ಶ್ರೀರಾಮುಲು ಕಾರಿಗೆ ಕಲ್ಲು ಹೊಡೆಯೋಕೆ ಸುಫಾರಿ ಕೊಟ್ಟಿದ್ದು ಯಾರು?! ನೀವೆ ನೋಡಿ!

ಬಿಜೆಪಿ ಟಿಕೇಟ್​ ಮೊದಲ ಪಟ್ಟಿ ಬಿಡುಗಡೆಯಾದಾಗಿನಿಂದಲೂ ಕಮಲ ಪಾಳಯದಲ್ಲಿ ಅಸಮಧಾನ ಭುಗಿಲೆದ್ದಿದೆ. ಇನ್ನು ಚಿತ್ರದುರ್ಗದ ಮೊಳಕಾಲ್ಮೂರು ಕ್ಷೇತ್ರವಂತೂ ಬಿಜೆಪಿಯ ಅಂತಃಕಲಹಕ್ಕೆ ಸಿಲುಕಿ ನಲುಗಿ ಹೋಗಿದೆ. ಮೊನ್ನೆಯಷ್ಟೇ ನಾಯಕನಹಟ್ಟಿಗೆ ಶ್ರೀರಾಮುಲು ಭೇಟಿ ಕೊಟ್ಟಾಗ ಕಾರ್ಯಕರ್ತರು ಗಲಾಟೆ ಮಾಡಿ ಕಾರಿನ ಮೇಲೆ ಕಲ್ಲೆಸೆದಿದ್ದರು. ಇದೀಗ ಈ ಕೃತ್ಯದ ಹಿಂದೆ ಸ್ವತಃ ತಿಪ್ಪೆಸ್ವಾಮಿ ಕೈವಾಡ ಇರೋದು ಸಾಬೀತಾಗಿದೆ.

ಹೌದು ಮೊಳಕಾಲ್ಮೂರ್ ಬಿಜೆಪಿ ಟಿಕೆಟ್​ ಫೈಟ್​ಗೆ ಟ್ವಿಸ್ಟ್​ ಸಿಕ್ಕಿದೆ. ಮೊನ್ನೆ ನಾಯಕನಹಟ್ಟಿಗೆ ಶ್ರೀರಾಮುಲು ಭೇಟಿ ಕೊಟ್ಟಾಗ, ಟಿಕೆಟ್ ವಂಚಿತ ಶಾಸಕ ತಿಪ್ಪೇಸ್ವಾಮಿ ಬೆಂಬಲಿಗರು ಗಲಾಟೆ ಮಾಡಿದ್ದರು. ಅಷ್ಟೆ ಅಲ್ಲ ಶ್ರೀರಾಮುಲು ಕಾರಿನ ಮೇಲೆ ಕಲ್ಲು ತೂರಿದ್ದರು. ಆದ್ರೆ ಈ ಗಲಾಟೆ ತಿಪ್ಪೇಸ್ವಾಮಿ ಪ್ರಚೋದನೆಯಿಂದ ನಡೆದಿದೆ ಎನ್ನಲಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಮೊಳಕಾಲ್ಮೂರಿನಲ್ಲಿದ್ದುಕೊಂಡೇ ಕಲ್ಲು ಹೊಡೆಯಿರಿ, ಗಲಾಟೆ ಮಾಡ್ಸಿ ಎಂದು ಬೆಂಬಲಿಗರಿಗೆ ಫೋನ್​ನಲ್ಲಿ ಪ್ರಚೋದನೆ ಕೊಟ್ಟಿದ್ದಾರೆ. ಹೀಗೆ ಬೆಂಬಲಿಗರಿಗೆ ಸೂಚನೆ ಕೊಡ್ತಿರೋ ದೃಶ್ಯ ಕ್ಯಾಮರಾಗೆ ಲಭ್ಯವಾಗಿದ್ದು, ತಿಪ್ಪೆಸ್ವಾಮಿಯ ಬುದ್ಧಿ ಬಯಲಾಗಿದೆ.