ಇದು ನಿಧಿಯ ಬೆನ್ನು ಹತ್ತಿದವರ ಕಥೆ ವ್ಯಥೆ!!!!!!!!

ಮೋಸ ಹೋಗೋರು ಇರೋ ತನಕ ಮೋಸ ಮಾಡೋರು ಇರ್ತಾರೆ ಅನ್ನೋ ಮಾತು ಸುಳ್ಳಲ್ಲ. ಇಂತಹುದೇ ಘಟನೆಯೊಂದು ತುಮಕೂರಿನಲ್ಲಿ ನಡೆದಿದ್ದು, ಆದರೇ ಚಿನ್ನ ಕೊಡ್ತಿನಿ ಅಂತ ವಂಚಿಸಲು ಹೊರಟಿದ್ದ ತಂಡವನ್ನು ಪೊಲೀಸರು ಲೈವ್​ ಕಾರ್ಯಾಚರಣೆಯಲ್ಲಿ ಬಂಧಿಸಿದ್ದು, ಈ ಎಕ್ಸಕ್ಲೂಸಿವ್​​ ವಿಡಿಯೋ ಬಿಟಿವಿ ನ್ಯೂಸ್​ಗೆ ಲಭ್ಯವಾಗಿದೆ.

ತುಮಕೂರಿನಲ್ಲಿ ಖರ್ತನಾಕ ತಂಡವೊಂದು ಯುವತಿಯೊರ್ವಳಿಗೆ  ಪೋನ್ ಮಾಡಿ ನಮಗೆ ನಿಧಿ ಸಿಕ್ಕಿದೆ. ನೀವು ಎರಡು ಲಕ್ಷ ರೂಪಾಯಿ ಕೊಟ್ಟರೇ ನಿಮಗೆ ಕೊಡ್ತಿವಿ ಎಂದಿದ್ದಾರೆ. ಇದರಿಂದ ಅನುಮಾನಗೊಂಡ ಯುವತಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಎಚ್ಚೆತ್ತ ಡಿಸಿಬಿ ಇನ್ಸಪೆಕ್ಟರ್ ರಾಘವೇಂದ್ರ ನೇತೃತ್ವದ ತಂಡ ಯುವತಿಯನ್ನು ಬಳಸಿಕೊಂಡು ಗ್ಯಾಂಗ್​​​​ಗೆ ಪೋನ್ ಮಾಡಿ ಯಲ್ಲಾಪೂರ ಬಳಿ ಬರೋಕೆ ಹೇಳಿದ್ದಾರೆ. ಬಳಿಕ ನಿಗದಿತ ಸ್ಥಳಕ್ಕೆ ಹೋದ ಪೊಲೀಸ್ ತಂಡವನ್ನು ಕಳ್ಳರು 10 ಕಿಮಿ ಮುಂದೇ ಕರೆದೊಯ್ದರು ಬಳಿಕ ಮಡಿಕೆ ತೋರಿಸಿ ಇದರಲ್ಲಿ ಚಿನ್ನವಿದೆ ಎಂದು ನಂಬಿಸಿದ್ದಾರೆ.

ಆದರೇ ಪೊಲೀಸರ ತಂಡ ಇದನ್ನು ನಂಬದೇ ಕಳ್ಳರನ್ನು ಹಿಡಿದಿದ್ದಾರೆ. ಬಳಿಕ ಮಡಿಕೆ ನೋಡಿದರೇ ಅದರಲ್ಲಿ ಕಲ್ಲು ತುಂಬಿತ್ತು. ಇದೀಗ ಖರ್ತನಾಕ ಕಳ್ಳರ ಗ್ಯಾಂಗ್​​ ತುಮಕೂರು ಪೊಲೀಸರ ಅತಿಥಿಯಾಗಿದೆ.