ವಂಚಿಸಿದವನಿಗೆ ಸಖತ್​ ಗೂಸಾ ನೀಡಿದ ವನಿತೆಯರು!!

Women Hits Man For Cheating At Bellary.

ಮೋಸ ಹೋಗೋರು ಇರೋ ತನಕ ಮೋಸ ಮಾಡೋರು ಇರ್ತಾರೆ ಅನ್ನೋದು ಬಳ್ಳಾರಿಯಲ್ಲಿ ಮತ್ತೊಮ್ಮೆ ನಿಜವಾಗಿದೆ. ಸ್ವಸಹಾಯ ಗುಂಪುಗಳಿಗೆ ಸರ್ಕಾರದ ಅನುದಾನ ಕೊಡಿಸುವುದಾಗಿ ನಂಬಿಸಿದ ವ್ಯಕ್ತಿಯೊಬ್ಬ ಮಹಿಳೆಯಿಂದ ಹಣ ಸಂಗ್ರಹಿಸಿ ವಂಚಿಸಲು ಯತ್ನಿಸಿದ್ದಾನೆ. ಈತನ ವಂಚನೆಯ ಮಾಹಿತಿ ಪಡೆದ ಮಹಿಳೆಯರು ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

 

ಬಳ್ಳಾರಿಯಲ್ಲಿ ವಿವಿಧೆಡೆ ಇರುವ ಸ್ವಸಹಾಯ ಸಂಘಗಳಿಂದ ತುಮಕೂರು ಮೂಲದ ಮಂಜುನಾಥ ಎಂಬಾತ ಶೇರಿನ್​ ರೂಪದಲ್ಲಿ ಹಣ ಸಂಗ್ರಹಿಸಿದ್ದ. ಅಲ್ಲದೇ ಈ ಹಣ ಶೇರು ಎಂದು ನಂಬಿಸಿದ್ದ ಮಂಜುನಾಥ ಸರ್ಕಾರದಿಂದ ಸಾಲ ಕೊಡಿಸುವ ಭರವಸೆ ನೀಡಿದ್ದ. ಆದರೆ ಬಳಿಕ ಸಾಲ ಕೊಡಿಸದೇ ತಲೆಮರೆಸಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಮಂಜುನಾಥ ವಿರುದ್ಧ ಬಳ್ಳಾರಿಯ ವಿವಿಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

 

 

 

 

ಮಂಜುನಾಥ ರಾಜ್ಯದಾದ್ಯಂತ ಹಲವೆಡೆ ಈ ರೀತಿ ವಂಚನೆ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಅಂದಾಜು 5 ಕೋಟಿ ರೂಪಾಯಿ ವಂಚನೆ ಎಸಗಿದ್ದಾನೆ ಎನ್ನಲಾಗುತ್ತಿದೆ. ಈತ ಬಳ್ಳಾರಿಯಲ್ಲಿ ಅಚಾನಕ್​ ಆಗಿ ವಂಚನೆಗೊಳಗಾದ ಹೆಣ್ಣುಮಕ್ಕಳ ಕೈಯಲ್ಲಿ ಸಿಕ್ಕಿ ಬಿದ್ದಿದ್ದು, ಈ ವೇಳೆ ಮಹಿಳೆಯರು ಈತನನ್ನು ಸರಿಯಾಗಿ ಥಳಿಸಿದ್ದಾರೆ. ಒಟ್ಟಿನಲ್ಲಿ ಮಾಡಿದ್ದುಣ್ಣು ಮಹರಾಯ ಎಂಬಂತೆ ಮಂಜುನಾಥ ಈಗ ಪೊಲೀಸರ ವಶದಲ್ಲಿದ್ದು, ವಿಚಾರಣೆ ನಡೆಸಿದ್ದಾರೆ.