ಕುಮಾರಸ್ವಾಮಿಯವರ ರಾಜೀನಾಮೆ ಯಾವಾಗ? ಅಂದ ಪೇದೆಗೆ ಎಂಥಾ ಶಿಕ್ಷೆ ಗೊತ್ತಾ!

ಸರ್ಕಾರಿ ಸೇವೆಯಲ್ಲಿದ್ದವರು ಯಾವುದೇ ರಾಜಕೀಯ ಪಕ್ಷ, ಸಂಘಟನೆ ಹಾಗೂ ಧರ್ಮದ ಪರ ಹಾಗೂ ವಿರುದ್ದ ಕೆಲಸ ಮಾಡಬಾರದು. ಆದ್ರೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಪೊಲೀಸ್ ಪೇದೆಯೊಬ್ಬ ಬಿಜೆಪಿ ಪಕ್ಷದ ವಕ್ತಾರನಂತೆ ತನ್ನ ಫೆಸ್ ಬುಕ್ ಅಕೌಂಟ್ ನಲ್ಲಿ ರಾಜ್ಯ ಸರ್ಕಾರದ ವಿರುದ್ದವೇ ಫೋಸ್ಟ್ ಶೇರ್ ಮಾಡುವ ಮೂಲಕ ಬಿಜೆಪಿ ಕಾರ್ಯಕರ್ತನಂತೆ ವರ್ತಿಸುತ್ತಿದ್ದಾನೆ.

ad

ಶಹರ ಠಾಣೆಯ ಪೊಲೀಸ್ ಪೇದೆ ಅರುಣ್ ಡೊಳ್ಳಿನ್ ಎಂಬಾತ ಫೇಸ್ ಬುಕ್‌ನಲ್ಲಿ ಸರ್ಕಾರದ ವಿರುದ್ದ ಆಕ್ರೋಶ ಹೊರ ಹಾಕಿದ್ದಾನೆ. ಕುಮಾರಸ್ವಾಮಿಯವರೇ ರಾಜೀನಾಮೆ‌ ಯಾವಾಗ ಎಂಬ ಪೋಸ್ಟ್ ಶೇರ್ ಮಾಡುವ ಮೂಲಕ ಸಿಎಂ ಕುಮಾರಸ್ವಾಮಿಗೆ ಅವಮಾನ ಮಾಡಿದ್ದಾನೆ.

ಮುಖ್ಯಮಂತ್ರಿಗಳೇ ೧೮ ದಿನ ಕಳೆದ್ರು ಸಾಲಮನ್ನಾ ಮಾಡಿಲ್ಲ ರಾಜೀನಾಮೆ ಯಾವಾಗ ಎಂಬ ಪೋಸ್ಟ್ ಶೇರ್ ಮಾಡಿದ್ದಾನೆ. ಈ ಮೂಲಕ ಪೇದೆ ಅರುಣ್ ಡೊಳ್ಳಿನ್ ತನ್ನ ಫೇಸ್ ಬುಕ್‌ನಲ್ಲಿ ಸರ್ಕಾರದ ವಿರುದ್ದದ ಫೊಸ್ಟ್ ಶೇರ್ ಮಾಡಿದ್ದಾನೆ. ಅಲ್ಲದೆ ಕಾಂಗ್ರೆಸ್- ಜೆಡಿ ಎಸ್ ಪಕ್ಷದ ವಿರುದ್ದ ಅಪಪ್ರಚಾರದ ಪೋಸ್ಟ್ ಶೇರ್ ಮಾಡಿದ್ದಾನೆ. ಬಿಜೆಪಿ ಪರವಾಗಿ ಪ್ರಚಾರ ಮಾಡಿ ಜೆಡಿಎಸ್-ಕಾಂಗ್ರೆಸ್ ವಿರುದ್ದ ಅಪಪ್ರಚಾರದ ಪೋಸ್ಟ್ ಮಾಡಿದಲ್ಲದೆ ಕಾಂಗ್ರೆಸ್ ಪಕ್ಷ ಮಹಿಳಾ ಮುಖಂಡರ ವಿರುದ್ಧ ಹಾಗೂ ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳುವ ಫೋಸ್ಟ್ ಶೇರ್ ಮಾಡಿದ್ದಾನೆ.

 

ಹಾಗಾಗಿ ಶಹರ ಪೊಲೀಸ ಪೇದೆ ಅರುಣ್ ಡೊಳ್ಳಿನ್ ಅವರನ್ನು ಅಮಾನತು ಮಾಡಿ ತನಿಖೆಗೆ ಆದೇಶ ಮಾಡಲಾಗಿದೆ ಅಂತಾ ರೇಣುಕಾ ಸುಕುಮಾರ ಮಾಧ್ಯಮಗಳೊಂದಿಗೆ ಮಾತನಾಡಿ ಹೇಳಿದ್ರು. ಶಿಸ್ತಿನ ಇಲಾಖೆಯಲ್ಲಿ ಈ ರೀತಿ ಮಾಡಬಾರದು ಹಾಗಾಗಿ ತನಿಖೆ ಮಾಡಿ ಸೂಕ್ರ ಕ್ರಮ ಕೈಗೊಳ್ಳುತ್ತೇವೆ ಎಂದ್ರು…