ಆನೆ ಸೆರೆಗೆ ಡ್ರೋನ್ ಬಳಕೆ- ಅರಣ್ಯಾಧಿಕಾರಿಗಳ ಹೊಸ ಐಡಿಯಾ!!

Tumkur: Forest officials planning to use Drones to Find Elephants.

ಪ್ರಸಕ್ತ ವರ್ಷ ರಾಜ್ಯದಾದ್ಯಂತ ಆನೆದಾಳಿ ಅರಣ್ಯ ಇಲಾಖೆ ಪಾಲಿಗೆ ತಲೆನೋವಾಗಿ ಪರಿಣಮಿಸಿದೆ. ಆನೆಗಳ ಚಲನ-ವಲನ ಕಂಡುಹಿಡಿಯೋದೆ ಅರಣ್ಯಾಧಿಕಾರಿಗಳ ಪಾಲಿಗೆ ದೊಡ್ಡ ತಲೆನೋವು. ಆದರೇ ಈ ಸಮಸ್ಯೆಗೆ ಕಡಿವಾಣ ಹಾಕೋಕೆ ತುಮಕೂರು ಅರಣ್ಯ ಇಲಾಖೆ ಹೊಸದೊಂದು ಐಡಿಯಾ ಕಂಡು ಹಿಡಿದಿದೆ. ಅದೆನೆಂದ್ರೇ ಇಲ್ಲಿ ಆನೆಯ ಚಲನ-ಚಲನವನ್ನು ದಾಖಲಿಸಲು ಡ್ರೋನ್ ಕ್ಯಾಮರಾ ಬಳಸಲಾಗ್ತಿದೆ.

Tumkur: Forest officials planning to use Drones to Find Elephants.
Tumkur: Forest officials planning to use Drones to Find Elephants.

ಹೌದು ಹೀಗೆ ಡ್ರೋನ್​ ಕ್ಯಾಮರಾ ಬಳಸಿ ಆನೆ ಚಲನ-ವಲನ ಸಂಗ್ರಹಿಸಲಾಗ್ತಿರೋದರಿಂದ ಆನೆ ಎಲ್ಲಿದೆ? ಯಾವ ಕಡೆ ಮುಖ ಮಾಡಿದೆ. ಜನರು ಮತ್ತು ಆನೆ ನಡುವೆ ಎಷ್ಟು ಅಂತರವಿದೆ ಎಂಬುದನ್ನು ಕಂಡುಹಿಡಿಯಲು ಇದು ನೆರವಾಗುತ್ತಿದೆ.

Tumkur: Forest officials planning to use Drones to Find Elephants.
Tumkur: Forest officials planning to use Drones to Find Elephants.

ಪ್ರಾಯೋಗಿಕವಾಗಿ ತುಮಕೂರಿನ ಸಿರಾ ಬಳಿ ಆನೆ ಕಾಣಿಸಿಕೊಂಡಾಗ ಸ್ಥಳೀಯರು ಆತಂಕಗೊಂಡಿದ್ದರು. ಈ ವೇಳೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಡ್ರೋನ್ ಕ್ಯಾಮರಾ ಬಳಸಿ ಆನೆಗಳ ಚಲನ-ವಲನವನ್ನು ರೆಕಾರ್ಡ್​ ಮಾಡಿದ್ದಾರೆ. ಮತ್ತು ಡ್ರೋನ್​ನಲ್ಲಿ ಸೆರೆಯಾದ ದೃಶ್ಯಾವಳಿ ಆಧರಿಸಿ ಕಾರ್ಯಾಚರಣೆ ನಡೆಸಿ ಆನೆಯನ್ನು ಕಾಡಿನತ್ತ ಓಡಿಸಿದ್ದರು. ಒಟ್ಟಿನಲ್ಲಿ ಇದೀಗ ಆನೆದಾಳಿ ನಿಯಂತ್ರಣಕ್ಕೆ ಡ್ರೋನ್ ಕ್ಯಾಮರಾ ಸಹಕಾರಿಯಾಗಲಿರುವ ಸಂಗತಿ ಬೆಳಕಿಗೆ ಬಂದಿದ್ದು, ಅರಣ್ಯಾಧಿಕಾರಿಗಳು ಡ್ರೋನ್ ಮೊರೆ ಹೋಗುತ್ತಿದ್ದಾರೆ.

Watch Here: https://youtu.be/damruRegYM0