ರಾಜ್ಯದಲ್ಲಿ ಮತ್ತೊಂದು ಕೊಂಡ ದುರಂತ- ಬೆಂಕಿಯಲ್ಲಿ ಬೆಂದಬಾಲಕ- ಮೈಜುಮ್ಮೆನ್ನಿಸುತ್ತೆ ದೃಶ್ಯಾವಳಿ!!

Two Injured in blaze Accident At Karwar.

ರಾಜ್ಯದಲ್ಲಿ ಮತ್ತೊಂದು ಕೊಂಡ ದುರಂತ ನಡೆದಿದ್ದು, ಅಯ್ಯಪ್ಪ ಮಾಲಾಧಾರಿಗಳು ಕೆಂಡ ಹಾಯುವ ವೇಳೆ ಆಯತಪ್ಪಿ ವೃತದಾರಿ ಬಾಲಕನೊರ್ವ ಆಯತಪ್ಪಿ ಕೆಂಡಕ್ಕೆ ಬಿದ್ದಿದ್ದು ಇದೀಗ ತೀವ್ರ ಗಾಯಗೊಂಡು ಜೀವನ್ಮರಣದ ನಡುವೆ ಹೋರಾಡುತ್ತಿದ್ದಾನೆ‌.

 

ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ನೆಲಗುಣಿಯಲ್ಲಿ ಘಟನೆ ನಡೆದಿದೆ. ನೆಲಗುಣಿಯಲ್ಲಿ ಸ್ಥಾಪಿಸಲಾಗಿರುವ ಅಯ್ಯಪ್ಪ ಸ್ವಾಮಿ ಸನ್ನಿಧಾನದ ಕೆಂಡಹಾಯುವ ವೇಳೆ ಘಟನೆ ನಡೆದಿದೆ. ಕೆಂಡದಲ್ಲಿ ಬಿದ್ದು ಗಾಯಗೊಂಡಿರುವ ಬಾಲಕನನ್ನು ಪ್ರಜ್ವಲ ಎಂದು ಗುರುತಿಸಲಾಗಿದೆ. ಬಾಲಕ ಪ್ರಜ್ವಲ್ ಹಾಗೂ ಆತನ ತಂದೆ ಅಯ್ಯಪ್ಪ ವೃತಧಾರಿಗಳಾಗಿದ್ದರು ಎನ್ನಲಾಗಿದೆ. ತಂದೆ ಕೆಂಡ ಹಾಯುವ ವೇಳೆ ಬಾಲಕ ಪ್ರಜ್ವಲ್ ಕೆಂಡ ಹಾಯಲು ನಿರಾಕರಿಸಿದ್ದರಿಂದ ತಂದೆ ಒಬ್ಬರೇ ಕೆಂಡ ತುಳಿದಿದ್ದರು. ಆದರೇ ಆತನ ಸಂಬಂಧಿಯೊಬ್ಬರು ಬಾಲಕನನ್ನು ಎತ್ತಿಕೊಂಡು ಕೆಂಡ ತುಳಿಯಲು ಯತ್ನಿಸಿ ದ್ದಾರೆ.

 

 

ಈ ವೇಳೆ ಭಯಗೊಂಡ ಬಾಲಕ ಅವರ ಕೈಯಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಕೆಂಡಕ್ಕೆ ಬಿದ್ದಿದ್ದಾನೆ. ತೀವ್ರವಾಗಿ ಗಾಯಗೊಂಡಿರುವ ಬಾಲಕನನ್ನು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದ ಎರಡು ದಿನಗಳ ಹಿಂದೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇನ್ನು ಈ ಬಗ್ಗೆ ಎಲ್ಲಿಯೂ ದೂರು ದಾಖಲಾಗಿಲ್ಲ.ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆದಿದೆ ಎಂಬ ಮಾತು ಕೂಡ ಕೇಳಿಬಂದಿದೆ.ಒಟ್ಟಿನಲ್ಲಿ ಇನ್ನು ರಾಜ್ಯದಲ್ಲಿ ಕೊಂಡ ದುರಂತಗಳು ನಡೆಯುತ್ತಲೇ ಇದ್ದು ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳುವಲ್ಲಿ ವಿಫಲವಾಗಿದೆ.