ಕಾರ್ಯಕರ್ತರಿಂದ ಮಸಾಜ್ ಮಾಡಿಸಿಕೊಂಡ ಬಿಜೆಪಿ ಸಚಿವ!!

ರಾಜಕಾರಣಿಗಳು ತಮ್ಮ ಬೆಂಬಲಿಗರಿಂದ ಸೇವೆ ಮಾಡಿಸಿಕೊಳ್ಳೋದು ಹೊಸ ವಿಚಾರವೇನಲ್ಲ. ಇದಕ್ಕೆ ಇದೀಗ ಹೊಸ ಸೇರ್ಪಡೆ ಉತ್ತರ ಪ್ರದೇಶದ ಯೋಗಿ ಸಚಿವ ಸಂಪುಟದ ಸಚಿವ ನಂದ್ ಗೋಪಾಲ.

ಹೌದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸಂಪುಟದ ಸಚಿವ ನಂದ್‌ ಗೋಪಾಲ್‌‌‌ ಪ್ರಚಾರ ಇತ್ತೀಚೆಗೆ ಪಕ್ಷದ ಸಭೆಯಲ್ಲಿ ಭಾಯಿಯಾಗಿದ್ದರು. ಅಷ್ಟೇ ಅಲ್ಲ ಕ್ಯಾಬಿನೇಟ್​​ ಸಚಿವರರಾಗಿರುವ ಗೋಪಾಲ್ ನವೆಂಬರ್ 22 ರಂದು ನಡೆಯಲಿರುವ ಸ್ಥಳೀಯ ಪೌರ ಸಂಸ್ಥೆ ಚುನಾವಣೆಯ ಪ್ರಚಾರದಲ್ಲೂ ಭಾಗಿಯಾಗಿದ್ದರು. ನಂತರ ರೂಂವೊಂದರಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಸಚಿವರು ಕಾರ್ಯಕರ್ತರಿಂದ ಮಸಾಜ್ ಮಾಡಿಸಿಕೊಂಡಿದ್ದಾರೆ.

ಈ ವಿಡಿಯೋ ಸಖತ್ ವೈರಲ್ ಆಗಿದೆ. ಕೆಲ ದಿನಗಳ ಹಿಂದೆಯಷ್ಟೇ ತೆಲಂಗಾಣದ ಪೊಲೀಸ್​ ಠಾಣೆಯಲ್ಲಿ ಸಬ್​ಇನ್ಸ್​ಪೆಕ್ಟರ್​​ ಠಾಣೆಯ ಮಹಿಳಾ ಸಿಬ್ಬಂದಿಯಿಂದ ಮಸಾಜ್​ ಮಾಡಿಸಿಕೊಂಡ ಬೆನ್ನಲ್ಲೇ ಉತ್ತರಪ್ರದೇಶದ ಸಚಿವರು ಬಿಜೆಪಿ ಕಾರ್ಯಕರ್ತರಿಂದ ಮಸಾಜ್‌‌ ಮಾಡಿಸಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.