ಇಲ್ಲಿ ಶಾಲೆ ನಡೆಯೋದೇ ರೈಲು ಬೋಗಿಯಲ್ಲಿ- ಎಲ್ಲಿ ಈ ಶಾಲೆ ಗೊತ್ತಾ?

Udupi: Teachers painted School as a Train like.

ಆಂಗ್ಲಭಾಷೆಯ ವ್ಯಾಮೋಹಕ್ಕೆ ಬಲಿಯಾದ ಪೋಷಕರು ಕ್ವಾನೆಂಟ್​​ಗಳತ್ತ ಮುಖಾಮಾಡಿರೋದರಿಂದ ಹಳ್ಳಿಗಾಡಿನ ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚುವ ಸ್ಥಿತಿಯಲ್ಲಿದೆ.

ad


 

ಹೀಗಾಗಿ ಸರ್ಕಾರಿ ಶಿಕ್ಷಕರು ತಮ್ಮ ಶಾಲೆಗೆ ಮಕ್ಕಳನ್ನು ಸೆಳೆಯಲು ಹರಸಾಹಸ ಪಡುವಂತಾಗಿದೆ. ಹೀಗೆಯೇ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ನಾಗೂರು ಸರ್ಕಾರಿ ಶಾಲೆ ಶಿಕ್ಷಕರು ಮಕ್ಕಳಿಗಾಗಿ ಶಾಲೆಯನ್ನೇ ಟ್ರೇನ್​ ಆಗಿ ಪರಿವರ್ತಿಸಿದ್ದಾರೆ. ಅದ್ಹೇಗಿದೆ ಶಾಲೆ ನೀವೆ ನೋಡಿ. ದೃಶ್ಯಾವಳಿಯಲ್ಲಿ ಪಕ್ಕಾ ಟ್ರೇನ್​​ನಂತೆ ಕಾಣುವ ಈ ಇದು ಟ್ರೇನ್​ ಅಲ್ಲ. ಬದಲಾಗಿ ಸರ್ಕಾರಿ ಶಾಲೆಯ ಕಟ್ಟಡ. ಹೌದು ಕುಂದಾಪುರ ತಾಲೂಕಿನ ನಾಗೂರಿನ ಸರ್ಕಾರಿ ಶಾಲೆಯ ಶಿಕ್ಷಕರು ಕುಸಿಯುತ್ತಿರುವ ಮಕ್ಕಳ ಸಂಖ್ಯೆಯನ್ನು ಏರಿಸಲು ಶಾಲೆಯ ಸ್ವರೂಪವನ್ನೇ ಬದಲಾಯಿಸಿದ್ದಾರೆ.

ಕಳೆದ ಭಾರಿ 29 ಮಕ್ಕಳಿದ್ದ ಶಾಲೆಯಲ್ಲಿ ಈ ಭಾರಿ 20 ಕ್ಕಿಳಿದಿದೆ. ಹೀಗಾಗಿ ಶಾಲೆಯ ಕೊಠಡಿಗಳಿಗೆ ಟ್ರೈನ್​ ಬೋಗಿಗಳಂತೆ ಪೇಂಟ್​ ಮಾಡಲಾಗಿದೆ.  ಕಲಾ ಶಿಕ್ಷಕರಾದ ಬಡಿಗೇರ್, ಚಂದ್ರಶೇಖರ್ ಮತ್ತು ಗಿರೀಶ್ ಉಚಿತವಾಗಿ 7 ದಿನ ಈ ರೈಲು ಶಾಲೆಯನ್ನು ಸಿದ್ಧಪಡಿಸಿದ್ದಾರೆ. ತಮ್ಮ ನಿತ್ಯ ಕೆಲಸವಾದ ಬಳಿಕ ರಾತ್ರಿ 11 ಗಂಟೆವರೆಗೆ ಕರ್ತವ್ಯ ನಿರ್ವಹಿಸಿ ಪೇಂಟ್​ ಮಾಡಿದ್ದು, ನೈಜವಾದ ರೈಲು ಬೋಗಿಯಂತೆ ಕಾಣಿಸುತ್ತಿದೆ. ಇದಕ್ಕಾಗಿ ಮುಖ್ಯ ಶಿಕ್ಷಕ ವಿಶ್ವನಾಥ್ ಪೂಜಾರಿ ತಾವೇ ಸ್ವತಃ 36 ಸಾವಿರ ನೀಡಿದ್ದಾರೆ. ಇದ್ರಿಂದ ಪ್ರೇರಿತರಾದ ಹಳೆ ವಿದ್ಯಾರ್ಥಿಗಳು ಇನ್ನಷ್ಟು ದೇಣಿಗೆಯನ್ನು ನೀಡಿದ್ದಾರೆ. ಈ ಪ್ರಯತ್ನ ಫಲನೀಡಿದ್ದು ಹೆಚ್ಚು ವಿದ್ಯಾರ್ಥಿಗಳು ಈ ಶಾಲೆಗೆ ಭೇಟಿ ನೀಡುತ್ತಿದ್ದಾರೆ.