ಸವತಿ ಮನೆಗೆ ಬಂದ ಸತಿ- ರಾಕ್ಷಸನಂತಾಡಿದ ಪತಿ!!

ಆತ ಕಟ್ಟಿಕೊಂಡ ಹೆಂಡತಿಗೆ ಒಂದು ಮಗು ಕರುಣಿಸಿ ಮತ್ತೊಬ್ಬಳ ಸಂಗಕ್ಕೆ ಬಿದ್ದಿದ್ದ. ಮೊದಲನೇ ಹೆಂಡತಿಯನ್ನೇ ಮರೆತು ಅವಳ ಜೊತೆಯಲ್ಲೇ ಸಪ್ತಪದಿ ತುಳಿದು ಹಾಯಾಗಿದ್ದ. ವಿಷ್ಯಾ ತಿಳಿದು ತನಗೆ ಯಾಕೆ ಅನ್ಯಾಯ ಮಾಡಿದ್ರಿ ಅಂತ ಪ್ರಶ್ನಿಸೋಕೆ ಹೋದ ಮೊದಲ ಪತ್ನಿಗೆ ನರಕವನ್ನೇ ತೋರಿಸಿ ಕೌರ್ಯ ಮೆರೆದಿದ್ದಾನೆ. ಇಷ್ಟಕ್ಕೂ ಹೀಗೆಲ್ಲ ಪತ್ನಿಯ ಮೇಲೆ ದರ್ಪ ತೋರಿಸಿದವನು ಯಾರೋ ಸಾಮಾನ್ಯದವನಲ್ಲ. ಬದಲಾಗಿ ಟಿಆರ್​ಎಸ್​ ಮುಖಂಡ.


ಹೌದು ತೆಲಂಗಾಣದಲ್ಲಿ ಮೊದಲನೇ ಪತ್ನಿಗೆ ಕೈಕೊಟ್ಟು ಎರಡನೇ ಮದ್ವೆ ಆದ ಟಿಆರ್​ಎಸ್​ ಮುಖಂಡ ತನ್ನ ಮೊದಲ ಪತ್ನಿ ಮೇಲೆ ರಾಕ್ಷಸನಂತೆ ಹಲ್ಲೆ ಮಾಡಿ ರಾಕ್ಷಸತ್ವ ಮೆರೆದಿದ್ದಾನೆ. ಬೋಡುಪ್ಪಾಲ್​​ ಪ್ರದೇಶದ ಪುಲಕಂಡ್ಲ ಶ್ರೀನಿವಾಸ ರೆಡ್ಡಿ ಈಗಾಗಲೇ ಮದುವೆಯಾಗಿ ಎರಡು ವರ್ಷದ ಮಗುವಿದ್ದರೂ ಎರಡನೇ ಮದ್ವೆ ಮಾಡಿಕೊಂಡಿದ್ದ. ಹೀಗೆ ಇನ್ನೊಬ್ಬಳ ಕೊರಳಿಗೆ ತಾಳಿ ಕಟ್ಟೋ ಮುನ್ನ ಡಿವೋರ್ಸ್​ ಪಡೆದುಕೊಂಡಿರ್ಲಿಲ್ಲ. ಹೀಗಾಗಿ ಮೊದಲ ಮಡದಿ ನ್ಯಾಯ ಕೇಳೋಕೆ ಅಂತ ಎರಡನೇ ಪತ್ನಿ ಮನೆಗೆ ಬಂದಿದ್ದಾಳೆ.

ಎರಡನೇ ಪತ್ನಿ ಎದುರು ಮೊದಲ ಪತ್ನಿ ಕಂಡು ತಬ್ಬಿಬ್ಬಾದ ಶ್ರೀನಿವಾಸ ರೆಡ್ಡಿ, ಏಕಧಂ ಆಕೆಯೊಂದಿಗೆ ಹೊಡೆದಾಟಕ್ಕೆ ಇಳಿದಿದ್ದಾನೆ. ಅಷ್ಟೇ ಅಲ್ಲ ಆಕೆಯ ಜುಟ್ಟು ಹಿಡಿದು ಎಳೆದಾಡಿದ್ದಾನೆ. ಅಷ್ಟೇ ಆಕೆಯನ್ನು ಎತ್ತಿ ನೆಲಕ್ಕೆ ಎಸೆದು ಕೌರ್ಯ ಮೆರೆದಿದ್ದಾನೆ. ಇಷ್ಟೇ ಅಲ್ಲ ಆಕೆಯ ಸಹಾಯಕ್ಕೆ ಬಂದಿದ್ದ ಸಹೋದರನ್ನು ಓಡಾಡಿಸಿಕೊಂಡು ಹೊಡೆದಾಡಿದ್ದಾನೆ. ಅಷ್ಟೇ ಅಲ್ಲ ತನ್ನದೇ ಕರುಳಕುಡಿಯನ್ನು ತಳ್ಳಿದ್ದಾನೆ. ಈತನ ಎಲ್ಲ ಕೌರ್ಯಗಳು ಮೊಬೈಲ್​ನಲ್ಲಿ ದಾಖಲಾಗಿದೆ. ಈತನ ರಾಕ್ಷಸಾವತಾರ ನೋಡಿ ಕಂಗೆಟ್ಟಿರುವ ಮೊದಲ ಪತ್ನಿ ಸಂಗೀತಾ ಈ ಮೆಡಿಪಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೂ ತನ್ನದೇ ತಪ್ಪಿಟ್ಟುಕೊಂಡು ಅಮಾಯಕ ಪತ್ನಿ ಮೇಲೆ ಟಿಆರ್​ಎಸ್ ಮುಖಂಡ ದೌರ್ಜನ್ಯಮೆರೆದಿರುವ ವಿಡಿಯೋ ಮಾತ್ರ ಸಖತ್ ವೈರಲ್​ ಆಗಿದ್ದು, ಜನರು ಆತನ ದುಷ್ಟತನಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.