ಕುಡಿಯುವ ನೀರು ನೀಡುವಂತೆ ಮಹಿಳೆಯರಿಂದಶೆಟ್ಟರ್ ಮನೆಗೆ ಮುತ್ತಿಗೆ… ಬೇಸಿಗೆ ಆರಂಭದಲ್ಲಿಯೇ ‌ನೀರಿಗಾಗಿ ಹಾಹಾಕಾರ.

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿದ್ದು, ರೊಚ್ಚಿಗೆದ್ದ ಸ್ಥಳೀಯ ನಿವಾಸಿಗಳು‌ ವಿಪಕ್ಷ ನಾಯಕ‌ ಜಗದೀಶ್ ಶೆಟ್ಟರ್ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಶಬರಿ ನಗರದಲ್ಲಿ ಕಳೆದು ಹದಿನೈದು ದಿನಕ್ಕೆ ಒಂದು ಸಾರಿ ಕುಡಿಯುವ ನೀರು ಬಿಡಲಾಗುತ್ತಿದೆ. ಹಾಗಾಗಿ ಖಾಲಿ ಕೊಡ ಹಿಡಿದು ಜಗದೀಶ್ ಶೆಟ್ಟರ್ ಮನೆ ಮುಂದೆ ಮಹಿಳೆಯರು ಹೋರಾಟ ಮಾಡಿದ್ದಾರೆ.‌

ಶಬರಿ ನಗರದಲ್ಲಿ ಸಮರ್ಪಕವಾಗಿ ಕುಡಿಯುವ ನೀರು ಸಿಗುತ್ತಿಲ್ಲಾ ಹದಿನೈದು ದಿನಕ್ಕೆ ಒಂದು ಸಾರಿ‌ ಕುಡಿಯುವ ನೀರು ಬಿಡಲಾಗುತ್ತಿದೆ.‌ ಸಮರ್ಪಕವಾಗಿ ಕುಡಿಯುವ ನೀರು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಮಹಾನಗರ ಪಾಲಿಕೆಗೆ ಮನವಿ ಸಲ್ಲಿಸಿದ್ರು‌ ಪ್ರಯೋಜನವಾಗಿಲ್ಲ.

 

ಹಾಗಾಗಿ ರೊಚ್ಚಿಗೆದ್ದ ಸ್ಥಳೀಯ ನಿವಾಸಿಗಳು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮನೆ ಮುಂದೆ ಹೋರಾಟ
ಮಾಡಿದ್ರು, ವಿಪಕ್ಷ ನಾಯಕ‌ ಜಗದೀಶ್ ಶೆಟ್ಟರ್ ಕೂಡಲೇ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡೋದಾಗಿ ಭರವಸೆ ನೀಡಿದ ಬಳಿಕ ಹೋರಾಟವನ್ನು ‌ಕೈ ಬಿಟ್ಟಿದ್ದಾರೆ..

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಜಗದೀಶ್ ಶೆಟ್ಟರ್ ಸರ್ಕಾರ ಹುಬ್ಬಳ್ಳಿ- ಧಾರವಾಡ ಅವಳಿ ನಗರದ ಕುಡಿಯುವ ನೀರಿಗಾಗಿ ‌24 ಕೋಟಿ ವಿಶೇಷ ಪ್ಯಾಕೇಜ್ ನೀಡುವಂತೆ ಕೇಳಲಾಗಿತ್ತು ಆದ್ರೆ ಸರ್ಕಾರ ಅನುದಾನ ಬಿಡುಗಡೆ ಮಾಡ್ತಾಯಿಲ್ಲಾ ಹಾಗಾಗಿ ‌ನೀರನ್ನು‌ ಸಮರ್ಪಕವಾಗಿ ನೀಡಲು‌‌ ಆಗುತ್ತಲ್ಲ ಎಂದ್ರು.

ವರದಿ: ಮಂಜು ಪತ್ತಾರ ಬಿಟಿವಿ ‌ಹುಬ್ಬಳ್ಳಿ..