿಂದ ರಿಲೀಸ್ ಆಗಿದ ಇಲ್ಯಾಸ್ ಇವತ್ತು ಬೆಳಿಗ್ಗೆ ಮನೆಯಲ್ಲಿ ಮಲಗಿದ್ದ. ಜಪ್ಪಿನಮೊಗರುವಿನ ಕುಡುಪ್ಪಾಡಿ ಮಸೀದಿ ಬಳಿ ಇರುವ ಅಪಾರ್ಟ್ಮೆಂಟ್ ಗೆ ಇಂದು ಬೆಳಿಗ್ಗೆ 9.15ರ ವೇಳೆಗೆ ಫ್ಲಾಟ್ ನಂ: 503 ರ ಬೆಲ್ ಅನ್ನು ರೌಡಿ ಪಡೆ ಒತ್ತಿತ್ತು. ಹಂತಕರು ಬಂದಿದ್ದ ವೇಳೆ ರೌಡಿ ಇಲ್ಯಾಸ್ ನಿದ್ದೆ ಮಾಡುತ್ತಿದ್ದ. ಹಂತಕರು ಬೆಲ್ ಒತ್ತುತ್ತಿದ್ದಂತೆ ಇಲ್ಯಾಸ್ ಅತ್ತೆ ಬಾಗಿಲು ತೆಗೆದರು. ಅತ್ತೆ ಮುಂದೆ ಇಲ್ಯಾಸ್ ಸ್ನೇಹಿತರೆಂದು ಪರಿಚಯಸಿಕೊಂಡ ಹಂತಕರು, ಇಲ್ಯಾಸ್ ನನ್ನು ಕರೆಯುವಂತೆ ಕೇಳಿಕೊಂಡರು. ಸ್ಬೇಹಿತರು ಬಂದಿದ್ದಾರೆಂದು ಭಾವಿಸಿದ ಅತ್ತೆ ಪುಟ್ಟ ಮಗು ಜೊತೆಗೆ ಬೆಡ್ರೂಮ್ನಲ್ಲಿ ಮಲಗಿದ್ದ ರೌಡಿ ಇಲ್ಯಾಸ್ ನನ್ನು ಎಬ್ಬಿಸಿದ್ರು. ಬಂದಿರೋ ಇಲ್ಯಾಸ್ ಸ್ನೇಹಿತರಿಗೆ ಚಹಾ ಮಾಡೋಣಾ ಎಂದು ಅತ್ತೆ ಅಡುಗೆ ಮನೆಗೆ ಹೋಗುತ್ತಿದ್ದಂತೆ ಇಲ್ಯಾಸ್ ಬೆಡ್ ರೂಮಿನಿಂದ ಹೊರ ಬರುತ್ತಿದ್ದ. ನಿದ್ದೆಗಣ್ಣಿನಿಂದ ಹೊರ ಬರುತ್ತಿದ್ದ ಇಲ್ಯಾಸ್ ಮೇಲೆ ಏಕಾಏಕಿ ದಾಳಿ ನಡೆಸಿದ ರೌಡಿ ಪಡೆ ಇಲ್ಯಾಸ್ ನನ್ನು ಹೊಡೆದುರುಳಿಸಿತ್ತು.